ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೈಪುರ ಸಾಹಿತ್ಯ ಉತ್ಸವಕ್ಕೆ ಅತಿಥಿಯಾಗಿ ಎಸ್.ಎಲ್ ಭೈರಪ್ಪ

ಭಾರತದ ಹೆಸರಾಂತ ಸಾಹಿತಿಗಳಲ್ಲಿ ಒಬ್ಬರಾಗಿ ನೇಮಕಗೊಂಡಿರು ಭೈರಪ್ಪ ಅವರು ಇದೇ ಮೊದಲ ಬಾರಿಗೆ ಜೈಪುರ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಳ್ಳುವ ಹಿರಿಮೆಗೆ ಪಾತ್ರರಾಗಿದ್ದಾರೆ.

By Mahesh
|
Google Oneindia Kannada News

ಬೆಂಗಳೂರು, 14 ನವೆಂಬರ್ 2016: ಮುಂದಿನ ಜನವರಿಯಲ್ಲಿ ಜೈಪುರದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಖ್ಯಾತಿಯ ಜೈಪುರ ಸಾಹಿತ್ಯ ಉತ್ಸವದಲ್ಲಿ ಕನ್ನಡನಾಡಿನ ಹೆಸರಾಂತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು ಪಾಲ್ಗೊಳ್ಳಲಿದ್ದಾರೆ.

ಭಾರತದ ಹೆಸರಾಂತ ಸಾಹಿತಿಗಳಲ್ಲಿ ಒಬ್ಬರಾಗಿ ನೇಮಕಗೊಂಡಿರು ಭೈರಪ್ಪ ಅವರು ಇದೇ ಮೊದಲ ಬಾರಿಗೆ ಜೈಪುರ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಳ್ಳುವ ಹಿರಿಮೆಗೆ ಪಾತ್ರರಾಗಿದ್ದಾರೆ.

ಕನ್ನಡದ ಹೆಸರಾಂತ ಕಾದಂಬರಿಕಾರರಾಗಿರುವ ಭೈರಪ್ಪ ಅವರು ಭಾರತದಾದ್ಯಂತವಲ್ಲದೇ ಅಮೆರಿಕಾ ಸೇರಿದಂತೆ ಜಗತ್ತಿನ ಹಲವೆಡೆ ಹೆಸರುವಾಸಿಯಾಗಿದ್ದಾರೆ. ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು 2016 ರಲ್ಲಿ ಪಡೆದ ಕರ್ನಾಟಕದ ಹೆಮ್ಮೆಯ ಸಾಹಿತಿಯಾಗಿದ್ದಾರೆ.

Kannada novelist S L Bhyrappa to attend Jaipur Literature Festival

ಜೈಪುರ ಸಾಹಿತ್ಯ ಉತ್ಸವ ಸಮಿತಿ ಭೈರಪ್ಪ ಅವರ ಹೆಸರನ್ನು ಪ್ರಕಟಿಸಿರುವುದರ ಜತೆಗೆ, ಭೈರಪ್ಪ ಅವರೊಂದಿಗೆ ವಿಶ್ವದ ಖ್ಯಾತನಾಮ ಸಾಹಿತಿಗಳು, ಬುದ್ಧಿಜೀವಿಗಳು ಸೇರಿದಂತೆ ಹಲವು ಗಣ್ಯರು ಜನವರಿಯ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಭೈರಪ್ಪ ಅವರೊಂದಿಗೆ ಹೆಸರಾಂತ ಕಲಾವಿದರಾದ ಅಲೈಸ್ ವಾಕರ್, ಚಿತ್ರ ಬ್ಯಾನರ್ಜಿ ದೇವಕಾರುಣಿ, ವಿಕ್ರಂ ಚಂದ್ರ, ಸ್ವಾನಂದ ಕಿರ್ಕಿರೆ, ತಮ್ಹೀಮ ಆನಂ, ರಾಬರ್ಟೊ ಕಲಾಸೋ ಮತ್ತು ನರೇಂದ್ರ ಕೋಹ್ಲಿಯಂಥ ದಿಗ್ಗಜರೂ ಪಾಲ್ಗೊಳ್ಳಲಿದ್ದಾರೆ.

ಜೈಪುರ ಸಾಹಿತ್ಯ ಉತ್ಸವವನ್ನು ಜಗತ್ತಿನ ಅತ್ಯಂತ ಶ್ರೇಷ್ಠವಾದ ಉತ್ಸವ ಎಂದೇ ಪರಿಗಣಿಸಲಾಗುತ್ತದೆ. 2017 ರ ಜನವರಿ 19 ರಿಂದ 23 ರವರೆಗೆ ಜೈಪುರದ ಸೌಂದರ್ಯದ ಖನಿ ಎನಿಸಿರುವ ಡಿಗ್ಗಿ ಪ್ಯಾಲೇಸ್ ಹೊಟೇಲ್ ನಲ್ಲಿ ನಡೆಯುತ್ತಿರುವ ಈ ಉತ್ಸವ ಒಂದು ರೀತಿಯ ಐತಿಹಾಸಿಕ ಉತ್ಸವ ಎನಿಸಲಿದೆ.

ಈ 10 ನೇ ಉತ್ಸವಕ್ಕೆ ದೇಶ ವಿದೇಶಗಳ 250 ಕ್ಕೂ ಹೆಚ್ಚು ಸಾಹಿತಿಗಳು, ಬುದ್ಧಿಜೀವಿಗಳು, ರಾಜಕಾರಣಿಗಳು, ಪತ್ರಕರ್ತರು ಮತ್ತು ಸಾಂಸ್ಕೃತಿಕ ಕ್ಷೇತ್ರದ ದಿಗ್ಗಜರನ್ನು ಆಹ್ವಾನಿಸಲಾಗಿದೆ. ಕಳೆದ ವರ್ಷ 3,30,000 ಪ್ರೇಕ್ಷಕರು ಆಗಮಿಸಿದ್ದರು. ಈ ಬಾರಿ ಈ ಸಂಖ್ಯೆಯನ್ನು ಮೀರಿ ಪ್ರೇಕ್ಷಕರು ಬರುವ ನಿರೀಕ್ಷೆಗಳಿವೆ.

English summary
Renowned Kannada writer S L Byrappa will be participating in Jaipur Literature Festival to be held in January next year.Having hosted 1300 speakers and welcoming nearly 1.2 million book lovers, the success of JLF has been astonishing and heartwarming.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X