ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ಯಾಂಕಿಂಗ್ ಪರೀಕ್ಷೆ ಎದುರಿಸುವುದು ಹೇಗೆ? ಕರವೇಯಿಂದ ಮಾರ್ಗದರ್ಶನ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 16: ಕನ್ನಡಿಗ ಉದ್ಯೋಗಾರ್ಥಿಗಳ ಅನುಕೂಲಕ್ಕಾಗಿ ಕಳೆದ ಎರಡು ವರ್ಷಗಳಿಂದ ಹಲವಾರು "ಉದ್ಯೋಗ ಮಾರ್ಗದರ್ಶನ ಶಿಬಿರ"ಗಳನ್ನು ಯಶಸ್ಚಿಯಾಗಿ ಆಯೋಜಿಸಿಕೊಂಡು ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆಯ "ಐಟಿ ಘಟಕ" ಈ ಬಾರಿ ಬ್ಯಾಂಕಿಂಗ್ ಪರೀಕ್ಷೆ ಬರೆಯುವ ಕನ್ನಡದ ಅಭ್ಯರ್ಥಿಗಳಿಗೆ ನೆರವಾಗಲು ಉಚಿತ ಮಾರ್ಗದರ್ಶನ ಶಿಬಿರವನ್ನು ಹಮ್ಮಿಕೊಂಡಿದೆ.

ಕರ್ನಾಟಕ ರಕ್ಷಣಾ ವೇದಿಕೆಯು ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ನಾಡು ನುಡಿಯ ವಿಚಾರವಾಗಿ ಕಳೆದ 15 ವರ್ಷಗಳಿಂದ ಹೋರಾಟಗಳನ್ನು ಮಾಡಿಕೊಂಡು ಬರುತ್ತಿರುವುದು ನಾಡಿನ ಜನತೆಗೆ ತಿಳಿದಿದೆ.

ಬೆಂಗಳೂರು ಮಹಾನಗರದಲ್ಲಿ ಸುಮಾರು ಎರಡು ದಶಕಗಳ ಹಿಂದೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆದ ಬೆಳವಣಿಗೆಗಳಿಂದ ಹೊಸ ಬ್ಯಾಂಕ್ ಗಳು ಹಾಗು ಸಾವಿರಾರು ಅವಕಾಶಗಳು ವರ್ಷದಿಂದ ವರ್ಷಕ್ಕೆ ಹುಟ್ಟಿಕೊಳ್ಳುತ್ತಿವೆ. ಈ ಅವಕಾಶಗಳಿಗೆ ದೇಶದ ಎಲ್ಲ ಭಾಗಗಳಿಂದಲೂ ಜನರು ಅರ್ಜಿ ಸಲ್ಲಿಸುತ್ತಿದ್ದಾರೆ.

ಕರ್ನಾಟಕದಲ್ಲಿನ ಉದ್ಯೋಗಗಳಲ್ಲೂ ಸಹ ಹೊರ ರಾಜ್ಯದವರು ಹೆಚ್ಚಾಗಿ ಆಯ್ಕೆಯಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಈ ಹೊತ್ತಿನಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ ವಿದ್ಯಾಭ್ಯಾಸ ಪಡೆದು ತಮ್ಮ ವಿದ್ಯಾಭ್ಯಾಸಕ್ಕೆ ಸರಿಹೊಂದುವ ಬ್ಯಾಂಕ್ ಉದ್ಯೋಗವನ್ನು ಹುಡುಕುತ್ತಿರುವ ಕನ್ನಡಿಗರಿಗೆ "ಬ್ಯಾಂಕಿಂಗ್ ಪರೀಕ್ಷೆಗಳನ್ನು ಎದುರಿಸುವುದು ಹೇಗೆ?" ಎನ್ನುವ ಮಾರ್ಗದರ್ಶನ ಶಿಬಿರವನ್ನು ಆಯೋಜಿಸಲಾಗಿದೆ.

Karave IT unit Guidance Camp for How to prepare banking exam


ವಿವರಗಳು ಹೀಗಿವೆ:
ದಿನಾಂಕ: ಆಗಸ್ಟ್ 20, 2017, ಭಾನುವಾರ
ಸಮಯ: ಮಧ್ಯಾಹ್ನ 3:30 ರಿಂದ 6:30 ರವರೆಗೆ

ಸ್ಥಳ: ಬಿ.ಎಂ.ಶ್ರೀ ಕಲಾ ಭವನ (ಸ್ಮಾರಕ ಪ್ರತಿಷ್ಠಾನ) , 3 ನೇ ಮುಖ್ಯ ರಸ್ತೆ, ಏನ್.ಆರ್.ಕಾಲೋನಿ , ಬಸವನಗುಡಿ, ಬೆಂಗಳೂರು

ನೊಂದಣಿ: ಶಿಬಿರದಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ವಿದ್ಯಾರ್ಥಿಗಳು ಈ ನೋಂದಾವಣಿ ಪತ್ರವನ್ನು ತುಂಬಬೇಕು.
(https://tinyurl.com/krv-udyoga) ಈ ಲಿಂಕ್ ಕ್ಲಿಕ್ ಮಾಡಿ

ಕರ್ನಾಟಕ ರಕ್ಷಣಾ ವೇದಿಕೆ ಐಟಿ ಘಟಕದ ಮುಖ್ಯ ಧ್ಯೇಯೋದ್ದೇಶಗಳು:
1. ಕನ್ನಡಿಗ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಮಾರ್ಗದರ್ಶನ ನೀಡುವುದು.
2. ಕನ್ನಡಿಗ ಯುವಕ ಯುವತಿಯರಿಗೆ ಸಹಕಾರಿಯಾಗುವಂತಹ ಉದ್ಯೋಗ ಮಾಹಿತಿ ಕೇಂದ್ರವನ್ನು ನಡೆಸಲಾಗುತ್ತಿದೆ.
3. ಬೇರೆ ಬೇರೆ ಕ್ಷೇತ್ರದಲ್ಲಿರುವ ಉದ್ಯೋಗದ ಅವಕಾಶಗಳನ್ನು ಕನ್ನಡಿಗರಿಗೆ ತಲುಪಿಸುವ ಸಲುವಾಗಿ ಕರವೇ_ಉದ್ಯೋಗ(krv_udyoga) ಎಂಬ ಟ್ವಿಟರ್ ಹ್ಯಾಂಡಲನ್ನು ನಡೆಸಲಾಗುತ್ತಿದೆ.

ಇದು ಕರ್ನಾಟಕ ರಕ್ಷಣಾ ವೇದಿಕೆಯ ಐಟಿ ಘಟಕವು ಕನ್ನಡಿಗರ ಅನುಕೂಲಕ್ಕೋಸ್ಕರ ಉಚಿತವಾಗಿ ಆಯೋಜಿಸುತ್ತಿರುವ ಶಿಬಿರವಾಗಿದೆ.

English summary
Information Technology unit of Karnataka Rakshana Vedike(Karave) has organised a guidance camp on a topic 'How to prepare for Banking exams'. The event is on Aug 20, 2017 at BMSri Kalabhavana, Basavanagudi, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X