ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂಜಿನಿಯರಿಂಗ್, ವೈದ್ಯ ಶಿಕ್ಷಣ ಶುಲ್ಕ ದುಬಾರಿ

|
Google Oneindia Kannada News

ಬೆಂಗಳೂರು, ಮೇ 28 : ಇಂಜಿನಿಯರಿಂಗ್ ಮತ್ತು ವೈದ್ಯಕೀಯ ವೃತ್ತಿಪರ ಕೋರ್ಸ್‌ಗಳ ಸೀಟು ಹಂಚಿಕೆ ಕುರಿತು ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವೆ ಒಪ್ಪಂದವಾಗಿದ್ದು 2015-16ನೇ ಸಾಲಿನಿಂದಲೇ ಶುಲ್ಕ ಶೇ 40ರಷ್ಟು ಹೆಚ್ಚಳವಾಗಲಿದೆ.

ಬುಧವಾರ ಉನ್ನತ ಶಿಕ್ಷಣ ಇಲಾಖೆ ಹಾಗೂ ಖಾಸಗಿ ವೃತ್ತಿ ಶಿಕ್ಷಣ ಕಾಲೇಜುಗಳ ಒಕ್ಕೂಟ 'ಕಾಮೆಡ್‌-ಕೆ' ಸರ್ವಸಮ್ಮತ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಕಾಮೆಡ್‌-ಕೆ ವ್ಯಾಪ್ತಿಯ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ‌ಸೀಟಿನ‌ ಶುಲ್ಕ ಸುಮಾರು 13 ಸಾವಿರ, ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಸರ್ಕಾರಿ ಕೋಟಾ ಪ್ರವೇಶ ಶುಲ್ಕ ಶೇ 20 ರಷ್ಟು ಹೆಚ್ಚಾಗಲಿದೆ.

medical

ಈಗ ಹೆಚ್ಚಳವಾಗಲಿರುವುದು ಬೋಧನಾ ಶುಲ್ಕಗಳು ಮಾತ್ರ. ವಿದ್ಯಾರ್ಥಿಗಳು ಪ್ರವೇಶದ ಸಂದರ್ಭದಲ್ಲಿ ಪಾವತಿಸುವ ವಿಶ್ವವಿದ್ಯಾಲಯ ಶುಲ್ಕವನ್ನು ಪ್ರತ್ಯೇಕ ವಾಗಿ ಪಾವತಿಸಬೇಕಾಗುತ್ತದೆ. ಸದ್ಯ ವಿವಿ ಶುಲ್ಕ 3,096 ಇದೆ. ಇದನ್ನು ಹೆಚ್ಚಿಸುವ ಸಂಬಂಧ ಯಾವುದೇ ನಿರ್ಧಾರ ಕೈಗೊಂಡಿಲ್ಲ. [ವೈದ್ಯಕೀಯ ಕೋರ್ಸ್ ಶುಲ್ಕ ಹೆಚ್ಚಳದ ಆದೇಶ ವಾಪಸ್]

ಈ ಒಪ್ಪಂದದಿಂದಾಗಿ ಶುಲ್ಕ ಏರಿಕೆ ಕುರಿತು ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವೆ ನಡೆಯುತ್ತಿದ್ದ ಹಗ್ಗಜಗ್ಗಾಟ ಅಂತ್ಯಗೊಂಡಿದೆ. ಕೆಲವು ದಿನಗಳ ಹಿಂದೆ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಶುಲ್ಕಗಳನ್ನು ಏರಿಕೆ ಮಾಡಿ ನಂತರ ಅದನ್ನು ಸರ್ಕಾರ ವಾಪಸ್ ಪಡೆದಿತ್ತು.

ಹಳೆ ಶುಲ್ಕ ಎಷ್ಟಿತ್ತು?
ಇಂಜಿನಿಯರಿಂಗ್ - 38,090
ವೈದ್ಯಕೀಯ - 46,000
ದಂತ ವೈದ್ಯ - 28,590

ಪರಿಷ್ಕೃತ ಶುಲ್ಕಗಳು
ಇಂಜಿನಿಯರಿಂಗ್ - 45,000
ವೈದ್ಯಕೀಯ - 55,000
ದಂತ ವೈದ್ಯ - 38,000

English summary
Karnataka government announced fee hike for Medical, Engineering courses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X