ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಮೇಯರ್ ಆಯ್ಕೆ, ಎಲ್ಲಾ ಪಕ್ಷಗಳು ರೆಸಾರ್ಟ್‌ನತ್ತ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 10 : ಬಿಬಿಎಂಪಿ ಮೇಯರ್ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ 14 ಜೆಡಿಎಸ್ ಸದಸ್ಯರು ಕೇರಳದಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಬಿಡದಿ ಬಳಿಯ ರೆಸಾರ್ಟ್‌ನಲ್ಲಿ ಅವರು ವಾಸ್ತವ್ಯ ಹೂಡಲಿದ್ದು, ಶುಕ್ರವಾರ ಬೆಳಗ್ಗೆ ಪಾಲಿಕೆ ಕಚೇರಿಗೆ ನೇರವಾಗಿ ಆಗಮಿಸಲಿದ್ದಾರೆ.

ಒಂದು ವಾರಕ್ಕೂ ಹೆಚ್ಚು ಕಾಲ ಕೇರಳದ ರೆಸಾರ್ಟ್‌ನಲ್ಲಿದ್ದ ಜೆಡಿಎಸ್‌ನ ಬಿಬಿಎಂಪಿ ಸದಸ್ಯರು ಇಂದು ಮಧ್ಯಾಹ್ನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಆದರೆ, ಇಂದು ಸಹ ನಗರದ ಹೊರವಲಯದ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. [ಕಾಂಗ್ರೆಸ್ಸಿನಿಂದ ಮೇಯರ್ ಗೌನ್ ಯಾರ ಹೆಗಲಿಗೆ?]

 bengaluru

ಇತ್ತ ಬಿಜೆಪಿ ಸದಸ್ಯರು ರೆಸಾರ್ಟ್ ಮೊರೆ ಹೋಗಿದ್ದಾರೆ. ರಾಮನಗರ ಬಳಿಯ ರೆಸಾರ್ಟ್‌ಗೆ ಬಿಜೆಪಿಯ 100 ಸದಸ್ಯರು ತೆರಳಲಿದ್ದು, ಪಕ್ಷದ ನಾಯಕರ ಜೊತೆ ಮೇಯರ್ ಚುನಾವಣೆ ಕಾರ್ಯತಂತ್ರದ ಬಗ್ಗೆ ಸಭೆ ನಡೆಸಲಿದ್ದಾರೆ. [ಬಿಬಿಎಂಪಿ ಮೈತ್ರಿ : 3 ಬೇಡಿಕೆ ಇಟ್ಟ ಜೆಡಿಎಸ್]

ಕಾಂಗ್ರೆಸ್‌ನ 76 ಸದಸ್ಯರು ಮಡಿಕೇರಿ ರೆಸಾರ್ಟ್‌ನಲ್ಲಿದ್ದು, ಶುಕ್ರವಾರ ಬೆಳಗ್ಗೆ ನಗರಕ್ಕೆ ಆಗಮಿಸಲಿದ್ದಾರೆ. ಪಕ್ಷೇತರ ಸದಸ್ಯರು ಬೆಂಗಳೂರಿಗೆ ಬಂದಿದ್ದು, ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಎಲ್ಲರೂ ಶುಕ್ರವಾರ ಬೆಳಗ್ಗೆ 11 ಗಂಟೆ ವೇಳೆಗೆ ಬಿಬಿಎಂಪಿ ಕಚೇರಿಗೆ ಆಗಮಿಸಲಿದ್ದಾರೆ. 11.30ಕ್ಕೆ ಮೇಯರ್ ಆಯ್ಕೆ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದೆ.

ಮ್ಯಾಜಿಕ್ ನಂಬರ್ 131 : ಬಿಬಿಎಂಪಿ ಮೇಯರ್ ಗದ್ದುಗೆ ಏರಲು ಮ್ಯಾಜಿಕ್ ನಂಬರ್ 131. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಸದಸ್ಯ ಬಲ 132. ಬಿಜೆಪಿಯ ಸದಸ್ಯ ಬಲ 128. 260 ಸದಸ್ಯರು ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಮಾಡಲಿದ್ದಾರೆ. ಮೇಯರ್ ಆಯ್ಕೆ ನಂತರ 12 ಸ್ಥಾಯಿ ಸಮಿತಿಗಳ ಸದಸ್ಯರ ನೇಮಕಕ್ಕೆ ಚುನಾವಣೆ ನಡೆಯಲಿದೆ.

English summary
JDS corporators return to Bengaluru from a resort after two weeks. Bruhat Bangalore Mahanagara Palike (BBMP) mayoral election will be held on Friday, September 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X