ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುರುನಾನಕ್ ಭವನದಲ್ಲಿ ಕನ್ನಡ ನಾಟಕ 'ಶುದ್ಧವಂಶ'

By Prasad
|
Google Oneindia Kannada News

ಬೆಂಗಳೂರು, ಜುಲೈ 20 : ಬೆಂಗಳೂರಿನ ಕನ್ನಡ ನಾಟಕ ಪ್ರೇಮಿಗಳಿಗೆ ಶುಕ್ರವಾರ, ಜುಲೈ 21ರಂದು ರಸದೌತಣ ಕಾದಿದೆ. ಪ್ರದೀಪ್ ತಿಪಟೂರು ನಿರ್ದೇಶನದಲ್ಲಿ 'ರಂಗಧರ್ಮ' ತಂಡ 'ಶುದ್ಧವಂಶ' ಎಂಬ ನಾಟಕವನ್ನು ವಸಂತನಗರದಲ್ಲಿರುವ ಗುರುನಾನಕ್ ಭವನದಲ್ಲಿ ಸಂಜೆ 7 ಗಂಟೆಗೆ ಪ್ರಸ್ತುತಪಡಿಸುತ್ತಿದೆ.

ಶುದ್ಧವಂಶ ನಾಟಕದ ಬಗ್ಗೆ
ಮೂಲತಃ, ಪ್ರೇಮಾನಂದ ಘಜ್ವಿಯವರ ಮರಾಠಿ ನಾಟಕವಾದ ಶುದ್ಧಬೀಜಾಪೋಟಿಯನ್ನು ಕನ್ನಡಕ್ಕೆ ಡಾ.ಡಿ.ಎಸ್.ಚೌಗಲೆಯವರು ಅನುವಾದಿಸಿದ್ದಾರೆ. ಆರ್ಯರು ಹಾಗೂ ನಾಗವಂಶಿಗಳ ನಡುವಿನ ಸಂಘರ್ಷಣೆಯೇ ಈ ನಾಟಕದ ಮೂಲ ವಸ್ತು.

Kannada play Shudhavamsha at Gurunanak Bhavan in Bengaluru

ಪ್ರೊ. ಬಾಳಾ ಸಾಹೇಬ ಪೇಶ್ವೆ, ಒಬ್ಬ ಪೇಶ್ವಾ ಬ್ರಾಹ್ಮಣ, ಹಿಂದುತ್ವವಾದಿ ಹಾಗು ಮನುಧರ್ಮದಲ್ಲಿ ಅಚಲವಾದ ನಂಬಿಕೆಯುಳ್ಳ ಸಮಾಜದ ಗಣ್ಯ ವ್ಯಕ್ತಿ. ಅವನ ಮಗಳಾದ ವೇದಿಕಾ ಒಬ್ಬ ದಲಿತ ಯುವಕ, ಅಂಬೇಡ್ಕರ್ ನ ಅನುಯಾಯಿ ಹಾಗು ಬೌದ್ಧ ಧರ್ಮದಲ್ಲಿ ನಂಬಿಕೆಯಿಟ್ಟಿರುವ ಸಮ್ಯಕ ಎಂಬುವನ ಪ್ರೇಮದೊಳಗೆ ಬೀಳುತ್ತಾಳೆ.

ಮೊದಲ ಬಾರಿಗೆ ಅಮೆರಿಕದಲ್ಲಿ ಜಡಭರತರ 'ಸತ್ತವರ ನೆರಳು'ಮೊದಲ ಬಾರಿಗೆ ಅಮೆರಿಕದಲ್ಲಿ ಜಡಭರತರ 'ಸತ್ತವರ ನೆರಳು'

ಇದೆಲ್ಲದರ ಹೊರತಾಗಿ ವೇದಿಕಾ ಮನುಷ್ಯತ್ವ ಹಾಗೂ ಅಲೌಕಿಕ ಪ್ರೇಮದೊಳಗೆ ನಂಬಿಕೆಯಿಟ್ಟಾಕೆ, ತನ್ನ ದಿವ್ಯ ಪ್ರೇಮವನ್ನು ಪಡೆಯಲು ಹರಸಾಹಸ ಪಡುತ್ತಾಳೆ. ನಾಟಕವು ಈ ಮೂರು ಪಾತ್ರಗಳ ನಡುವಿನ ಸಂಘರ್ಷವನ್ನು ಎಳೆಎಳೆಯಾಗಿ ಬಿಡಿಸುತ್ತಾ, ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ವಾಸ್ತವ ರಾಜಕೀಯ ದ್ವಂದ್ವಗಳನ್ನು ಬಿಚ್ಚಿಡುತ್ತಾ ಸಾಗುತ್ತದೆ.

Kannada play Shudhavamsha at Gurunanak Bhavan in Bengaluru

ರಂಗಧರ್ಮ ಸಂಸ್ಥೆ
ಕಾರಣಾಂತರದಿಂದ ರಾಜ್ಯದ ಮೂಲೆಮೂಲೆಗಳಿಂದ ನಗರಮಾರಿಯ ಸೆಳೆತಕ್ಕೆ ಸಿಕ್ಕು ಬೆಂಗಳೂರು ನಗರವೆಂಬ ಮಾಯಾಂಗನೆಯ ಮನೆಯಲ್ಲಿನ ಆವುದಾವುದೊ ಸಂದಿಗಳಲ್ಲಿ ಸೆರೆಯಾಗಿ ಕಳೆದುಹೋಗುತ್ತಿರುವ ನಾವುಗಳು, ಆ ಭೀತಿಯಿಂದ ಆಚೆ ಬರಲು, ಒಬ್ಬರಿಗೊಬ್ಬರು ಹೆಗಲುಕೊಡಲು, ನಮ್ಮತನವನ್ನು ಸಾಂಸ್ಕೃತಿಕ ಪ್ರಜ್ಞೆಯನ್ನು ಉಳಿಸಿಕೊಳ್ಳಲು ಕಟ್ಟಿರುವ ಸಂಸ್ಥೆಯೇ ರಂಗಧರ್ಮ.

ಮಲೇಷ್ಯಾದಲ್ಲಿಯೂ ಕನ್ನಡಿಗರನ್ನು ರಂಜಿಸಿದ 'ಮುಖ್ಯಮಂತ್ರಿ'ಮಲೇಷ್ಯಾದಲ್ಲಿಯೂ ಕನ್ನಡಿಗರನ್ನು ರಂಜಿಸಿದ 'ಮುಖ್ಯಮಂತ್ರಿ'

ನಿರ್ದೇಶಕರ ಪ್ರದೀಪ್ ತಿಪಟೂರು
ಪ್ರೋಥಿಯೋ ಎಂಬ ರಂಗತಂಡದ ಜೊತೆಗೂಡಿ 1994ರಲ್ಲಿ ಪ್ರದೀಪ್ ತಿಪಟೂರ್ ರವರು ತಮ್ಮ ರಂಗಜೀವನವನ್ನು ಆರಂಭಿಸಿದರು. ನಂತರ ನೀನಾಸಂ ಸೇರಿ ಮೂರು ವರ್ಷಗಳ ಕಾಲ ನಟರಾಗಿ, ಬೆಳಕಿನ ತಂತ್ರಜ್ಞರಾಗಿ ಹೆಸರಾಂತ ರಂಗಕರ್ಮಿಗಳಾದ ಬಿ.ವಿ.ಕಾರಂತ್, ಚಿದಂಬರರಾವ್ ಜಂಬೆ, ಮಣಿಪುರದ ನಾಂಗ್ ತೋಂಬಂ ಪ್ರೇಂಚಂದ್, ಹಾಗೂ ರಘುನಂದನ್ ರ ಜೊತೆಯಲ್ಲಿ ಒಡನಾಡುತ್ತಾ ಭಾರತದ ಹಲವೆಡೆ ನಾಟಕ ಪ್ರದರ್ಶನಗಳನ್ನು ನೀಡಿದರು.

Kannada play Shudhavamsha at Gurunanak Bhavan in Bengaluru

ಪ್ರೋಥಿಯೋನಿಂದ ಹೊರಬಂದು ನಾಡಿನ ಹಲವು ಕಡೆ ಮಕ್ಕಳ ರಂಗಭೂಮಿಯಲ್ಲಿ ಕೆಲಸ ಮಾಡುತ್ತಾ ಹಲವಾರು ಕಾರ್ಯಾಗಾರಗಳನ್ನು ನಡೆಸಿಕೊಟ್ಟಿದ್ದಾರೆ. ಪಕ್ಕದ ಕೇರಳಕ್ಕೆ ತೆರಳಿ ರಂಗ ಸಂಪನ್ಮೂಲ ವ್ಯಕ್ತಿಯಾಗಿ ಹಲವು ಕಾರ್ಯಾಗಾರಗಳನ್ನು ನಡೆಸಿ ಕೊಟ್ಟಿದ್ದಾರೆ. ದೆಹಲಿ, ಕೇರಳ, ಅಸ್ಸಾಂ, ವಿಶಾಖಪಟ್ಟಣಂ ಸೇರಿ ದೇಶದ ಹಲವು ರಂಗ ಉತ್ಸವಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಅನುಭವ ಇವರಿಗೆ ಸೇರುತ್ತದೆ.

Kannada play Shudhavamsha at Gurunanak Bhavan in Bengaluru

ರಂಗಾಯಣದಲ್ಲಿ ಬೆಳಕಿನ ವಿನ್ಯಾಸದ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿ, ರಂಗಾಯಣದ ಅಂತಾರಾಷ್ಟ್ರೀಯ ರಂಗೋತ್ಸವವಾದ ಬಹುರೂಪಿ ಉತ್ಸವಕ್ಕೆ ಬೆಳಕಿನ ತಂತ್ರಜ್ಞರಾಗಿಯೂ ಸಹ ಕೆಲಸ ಮಾಡಿದ್ದಾರೆ. ನಂತರದ ದಿನಗಳಲ್ಲಿ ನಟರಾಗಿ, ನಿರ್ದೇಶಕರಾಗಿ ತಮ್ಮನ್ನು ತಾವು ಸಂಪೂರ್ಣ ತೊಡಗಿಸಿಕೊಂಡು ಕಿರಗೂರಿನ ಗಯ್ಯಾಳಿಗಳು , ಅನುಸಂಧಾನ , ದಿಶಾಂತರ, ಉಧ್ವಸ್ತ, ಗುಣಮುಖ, ಸಂಕ್ರಾಂತಿ ಮುಂತಾದ ನಾಟಕಗಳನ್ನು ಯಶಸ್ವಿಯಾಗಿ ರಂಗಕ್ಕೆ ತಂದ ಹೆಗ್ಗಳಿಕೆ ಪ್ರದೀಪ್ ತಿಪಟೂರರವರದು.

ಈ 22 ವರ್ಷಗಳ ತಮ್ಮ ವೃತ್ತಿ ಜೀವನದಲ್ಲಿ ಪ್ರದೀಪ್ ತಿಪಟೂರ್ ರವರು ಎಲ್ಲಿಯೂ ಒಂದು ಕಡೆ ನಿಲ್ಲದೆ, ದೇಶದ ಹಲವೆಡೆ ಸಂಚರಿಸುತ್ತಾ ರಂಗ ಕೃಷಿಯಲ್ಲಿ ತೊಡಗಿಕೊಂಡು, ತಮ್ಮದೇ ಆದ ರಂಗಶಾಲೆಯನ್ನು ಆರಂಭಿಸಿ ಉತ್ತಮ ನಾಟಕಗಳನ್ನು ರಂಗಭೂಮಿಗೆ ನೀಡಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ತಮ್ಮ ತನು ಮನದಿಂದ ರಂಗಕಾಯಕದಲ್ಲಿ ತೊಡಗಿದ್ದಾರೆ.

English summary
Kannada play Shudhavamsha will be presented by Rangadharma troup at Gurunanak Bhavan in Vasant Nagar in Bengaluru on 21st July at 7 pm. This Kannada play based on Marathi play Shudh Bija Poti is directed by Pradeep Tipatur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X