ಅಂತರ್ಜಾಲದಲ್ಲಿ ಕಾವೇರಿಗಾಗಿ ಹರಿದಾಡಿದ ಬೆಸ್ಟ್ ಟ್ರಾಲ್ಸ್

By:
Subscribe to Oneindia Kannada

ಬೆಂಗಳೂರು, ಸೆ. 09: ಕಾವೇರಿ ನೀರಿಗಾಗಿ ನಡೆದಿರುವ ಕರ್ನಾಟಕ ಬಂದ್ ಅಸಲಿಗೆ ಯಾರ ವಿರುದ್ಧ? ಯಾರ ಪರ? ಇದಕ್ಕೆ ಏನು ಪರಿಹಾರ? ಪಕ್ಕದ ರಾಜ್ಯ ಕೇಳಿದ್ದೇನು? ನಾವು ನೀಡಬೇಕಾಗಿದ್ದೇನು? ಬಂದ್ ವೇಳೆ ಯಾರು ಏನು ಮಾಡ್ತಾ ಇದ್ರು? ಫೇಸ್ ಬುಕ್ ಟ್ರಾಲ್ ಪುಟದಲ್ಲಿ ಎಲ್ಲಾಪ್ರಶ್ನೆಗೂ ಉತ್ತರ ಸಿಗುತ್ತಿದೆ.

ಎಲ್ಲಾ ಮಾಹಿತಿಗಳನ್ನು ಒಂದು ಚಿತ್ರದಲ್ಲಿ ಎರಡು ವಾಕ್ಯಗಳ ಪೋಣಿಸಿ ಚುರುಕು ಮುಟ್ಟಿಸುವಂತೆ ಮಾಡಬಲ್ಲ ಚಿತ್ರಗಳೇ ಟ್ರಾಲ್ಸ್, ಮೀಮ್ಸ್. ಕನ್ನಡ ಪರ ಟ್ರಾಲ್ಸ್ ಗಳು ಸಾಮಾಜಿಕ ಜಾಲ ತಾಣಗಳಲ್ಲಿ ಇಂದು ಮಾಹಿತಿ ಹಾಗೂ ಮನರಂಜನೆಯ ಮುಖ್ಯ ಸಾಧನಗಳಾಗಿವೆ.

ಐಟಿ ಬಿಟಿ ಕಂಪನಿಗಳಲ್ಲಿರುವ ಕನ್ನಡಿಗರು ಬಂದ್ ದಿನ ಕನ್ನಡ ಪರ ಘೋಷಣೆ, ಟ್ರಾಲ್, ಮೀಮ್ಸ್, ಟ್ವೀಟ್ಸ್, ಸಂದೇಶಗಳನ್ನು ಹರಿಯುವಂತೆ ಮಾಡಿದ್ದಾರೆ. ತಿಳಿಯದವರಿಗೆ ತಿಳಿ ಹೇಳಿದ್ದಾರೆ. ಕುಟುಕಲು ಬಂದವರಿಗೆ ಅಲ್ಲೇ ತಿರುಗೇಟು ನೀಡಿದ್ದಾರೆ. [LIVE: ಸುಪ್ರೀಂಕೋರ್ಟ್ ಜಡ್ಜ್ ಗಳ ವಿರುದ್ಧ ಮಂಡ್ಯದಲ್ಲಿ ಪ್ರಕರಣ]

ಟ್ರಾಲ್ ಹೈಕ್ಳು, ಬೆಂಗಳೂರು ಟ್ರಾಲ್ಸ್, ಟ್ರಾಲ್ಸ್ ಕರ್ನಾಟಕ, ಟ್ರಾಲ್ಸ್ ಅಣ್ತಮ್ಮಸ್, ಬೆಂಗ್ಳೂರು ಮೀಮ್ಸ್, ಕುಡ್ಲ ಟ್ರಾಲ್ಸ್ ಹೀಗೆ ಅನೇಕ ಟ್ರಾಲ್ಸ್ ,ಮೀಮ್ಸ್ ಪುಟಗಳು ತಮ್ಮದೇ ಆದ ರೀತಿಯಲ್ಲಿ ಜಾಗೃತಿ ಹಾಗೂ ಮನರಂಜನೆ ನೀಡುತ್ತಾ ಬಂದಿವೆ.

ಫೇಸ್ ಬುಕ್ ನಿಂದ ಹಾರಿ ರಸ್ತೆಗಿಳಿದ ಸದಸ್ಯರು

ಅಷ್ಟೇ ಅಲ್ಲದೆ, ಈ ಟ್ರಾಲ್ಸ್ ಹಾಗೂ ಮೀಮ್ಸ್ ಪುಟದ ಸದಸ್ಯರು ಕೆಲವರು ಕನ್ನಡ ಪರ ಹೋರಾಟಕ್ಕೂ ಕೈಜೋಡಿಸಿದ್ದಾರೆ. ಕೆಲ ಸದಸ್ಯರು ಟೌನ್ ಹಾಲ್ ಹಾಗೂ ಫ್ರೀಡಂ ಪಾರ್ಕ್ ಬಳಿ ಶುಕ್ರವಾರ(ಸೆಪ್ಟೆಂಬರ್ 09) ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. [ವಿಡಿಯೋ ಲೈವ್ ಪುಟ ಪೇಜ್ ನಲ್ಲಿ ಲಭ್ಯ]

ಟ್ರಾಲ್ ಪುಟದ ಸದಸ್ಯರೇ ವರದಿಗಾರರಾದರು

ಬೆಂಗಳೂರಿನ ಟೌನ್ ಹಾಲ್ ಬಳಿ ಪ್ರತಿಭಟನೆಯ ನಡುವೆ ಫೇಸ್ ಬುಕ್ ಲೈವ್ ವಿಡಿಯೋ ಮೂಲಕ ನೇರ ವಿಡಿಯೋ ವರದಿ ನೀಡಿದರು. ಟ್ರಾಲ್ ಪೇಜ್ ಪುಟದ ಸದಸ್ಯರು, ಸಮಾನ ಮನಸ್ಕರ ಕನ್ನಡಿಗರು ಪ್ರತಿಭಟನಾ ನಿರತರ ಅಭಿಪ್ರಾಯಗಳನ್ನು ಸಂಗ್ರಹಿಸಿ ವರದಿ ಮಾಡಿದರು. ಟಿವಿ ಚಾನೆಲ್ ಗಳ ಹಣೆಬರಹ ಬರೆದ ಸಿಟಿಜನ್ ಜರ್ನಲಿಸ್ಟ್ ಗಳು

ಮಾತು ತಪ್ಪಿದ ಐಟಿ ಟೆಕ್ ಪಾರ್ಕ್ ಗಳು

ಎಲೆಕ್ಟ್ರಾನಿಕ್ ಸಿಟಿ, ವೈಟ್ ಫೀಲ್ಡ್, ಮಾನ್ಯತಾ ಟೆಕ್ ಪಾರ್ಕ್, ಬೃಂದಾವನ ಟೆಕ್ ಪಾರ್ಕ್, ಬಾಗ್ ಮನೆ ಟೆಕ್ ಪಾರ್ಕ್ ಗಳಲ್ಲಿರುವ ಕಂಪನಿಗಳು ರಜೆ ನೀಡಲು ಮುಂದಾಗಿರುವುದಾಗಿ ಅಲ್ಲಿನ ಮುಖ್ಯಸ್ಥರು ಘೋಷಿಸಿದ್ದರು. ಆದರೆ, ಮಾನ್ಯತಾ ಟೆಕ್ ಪಾರ್ಕ್, ಎಲೆಕ್ಟ್ರಾನಿಕ್ ಸಿಟಿಯ ಕೆಲ ಕಂಪನಿಗಳು ಎಂದಿನಂತೆ ಉದ್ಯೋಗ ನಿರತರಾಗಿದ್ದು ಕರವೇ ಆಕ್ರೋಶ ವ್ಯಕ್ತ ಪಡಿಸಿದ್ದು ಇಲ್ಲಿ ಸ್ಮರಿಸಬಹುದು. ಜೊತೆಗೆ ಬಂದ್ ಗೆ ಚಕ್ಕರ್ ಹಾಕಿದ ಅಂಬರೀಶ್ ರನ್ನು ಟ್ರಾಲ್ ಮಾಡಲಾಗಿದೆ [ ಬೈದ ಮೇಲೆ ಉಲ್ಟಾ ಹೊಡೆದ ಬಯೋಕಾನ್ ಕಿರಣ್ ಶಾ]

ಪೂರ್ಣಚಂದ್ರ ತೇಜಸ್ವಿಗಾಗಿ ಮಿಡಿದ ಫೇಸ್ ಬುಕ್ ಮಂದಿ

ಈ ಸಮಯದಲ್ಲಿ ದಿವಂಗತ ಸಾಹಿತಿ ಪೂರ್ಣಚಂದ್ರ ತೇಜಸ್ವಿಅವರು ಹೇಳಿದ ತೂಕದ ಮಾತುಗಳನ್ನು ಹಂಚಿಕೊಂಡ ಫೇಸ್ ಬುಕ್ ಮಂದಿ [ಮಂಡ್ಯದಲ್ಲಿ ಶೇ90 ರಷ್ಟು ಕೃಷಿಕಾರ್ಯ ಸಂಪೂರ್ಣ: ರಮ್ಯಾ]

ಕಾವೇರಿ ಪರ ಹೋರಾಟಾಲ್ಲಿ ನಟ ದರ್ಶನ್

ಕಾವೇರಿ ಪರ ಹೋರಾಟದಲ್ಲಿ ನಟ ದರ್ಶನ್ ತೂಗುದೀಪ ಅವರು ಗುರುವಾರವೇ ಪಾಲ್ಗೊಂಡಿದ್ದರು. ಬಂದ್ ದಿನ ನಡೆದ ಚಲನಚಿತ್ರರಂಗದ ಪ್ರತಿಭಟನೆ (ಕೆಪಿಎಸ್ ಸಿ ಕಚೇರಿ ಮುಂಭಾಗ)ಯಲ್ಲಿ ದರ್ಶನ್ ಪಾಲ್ಗೊಂಡಿರಲಿಲ್ಲ. ದರ್ಶನ್ ಅವರು ಕಾವೇರಿಗಾಗಿ, ಮಂಡ್ಯಕ್ಕಾಗಿ ರಸ್ತೆಗಿಳಿದಿದ್ದಕ್ಕೆ ಒಂದು ಟ್ರಾಲ್ [ಕದ್ದು ಮುಚ್ಚಿ ಕೆಲ್ಸ, ಟೆಕ್ಕಿಗಳಿಗೆ ಬಿಸಿ ಮುಟ್ಟಿಸಿದ ಕನ್ನಡಿಗರು]

ಕಿರಿಕ್ ಕೀರ್ತಿ ವಿಡಿಯೋ ಜನಪ್ರಿಯತೆಯಲ್ಲಿ ನಂ.1

ಫೇಸ್ ಬುಕ್ಕಿನಲ್ಲಿ ಜನಪ್ರಿಯತೆ ಗಳಿಸಿರುವ ಕನ್ನಡ ಪರ ಕಾರ್ಯಕರ್ತ ಕಿರಿಕ್ ಕೀರ್ತಿ ಹಾಗೂ ಸಂಗಡಿಗರು ಕೋರಮಂಗಲದ ಅನೇಕ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕದ್ದು ಮುಚ್ಚಿ ಕೆಲ್ಸ ಮಾಡುತ್ತಿದ್ದ ಟೆಕ್ಕಿಗಳನ್ನು ಹೊರಕ್ಕೆ ಕರೆಸಿ ಬಂದ್ ಏಕೆ? ಕಾವೇರಿ ನೀರಿನ ಅಗತ್ಯದ ಬಗ್ಗೆ ಪಾಠ ಮಾಡಿದ್ದಾರೆ. ಕಿರಿಕ್ ಕೀರ್ತಿ ಪುಟದಲ್ಲಿ ಬಂದ ಲೈವ್ ವಿಡಿಯೋಗಳನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಚಿತ್ರದಲ್ಲಿ ಕುಡ್ಲ ಪೇಜ್ ನಲ್ಲಿ ಬಂದ್ ಗೆ ಬೆಂಬಲ ವಿಲ್ಲಎಂಬ ಘೋಷಣೆ

ಬೆಂಗಳೂರಿನ ತಮಿಳರಿಗೆ ತಮಿಳ್ ಕನ್ನಡತಿಯಿಂದ ಪಾಠ

ಬೆಂಗಳೂರಿನಲ್ಲಿದ್ದು, ಇಲ್ಲಿನ ನೆಲ, ಜಲ, ಭಾಷೆಗೆ ಗೌರವ ಸಲ್ಲಿಸದೆ ಕಾಲು ಕೆರೆದುಕೊಂಡು ಜಗಳವಾಡುವ ಕುಹಕಿಗಳಿಗೆ ತಮಿಳು ಭಾಷೆಯಲ್ಲೇ ಬುದ್ಧಿ ಹೇಳಿದ ಬೆಂಗಳೂರು ನಿವಾಸಿ ತಮಿಳುನಾಡಿನ ಮೂಲದ ಮಹಿಳೆ

ಜಯಲಿತಾರಿಗೆ ಪುಕ್ಕಟೆ ಬೈಗುಳಗಳ ಮಹಾಪೂರ

ಜಯಲಿತಾರಿಗೆ ಪುಕ್ಕಟೆ ಬೈಗುಳಗಳ ಮಹಾಪೂರ ಸಿಕ್ಕಿದೆ. ಕುಡಿಯಲು ನೀರಿಲ್ಲದ ಪರಿಸ್ಥಿತಿಯಲ್ಲಿ ಕರ್ನಾಟಕ ಒದ್ದಾಡುತ್ತಿದ್ದರೂ ಈ ಪ್ರಾಣಿ(ಜಯಲಲಿತಾ) ಗೆ ನೀರು ಬೇಕೆಂತೆ. ಇದೆಂಥ ಕರ್ಮ ಎಂದು ಟ್ರಾಲ್ ಮಾಡಲಾಗಿದೆ

English summary
Karnataka Bandh: Trolls and memes of many pro Kannada Troll Facebook page tried to educate the netizens with facts and figures about Cauvery Dispute.Some trolls also blasted those who didn't took part in Bandh and refuse to support Karnataka.
Please Wait while comments are loading...