ಕರಣಂ ಅವರ 'ಕರ್ಮ' ಇ ಬುಕ್ ರೂಪದಲ್ಲಿ ಈಗ ಲಭ್ಯ

Posted By:
Subscribe to Oneindia Kannada

ಬೆಂಗಳೂರು, ಜುಲೈ 21: ಸಾಹಿತ್ಯ ದಿಗ್ಗಜ ಎಸ್ ಎಲ್ ಭೈರಪ್ಪ ಅವರಿಂದ ಮೆಚ್ಚುಗೆ ಪಡೆದ ಕರಣಂ ಪವನ್ ಪ್ರಸಾದ್ ಅವರ ಚೊಚ್ಚಲ ಕನ್ನಡ ಕಾದಂಬರಿ ಈಗ ಇ-ಬುಕ್ ರೂಪದಲ್ಲಿ ಲಭ್ಯವಿದೆ. ಲಂಡನ್ ಮತ್ತು ಧಾರವಾಡವನ್ನು ಕೇಂದ್ರವಾಗಿರಿಸಿಕೊಂಡು www.vividlipi.com ಅಂತರ್ಜಾಲ ತಾಣದ ಉತ್ಸಾಹಿ ಸಾಹಿತ್ಯಾಸಕ್ತ ತಂಡ "ಕರ್ಮ" ಕಾದಂಬರಿಯ ಇ-ಬುಕ್ ಅನ್ನು ತಮ್ಮ ತಾಣದ ಮೂಲಕ ಎಲ್ಲರಿಗೂ ತಲುಪಿಸಲು ಸಜ್ಜಾಗಿದ್ದಾರೆ.

ಈ ಮೂಲಕದ ಸಾಹಿತ್ಯಾಸಕ್ತರು ಬೆರಳಂಚಿನಲ್ಲಿ ಕಾದಂಬರಿಯನ್ನು ಖರೀದಿಸಿ ಡೌನ್ ಲೋಡ್ ಮಾಡಿಕೊಂಡು ತಮ್ಮ ಎಲೆಕ್ಟ್ರಾನಿಕ್ ಉಪಕರಣದಲ್ಲಿ ಓದಬಹುದಾಗಿದೆ. ಈ ಬಗ್ಗೆ ಮಾತನಾಡಿದ ಲೇಖಕ ಕರಣಂ ಪವನ್ ಪ್ರಸಾದ್, ಇ-ಬುಕ್ ಆವೃತ್ತಿ ಮುಖ್ಯವಾಗಿ ಅನಿವಾಸಿ ಭಾರತೀಯರನ್ನು ಗುರಿಯಾಗಿಸಿಕೊಂಡು ಹೊರ ತರಲಾಗಿದೆ.[ತಮಸ್ಸಿನಿಂದ ಸತ್ಯದ ತೇಜಸ್ಸಿನೆಡೆಗೆ ದಾರಿ ತೋರುವ 'ನನ್ನಿ']

ಮುಂದಿನ ಹಂತದಲ್ಲಿ ನನ್ನ ಇತರ ಕೃತಿಗಳಾದ 'ನನ್ನಿ', 'ಪುರಹರ' ಇವುಗಳನ್ನು ಸಹ ಇ-ಬುಕ್ ಆವೃತ್ತಿಯಲ್ಲಿ ಹೊರತರಲಾಗುವುದು. ಈ ಅಂತರ್ಜಾಲ ತಾಣದಲ್ಲಿ ಪ್ರಚಲಿತದಲ್ಲಿರುವ ಇತರ ಲೇಖಕರಾದ ಯುಆರ್ ಅನಂತಮೂರ್ತಿ, ಗಿರೀಶ್ ಕಾರ್ನಾಡ್, ವಿವೇಕ್ ಶಾನಭಾಗ್ ಅವರ ಕೃತಿಗಳ ಇ-ಪುಸ್ತಕ ಆವೃತ್ತಿ ಕೂಡ ಲಭ್ಯವಿದೆ ಕೊಂಡು ಓದಿ' ಎಂದರು.['ನನ್ನಿ' ಎಂದರೆ ನನ್ ಓರ್ವಳ ಸತ್ಯಾನ್ವೇಷಣೆಯ ಕಥೆ]

Karanam Pavan Prasad Karma novel now available as e-Book Vividlipi

* ಎಲ್ಲಿ ಖರೀದಿಸಬಹುದು : ಇ- ಪುಸ್ತಕಗಳನ್ನು ಖರೀದಿಸಿ...ಓದಿರಿ..ವಿವಿಡ್ಲಿಪಿಯಲ್ಲಿ.. www.vividlipi.com
* ಕರ್ಮ ಕೃತಿ ಡೌನ್ ಲೋಡ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

* ಆಂಡ್ರಾಯ್ಡ್ ಮತ್ತು ವಿಂಡೋಸ್ ಡೆಸ್ಕ್ ಟಾಪ್ ಅಪ್ಲಿಕೇಷನ್ ರೂಪದಲ್ಲಿ ಲಭ್ಯ
* ಶೀಘ್ರದಲ್ಲಿ ಧ್ವನಿ ಮುದ್ರಿತ ಪುಸ್ತಕಗಳು (ಆಡಿಯೋ ಪುಸ್ತಕಗಳು) ವಿವಿಡ್ಲಿಪಿಯಲ್ಲಿ...
* ಗೂಗಲ್ ಪ್ಲೇ ಸ್ಟೋರ್ ನಲ್ಲಿರುವ ವಿವಿಡ್ ಲಿಪಿ ಅಪ್ಲಿಕೇಷನ್ ಡೌನ್ ಲೋಡ್ ಲಿಂಕ್ ಇಲ್ಲಿದೆ[ಭೈರಪ್ಪ ಹೊಗಳಿದ 'ಕರ್ಮ' ಕೃತಿ ವಿಶ್ವದೆಲ್ಲೆಡೆ ಲಭ್ಯ]

* ವಿವಿಡ್ಲಿಪಿ ತಂಡ ಆನ್ ಲೈನ್ ಪುಸ್ತಕ ಮಾರಾಟವಲ್ಲದೆ, ಸಾಹಿತ್ಯ ಹಾಗೂ ನಾಟಕಗಳ ಲೈವ್ ಸ್ಟ್ರೀಮಿಂಗ್ ಗೂ ಮುಂದಾಗಿದೆ.

ಕರ್ಮ ಕೃತಿ ಬಗ್ಗೆ : ಭೌತಿಕವಾಗಿಯೂ ಪಾರಮಾರ್ಥಿಕವಾಗಿಯೂ ಶ್ರದ್ಧೆ ಮತ್ತು ನಂಬಿಕೆಯ ನಡುವಿನ ವ್ಯತ್ಯಾಸ ಇದ್ದೇ ಇದೆ. ಈ ವ್ಯತ್ಯಾಸವನ್ನು ಪ್ರಾಯೋಗಿಕವಾಗಿ ಈ ಕೃತಿಯಲ್ಲಿ ಚರ್ಚಿಸಲಾಗಿದೆ.

ಪ್ರಸ್ತುತ ನಗರ ಸಮಾಜದಲ್ಲಿನ ವ್ಯಕ್ತಿ ತನ್ನ ತಂದೆಯ ಸಾವಿನ ನಂತರ ತನ್ನ ಊರಿಗೆ ಅಪ್ಪನ ಕ್ರಿಯೆ ಮಾಡಲು ಹೋಗಿ ಆ ಅಪರಕ್ರಿಯೆಯ ದಿನಗಳಲ್ಲಿ ಸಂಭವಿಸುವ ತೊಳಲಾಟ, ಭೂತ, ವರ್ತಮಾನಗಳ ಜಗ್ಗಾಟ, ಬಂಧಗಳ ಮನೋ ವ್ಯಾಪಾರ ಇವೆಲ್ಲವನ್ನೂ ಸಮಕಾಲೀನ ಶೈಲಿಯಲ್ಲಿ ಕಟ್ಟಿಕೊಟ್ಟಿರುವ ಕಾದಂಬರಿ ಕರ್ಮ.

ಬಿಡುಗಡೆಯಾದ ಎರಡೇ ವರ್ಷದಲ್ಲಿ ನಾಲ್ಕು ಮುದ್ರಣಗಳನ್ನು ಕಂಡಿರುವ ಈ ಕೃತಿ ಅಪಾರ ಜನಮನ್ನಣೆ ಮತ್ತು ತಾತ್ವಿಕ ಚರ್ಚೆಯನ್ನು ಸಾಹಿತ್ಯ ವಲಯದಲ್ಲಿ ಹುಟ್ಟುಹಾಕಿದೆ. ನಾಟಕಕಾರ ಮತ್ತು ಕಾದಂಬರಿಕಾರರಾದ ಕರಣಂ ಪವನ್ ಪ್ರಸಾದರ ಮೊದಲ ಕಾದಂಬರಿಯಿದು. (ಒನ್ಇಂಡಿಯಾ ಸುದ್ದಿ)

English summary
Karanam Pavan Prasad Karma Kananda novel is now available as e-Book. Interested can download it from website or buy ebooks on www.vividlipi.com and read them in VIVIDLIPI Android or Windows PC Application. Vividlipi website also has collection of e book from various authors UR Ananthamurthy, Girish Karnad, Vivek Shanbhag and others
Please Wait while comments are loading...