ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಬೇಡ್ಕರ್ 'ಎಕ್ಕಡ' ಅಂದಿದ್ದ ಹುಚ್ಚ ವೆಂಕಟನ ಬಂಧನ

|
Google Oneindia Kannada News

ಬೆಂಗಳೂರು, ನವೆಂಬರ್ 20 : ನಟ, ನಿರ್ದೇಶಕ ಹುಚ್ಚ ವೆಂಕಟ್‌ನನ್ನು ಬಂಧಿಸಲಾಗಿದೆ. ಬೆಂಗಳೂರಿನ ಜ್ಞಾನಭಾರತಿ ಠಾಣೆ ಪೊಲೀಸರು ವೆಂಕಟ್‌ನನ್ನು ಬಂಧಿಸಿದ್ದಾರೆ, ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವೆಂಕಟ್ ವಿರುದ್ಧ ದೂರು ನೀಡಿದ್ದರು.

ಗುರುವಾರ ತಡರಾತ್ರಿ ಇಂದಿರಾ ನಗರದಲ್ಲಿರುವ ಹುಚ್ಚ ವೆಂಕಟ್‌ ಮನೆಯಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಶುಕ್ರವಾರ ಹುಚ್ಚಾ ವೆಂಕಟ್‌ನನ್ನು ಸಿಟಿ ಸಿವಿಲ್ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಅಂಬೇಡ್ಕರ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಗುರುವಾರ ರಾತ್ರಿಯೂ ದಲಿತ ಸಂಘಟನೆಗಳ ಕೆಲವು ಕಾರ್ಯಕರ್ತರು ವೆಂಕಟ್ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. [ಹುಚ್ಚ ವೆಂಕಟ್ ಯಾರು?]

huccha venkat

ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನವೆಂಬರ್ 18ರಂದು ಜ್ಞಾನಭಾರತಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಹುಚ್ಚಾ ವೆಂಕಟ್ ವಿರುದ್ಧ ದೂರು ನೀಡಿದ್ದರು. ವೆಂಕಟ್ ವಿರುದ್ಧ ಉದ್ದೇಶ ಪೂರ್ವಕವಾಗಿ ಶಾಂತಿ ಕದಡಿದ ಆರೋಪದಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ. [ಹುಚ್ಚಾ ವೆಂಕಟ್ ಮುಖಕ್ಕೆ ಮಸಿ]

ಕೋಲಾರದಲ್ಲಿ ದೂರು ದಾಖಲು : ಖಾಸಗಿ ಸುದ್ದಿ ವಾಹಿನಿಯ ಕಾರ್ಯಕ್ರಮದಲ್ಲಿ ಬಿ.ಆರ್‌.ಅಂಬೇಡ್ಕರ್‌ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಹುಚ್ಚ ವೆಂಕಟ್‌ ವಿರುದ್ಧ ಕೋಲಾರ ನಗರ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಾಗಿದೆ. [ಬಿಗ್ ಬಾಸ್ : ವೆಂಕಟ್ ಗೆ ಭಾರೀ ಸಂಭಾವನೆ]

ವೆಂಕಟ್ ವಿರುದ್ಧ ಪ್ರತಿಭಟನೆ : ಗುರುವಾರ ಬೆಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ದಲಿತ ಸಂಘರ್ಷ ಸಮಿತಿ ವೆಂಕಟ್ ವಿರುದ್ಧ ಪ್ರತಿಭಟನೆ ನಡೆಸಿದವು. ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್ ಅವರು, 'ಮಾನಸಿಕ ಅಸ್ವಸ್ಥನಾದ ವೆಂಕಟ್ ಖಾಸಗಿ ಸುದ್ದಿವಾಹಿನಿಯಲ್ಲಿ ಅಂಬೇಡ್ಕರ್ ಅವರನ್ನು ನನ್ನ ಎಕ್ಕಡ ಎಂದು ಮೂದಲಿಸಿದ್ದಾರೆ' ಎಂದು ಆರೋಪಿಸಿದರು. [ಟಿವಿ ಚಾನಲ್ಲಿನಲ್ಲಿ ಮತ್ತೆ ಕನಲಿ ಕೆಂಡವಾದ 'ಹುಚ್ಚ' ವೆಂಕಟ್]

'ಆದರ್ಶಪುರುಷರ ಕುರಿತು ವೆಂಕಟ್ ಅವರಿ ತಿಳಿದಿಲ್ಲ. ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡಿ ಶೋಷಿತ ಜನಾಂಗವನ್ನು ಅವಮಾನಿಸಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.

English summary
Bengaluru Jnanabharathi police arrested actor and former contestant of Bigg Boss 3 Kannada Huccha Venkat on Thursday, November 19th night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X