ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಸೂಪರ್ ಸೀಡ್?, ಇಂದು ಅಧಿಕೃತ ಆದೇಶ

|
Google Oneindia Kannada News

ಬೆಂಗಳೂರು, ಏ. 17 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಹೇಗಾದರೂ ಮುಂದೂಡಬೇಕು ಎಂದು ಚಿಂತಿಸುತ್ತಿರುವ ಸರ್ಕಾರ ಪಾಲಿಕೆಯನ್ನು ಸೂಪರ್ ಸೀಟ್ ಮಾಡಲು ಮುಂದಾಗಿದೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿದ್ದು ಶನಿವಾರ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಬಿಬಿಎಂಪಿಯಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಸರ್ಕಾರ ಐಎಎಸ್‌ ಅಧಿಕಾರಿ ರಾಜೇಂದ್ರ ಕುಮಾರ್ ಕಠಾರಿಯಾ ನೇತೃತ್ವದ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯ ವರದಿಯನ್ನು ಆಧಾರವಾಗಿಟ್ಟುಕೊಂಡು ಪಾಲಿಕೆಯನ್ನು ಸೂಪರ್ ಸೀಡ್ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. [ಬಿಬಿಎಂಪಿ ಚುನಾವಣೆ : ಸರ್ಕಾರಕ್ಕೆ ಹಿನ್ನಡೆ]

shanthakumari

ವಿಧಾನಸೌಧದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದೆ. ಬಿಬಿಎಂಪಿಯನ್ನು ಸೂಪರ್ ಸೀಡ್ ಮಾಡಿದರೆ ಚುನಾವಣೆಯನ್ನು ಆರು ತಿಂಗಳ ಕಾಲ ಮುಂದೂಡಬಹುದು ಎಂದು ಚರ್ಚೆ ನಡೆಸಲಾಗಿದೆ. [ಬಿಬಿಎಂಪಿ ವಿಭಜನೆ : ಏ.20ಕ್ಕೆ ವಿಶೇಷ ಅಧಿವೇಶನ]

ನೋಟಿಸ್ ಬಂದಿತ್ತು : ರಾಜೇಂದ್ರ ಕುಮಾರ್ ಕಠಾರಿಯಾ ನೇತೃತ್ವದ ಸಮಿತಿಯ ವರದಿ ಅನ್ವಯ ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿತ್ತು. ಪಾಲಿಕೆಯನ್ನು ಏಕೆ ಸೂಪರ್ ಸೀಡ್ ಮಾಡಬಾರದು ಎಂದು ಪ್ರಶ್ನಿಸಿತ್ತು. ಪಾಲಿಕೆಯ ಸದಸ್ಯರ ಅವಧಿ ಏ.22ಕ್ಕೆ ಕೊನೆ ಗೊಳ್ಳಲಿದ್ದು ಅವಧಿಗೂ ಮುಂಚೆ ಸರ್ಕಾರ ಸೂಪರ್ ಸೀಡ್ ಮಾಡಲು ನಿರ್ಧರಿಸಿ ನೋಟಿಸ್ ಜಾರಿಗೊಳಿಸಿತ್ತು.

ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಇಲಾಖೆ ನೀಡಿರುವ ನೋಟಿಸ್‌ಗೆ ಉತ್ತರಿಸಲು ಕಾಲಾವಕಾಶ ಕೋರುವ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಸರ್ಕಾರ ಬಿಬಿಎಂಪಿ ಅವ್ಯವಹಾರಗಳ ಕುರಿತ ಕಠಾರಿಯಾ ವರದಿ ಬಗ್ಗೆ ಸಿಐಡಿ ತನಿಖೆ ನಡೆಸಲು ತೀರ್ಮಾನ ಕೈಗೊಂಡಿತ್ತು. ಈಗ ಪಾಲಿಕೆ ಚುನಾವಣೆಯನ್ನು ಮುಂದೂಡಲು ಸೂಪರ್ ಸೀಡ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

English summary
The State Cabinet is decided on Friday to supersede the Bruhat Bangalore Mahanagara Palike (BBMP) Council.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X