ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯಾ ವಿಧಿವಶ: ಕರ್ನಾಟಕದ ನಾಯಕರು ಹೇಳಿದ್ದೇನು?

By Ananthanag
|
Google Oneindia Kannada News

ಬೆಂಗಳೂರು, ಡಿಸೆಂಬರ್ 6: ತಮಿಳುನಾಡು ಮುಖ್ಯಮಂತ್ರಿ ಜಯ ಲಲಿತಾ ಅವರು ಸೋಮವಾರ ರಾತ್ರಿ ವಿಧಿವಶವಾಗಿದ್ದು, ಕರ್ನಾಟಕದ ಮುಖ್ಯನಾಯಕರಾದ ಮುಖ್ಯಮಂತ್ರಿ, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಬಿ. ಎಸ್ ಯಡಿಯೂರಪ್ಪ, ಶೋಭ ಕರಂದ್ಲಾಜೆ ಕಂಬನಿ ಮಿಡಿದಿದ್ದಾರೆ.

[ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]

Jayalalitha death: what to say karnataka political leader

ಮಹಾನ್ ನಾಯಕಿ: ಖರ್ಗೆ

ಕೇಂದ್ರ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಜಯಲಲಿತಾ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ್ದು, ಅಕೆ ಒಬ್ಬ ಮಹಾನ್ ನಟಿ, ರಾಜಕೀಯ ಕಂಡ ಮಹಾನ್ ನಾಯಕಿ, ತಮಿಳುನಾಡಿನ ಬಡ ಜನರ ಮನಸ್ಸಿನಲ್ಲಿ ಮನೆ ಮಾಡಿದ ಅಮ್ಮಾಆಗಿದ್ದಾರೆ. ಎರಡನೇ ಹಂತದ ಮುಖಂಡತ್ವದಲ್ಲಿ ಯಾರನ್ನು ಅವರು ಬೆಳೆಸಲಿಲ್ಲ. ಅವರ ನಿರ್ಧಾರಗಳು ತಮಿಳುನಾಡನ್ನು ಭದ್ರವಾಗಿಸಿದ್ದವು, ಅನೇಕ ರಾಜಕೀಯ ಹೋರಾಟ, ಏರಿಳಿತವನ್ನು ಕಂಡು ಗಟ್ಟಿಗಿತ್ತಿ ಎಂದು ಅವರು ತಿಳಿಸಿದರು.

suresh kumar

ಅಚ್ಚರಿ ಸೃಷ್ಟಸಿದ ಉಕ್ಕಿನ ಮಹಿಳೆ

ಬಿಜೆಪಿ ಮುಖಂಡ ಸುರೇಶ್ ಕುಮಾರ್ ಜಯಾ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿ, ಮೈಸೂರು ಕೋಮಲವಲ್ಲಿ ಆಗಿದ್ದು ತಮಿಳುನಾಡಿನ ಅಮ್ಮ, ಜಯಾ ಒಬ್ಬ ಉಕ್ಕಿನ ಮಹಿಳೆಯಾಗಿ ಕಡಿಮೆ ಅವಧಿಯಲ್ಲಿ ರಾಜಕೀಯ ಅಚ್ಚರಿಗಳನ್ನು ಸೃಷ್ಟಿಸಿದರು. ಆದರೆ ಅವರು ಇಂದು ಇತಿಹಾಸ ಎಂದು ಹೇಳಿದ್ದಾರೆ.[ಅಮ್ಮ 'ಜನ ಪ್ರೀತಿ' ಗಳಿಸಿದ ಕ್ಯಾಂಟೀನ್ ನಿಂದ ಲ್ಯಾಪ್ ಟಾಪ್ ವರೆಗೆ]

shobha karandlaje

ಮುಂದಿನ ಮಹಿಳಾ ಪ್ರಧಾನಿಯಾಗುತ್ತಿದ್ದರು: ಕರಂದ್ಲಾಜೆ

ಕರ್ನಾಟಕದ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರು ಜಯಲಲಿತಾ ಸಾವಿನ ಬಗ್ಗೆ ಭಾವುಕರಾಗಿ ಮಾತನಾಡಿ, ಜಯಲಲಿತಾ ಅವರ ಸಾಧನೆ ಅಜರಾಮರ, ಅವರು ಇದ್ದಿದ್ದರೆ ಮುಂದೊಂದು ದಿನ ಪ್ರಧಾನಿಯಾಗುತ್ತಿದ್ದರು. ಅವರ ಕನ್ನಡದ ಮಗಳಾಗಿ ಹುಟ್ಟಿ ತಮಿಳುನಾಡನ್ನು ಆಳಿದ ಧೀರೆ, ರಾಜಕೀಯ, ಚಿತ್ರರಂಗ, ಸಾಮಾಜಿಕ ಕ್ಷೇತ್ರಗಳಲ್ಲಿ ಅವರ ಸಾಧನೆ ಅಪ್ರತಿಮವಾದದು ಎಂದು ನುಡಿದಿದ್ದಾರೆ. [ಜಯಾ ಸಾವು ಕನ್ನಡಿಗರಿಗೂ ದುಃಖ ತಂದಿದೆ : ಸಿದ್ದು]

B S Y

ಜನ ಸಹನೆ ಕಳೆದುಕೊಳ್ಳದಿರಲಿ: ಬಿಎಸ್ ವೈ

ಬಿಜೆಪಿ ಮುಖಂಡ, ಮಾಜಿ ಮುಖ್ಯ ಮಂತ್ರಿ ಎಸ್ ಯಡಿಯೂರಪ್ಪ ಅವರು ಜಯಲಲಿತಾ ಅವರ ಬಗ್ಗೆ ಮಾತನಾಡುತ್ತಾ ಜಯಲಲಿತಾ ಅವರು ಧೀಮಂತ ಜೀವನವನ್ನು ನಡೆಸಿದವರು, ರಾಜಕೀಯವಾಗಿ ಮತ್ತು ಚಿತ್ರ ರಂಗದ ಹಾದಿಯಲ್ಲಿ ಅನೇಕ ಕಷ್ಟಗಳನ್ನು ಉಂಡವರು ಅವರ ನಾಯಕತ್ವದಲ್ಲಿ ತಮಿಳುನಾಡು ಅಭಿವೃದ್ಧಿಯನ್ನು ಪಡೆದಿದೆ. ಅವರ ಸಾವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ತಮಿಳುನಾಡಿನ ಜನತೆಗೆ ನೀಡಲಿ, ಜನರು ಯಾವುದೇ ಕಾರಣಕ್ಕೂ ಸಹನೆಯನ್ನು ಕಳೆದುಕೊಂಡು ಅನಾಹುತಗಳನ್ನು ಮಾಡದಿರಲಿ ಎಂದು ಹೇಳಿದರು.

English summary
Tamil Nadu Chief Minister J Jayalalithaa passed away on 5th December in Chennai. Karnataka political leader what to say about of jayalalitha death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X