ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಹೊಗಳಿದ ಜೆಡಿಎಸ್ ಶಾಸಕ ಗೋಪಾಲಯ್ಯ

|
Google Oneindia Kannada News

ಬೆಂಗಳೂರು, ಅ. 15 : 'ನಾನು ಬಿಬಿಎಂಪಿ ಸದಸ್ಯನಾಗಲು ಮತ್ತು ಶಾಸಕನಾಗಲು ಸಿದ್ದರಾಮಯ್ಯನವರ ಆಶೀರ್ವಾದ ಕಾರಣ' ಎಂದು ಹೇಳುವ ಮೂಲಕ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಜೆಡಿಎಸ್ ಶಾಸಕ ಗೋಪಾಲಯ್ಯ ಅಚ್ಚರಿ ಮೂಡಿಸಿದ್ದಾರೆ. ಗೋಪಾಲಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ ಅವರು ಶಾಸಕನಾಗಲು ನಾನು ಸಹಾಯ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಬುಧವಾರ ಮಹಾಲಕ್ಷ್ಮಿ ಲೇಔಟ್‍ನಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಗೋಪಾಲಯ್ಯ 'ನಾನು ಬಿಬಿಎಂಪಿ ಸದಸ್ಯನಾಗಲು ಸಿದ್ದರಾಮಯ್ಯ ಅವರು ಕಾರಣ, ಶಾಸಕನಾಗಲೂ ಅವರ ಆಶೀರ್ವಾದವೇ ಕಾರಣ. ಮುಖ್ಯಮಂತ್ರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರನ್ನು ಹೊಗಳಿದರು. [ವಿಧಾನಸಭಾ ಚುನಾವಣೆ ಫಲಿತಾಂಶ]

Gopalaiah

'ನಾನು ನೀವು ಬೆಳೆಸಿದ ಹುಡುಗ. ನನ್ನ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವಂತೆ' ಈ ಸಂದರ್ಭಲ್ಲಿ ಗೋಪಾಲಯ್ಯ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು. ಜೆಡಿಎಸ್ ನಾಯಕರೊಬ್ಬರು ನಾನು ಶಾಸಕನಾಗಲು ಸಿದ್ದರಾಮಯ್ಯ ಅವರ ಆಶೀರ್ವಾದವೇ ಕಾರಣ ಎಂದು ಹೇಳಿರುವುದು ಅಚ್ಚರಿಗೆ ಕಾರಣವಾಗಿತ್ತು.

ಸಿಎಂ ಪ್ರತಿಕ್ರಿಯೆ : ಶಾಸಕ ಗೋಪಾಲಯ್ಯ ಹೇಳಿಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, 'ಗೋಪಾಲಯ್ಯ ಶಾಸಕನಾಗಲು ನನ್ನ ಸಹಾಯ ಇರಲಿಲ್ಲ, ಬಿಬಿಎಂಪಿ ಕಾರ್ಪೊರೇಟರ್ ಆಗಲು ನನ್ನ ಸಹಾಯವಿತ್ತು. ಏಕೆಂದರೆ ಆಗ ನಾನು ಜೆಡಿಎಸ್‍ ಪಕ್ಷದಲ್ಲಿದ್ದೆ' ಎಂದು ಸ್ಪಷ್ಟನೆ ನೀಡಿದ್ದಾರೆ.

ಅಂದಹಾಗೆ 2013ರ ವಿಧಾನಸಭೆ ಚುನಾವಣೆಯಲ್ಲಿ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನೆ.ಲ.ನರೇಂದ್ರಬಾಬು ಅವರು 50,757 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು. ಗೋಪಾಲಯ್ಯ ಅವರು 66,127 ಮತಗಳನ್ನು ಪಡೆದು ಜಯಗಳಿಸಿದ್ದರು. ಆದ್ದರಿಂದ ಶಾಸಕ ಹೇಳಿಕೆ ಅಚ್ಚರಿ ಮೂಡಿಸಿತ್ತು. [ಮಾಹಿತಿ : http://www.indiavotes.com]

English summary
Gopalaiah.K JD(S)MLA from Mahalakshmi Layout Bangalore praised CM Siddaramaiah on Wednesday. Gopalaiah said, he become MLA form CM blessings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X