ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇತಿಹಾಸ ನಿರ್ಮಿಸಿದ ದೀಕ್ಷಾ ಲರ್ನಿಂಗ್ ಸೆಂಟರ್ ವಿದ್ಯಾರ್ಥಿಗಳು

|
Google Oneindia Kannada News

ಬೆಂಗಳೂರು, ಮೇ.19: ನಗರದ ದೀಕ್ಷಾ ಲರ್ನಿಂಗ್ ಸೆಂಟರ್ ನ ವಿದ್ಯಾರ್ಥಿಗಳು ಪಿಯು ಫಲಿತಾಂಶದಲ್ಲಿ ಅಪರಿಮಿತ ಸಾಧನೆ ಮಾಡಿದ್ದಾರೆ. 7 ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಮತ್ತು ಒಬ್ಬ ವಾಣಿಜ್ಯ ವಿದ್ಯಾರ್ಥಿ ರಾಜ್ಯದ ಟಾಪರ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇಲ್ಲಿ ವ್ಯಾಸಂಗ ನಡೆಸಿದ 1055 ಜನರಿಗೆ ಅತ್ಯುತ್ತಮ ಶ್ರೇಣಿ ಸಿಕ್ಕಿದೆ.

ಊ ಫಲಿತಾಂಶ ಕಾಲೇಜು ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳಲ್ಲಿ ಹೊಸ ಹುರುಪು ತಂದಿದ್ದು ವಿದ್ಯಾಲಯದ ಹಿರಿಮೆಗೆ ಮತ್ತಷ್ಟು ಹೆಚ್ಚಾಗಿದೆ. ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ.[ದ್ವಿತೀಯ ಪಿಯುಸಿ ಫಲಿತಾಂಶ 2015: ಹೈಲೈಟ್ಸ್]

puc

ದೀಕ್ಷಾ ನೆಟ್ ವರ್ಕ್ ಸ್ಥಾಪಕ ಡಾ, ಶ್ರೀಧರ್ ಮಾತನಾಡಿ, ಈ ಫಲಿತಾಂಶ ನಮ್ಮ ಎರಡು ವರ್ಷದ ನಿರಂತರ ಪ್ರರಿಶ್ರಮದ ಪ್ರತೀಕ. ಆರಂಭದಿಂದಲೇ ಸ್ಪಷ್ಟ ಗುರಿ ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದು ಫಲ ನೀಡಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.[ಪಿಯು ಟಾಪರ್ ಕುಡ್ಲದ ರಶ್ಮಿತಾ ಜೊತೆ ಚಿಟ್ ಚಾಟ್]
puc

ವಿಜ್ಞಾನ ವಿಭಾಗ: ಸಂಗೀತಾ ವಿಎಸ್(590, ರಾಜ್ಯಕ್ಕೆ 6 ನೇ ಸ್ಥಾನ.) ಬಾಲಾಜಿ ವಿಘ್ನೇಶ್ (589, ರಾಜ್ಯಕ್ಕೆ 7ನೇ ಸ್ಥಾನ), ಈಶ್ವರಿ ( ಎಸ್ ಡಿಸಿ ಕಾಲೇಜ್ ಕೋಲಾರ) ಸ್ವಾತಿ ಎಸ್ ಭಟ್ (ಚೇತನ ಪಿಯು ಕಾಲೇಜು) (588 ರಾಜ್ಯಕ್ಕೆ 8ನೇ ಸ್ಥಾನ) ಅನುಷಾ ಕಾಮತ್, ಶ್ರೀ ಲಕ್ಷ್ಮೀ, ಪ್ರೀತಿ ಕೆ, (586, ರಾಜ್ಯಕ್ಕೆ 10ನೇ ಸ್ಥಾನ).[ಪಿಯು ಜಿಲ್ಲಾವಾರು ರಿಸಲ್ಟ್: ದಕ್ಷಿಣ ಕನ್ನಡ 1, ಗದಗ 31]
puc

ವಾಣಿಜ್ಯ ವಿಭಾಗ: ಮಾಳವಿಕ ಎಸ್ ನಾಯರ್ (ಸುರಾನಾ ಪಿಯು ಕಾಲೇಜು,590, ರಾಜ್ಯಕ್ಕೆ 4ನೇ ಸ್ಥಾನ).
ಶಿಕ್ಷಕರ ಉತ್ತರ ಮಾರ್ಗದರ್ಶನ ನಮ್ಮ ಸಾಧನೆಗೆ ಕಾರಣವಾಯಿತು. ನನಗೆ ವಿಐಟಿಯಲ್ಲಿ ಸೀಟು ಸಿಕ್ಕಿದೆ. ಪಾಲಕರು ಮತ್ತು ಶಿಕ್ಷಕರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ವಿಜ್ಞಾನ ವಿಭಾಗದ ಟಾಪರ್ ಸಂಗೀತಾ ತಿಳಿಸಿದ್ದಾರೆ.[ದ್ವಿತೀಯ ಪಿಯು ಫಲಿತಾಂಶ : ವಿದ್ಯಾರ್ಥಿಗಳ ಯಶಸ್ಸಿನ ಕಥೆ]

English summary
Students of Deeksha Center for Learning PU College created a new history in PU results. 7 Science students and 1 commerce student in the TOP 10 scores of the state, 1055 students scored distinctions and 302 students scored centum in core subjects Science and Commerce. In Science Stream, Sangeetha V S, student of Deeksha Center for Learning PU College scored 590 out of 600(6th Highest in the State).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X