ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೈಲಿನಿಂದ ಬೇಲ್ ತನಕ: ಗಾಲಿ ಜನಾರ್ದನ ರೆಡ್ಡಿ ಟೈಮ್ ಲೈನ್

By Mahesh
|
Google Oneindia Kannada News

ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ಮಾಜಿ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಈಗ್ಗೆ ಮೂರುವರೆ ವರ್ಷಗಳ ಕೆಳಗೆ ಬೆಳ್ಳಂಬೆಳ್ಳಗ್ಗೆ ಬಳ್ಳಾರಿಯಲ್ಲಿ ಅರೆಸ್ಟ್ ಆಗಿದ್ದು ನಿಮಗೆಲ್ಲ ನೆನಪಿರಬಹುದು. ಬಳ್ಳಾರಿಯಿಂದ ಹೈದರಾಬಾದ್ ನಂತರ ಬೆಂಗಳೂರಿನ ಜೈಲಿನಲ್ಲಿದ್ದ ರೆಡ್ಡಿ ಈಗ ಸ್ವತಂತ್ರ ಹಕ್ಕಿಯಾಗಿದ್ದಾರೆ. ಆದರೆ, ಕೇಸುಗಳಿಂದೇನೂ ದೋಷ ಮುಕ್ತರಾಗಿಲ್ಲ.

2011ರ ಸೆ.5ರಂದು ಸೋಮವಾರ ಮುಂಜಾನೆ ಹೈದರಾಬಾದಿನಿಂದ ಬಂದಿದ್ದ ಲಕ್ಷ್ಮಿನಾರಾಯಣ ಅವರ ಸಿಬಿಐ ತಂಡ ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಅವರ ಅಳಿಯ ಬಿ. ಶ್ರೀನಿವಾಸ ರೆಡ್ಡಿ ಅವರ ಒಡೆತನದ ಓಬಳಾಪುರಂ ಗಣಿ ಕಂಪನಿ ಹಾಗೂ ಮನೆ ಮೇಲೆ ದಾಳಿ ನಡೆಸಿತ್ತು. ಹಠಾತ್ ದಾಳಿಯಿಂದ ಕಂಗಾಲಾದ ರೆಡ್ಡಿಗೆ ಈಗ 2015ರ ಜ.23ರ ಮುಸ್ಸಂಜೆ ವೇಳೆಗೆ ಸ್ವಲ್ಪ ರಿಲೀಫ್ ಸಿಕ್ಕಿದೆ. [ಜೈಲಿನಿಂದ ಹೊರ ಬಂದ ಗಾಲಿ ರೆಡ್ಡಿ ಬೆಂಜ್ ನಲ್ಲಿ ಹೊರಟ್ರು]

2011ರಲ್ಲಿ ಹೈದರಾಬಾದಿಗೆ ರವಾನೆಯಾಗಿದ್ದರಿಂದ ಹಿಡಿದು ಬಾಡಿ ವಾರೆಂಟ್ ಮೇಲೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, 2015ರ ಜ.20ರಂದು ಸುಪ್ರೀಂಕೋರ್ಟ್ ಜಾಮೀನು ನೀಡಿದ್ದು, ಶುಕ್ರವಾರ(ಜ.23)ರಂದು ಜೈಲಿನಿಂದ ಹೊರ ಬಂದು ಪಾರಿಜಾತ ಅಪಾರ್ಟ್ಮೆಂಟ್ ಸೇರುವ ತನಕ ನಡೆದ ಘಟನಾವಳಿಗಳು ಇಲ್ಲಿವೆ...

Janardhana Reddy Timeline Ballari Hyderabad Bengaluru SC Bail Release

2011 ಸೆ.5 ರಂದು
* ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಓಎಂಸಿ ಎಂಡಿ ಬಿ.ವಿ ಶ್ರೀನಿವಾಸ್ ಬಳ್ಳಾರಿ ನಿವಾಸದ ಮೇಲೆ ದಾಳಿ.
* 6.40 ಕ್ಕೆ ಜನಾರ್ದನ ರೆಡ್ಡಿ ಅವರ ನೆಚ್ಚಿನ ಹೆಲಿಕಾಪ್ಟರ್ ರುಕ್ಮಿಣಿಯನ್ನು ವಶಪಡಿಸಿಕೊಂಡ ಸಿಬಿಐ.
* ಜನಾರ್ದನ ರೆಡ್ಡಿ ಹಾಗೂ ಶ್ರೀನಿವಾಸ್ ಬಂಧನ. ಬಿಳಿ ಇನ್ನೋವಾ ಕಾರಿನಲ್ಲಿ ಹೈದರಾಬಾದಿನತ್ತ ಪಯಣ.
* 7.00 ಕ್ಕೆ ಬೆಂಗಳೂರಿನ ರೆಡ್ಡಿ ನಿವಾಸ 'ಪಾರಿಜಾತ' ಮೇಲೂ ಸಿಬಿಐ ದಾಳಿ, ದಾಖಲೆಗಳು ವಶ.
* ಗುಂತಕಲ್, ಶಂಷಾಬಾದ್ ಮಾರ್ಗವಾಗಿ ಹೈದರಾಬಾದಿನ ನಾಂಪಲ್ಲಿ ತಲುಪಿದ ಸಿಬಿಐ ತಂಡ
* ಗಾಲಿ ರೆಡ್ಡಿಯನ್ನು ಜೈಲಿಗೆ ತಳ್ಳಿದ ನಾಂಪಲ್ಲಿ ಸಿಬಿಐ ವಿಶೇಷ ಕೋರ್ಟ್
* 1988ರ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 13(2) 13(1)ಡಿ. 1926ರ ಭಾರತೀಯ ಅರಣ್ಯ ಕಾಯ್ದೆ, ಭಾರತೀಯ ದಂಡ ಸಂಹಿತೆ ಕಲಂ 120b 420, 379, 411, 427 ಸೇರಿದಂತೆ ಅನೇಕ ಕಲಂಗಳಡಿ ಗಾಲಿ ರೆಡ್ಡಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ.
[ಚಿತ್ರಸುದ್ದಿ: ಅಗ್ರಹಾರದಿಂದ ಜರ್ಮನಿ ಕಾರಿನಲ್ಲಿ ಹೊರಬಂದ ರೆಡ್ಡಿ]
2014 ಜ.23:
* ಸುಪ್ರೀಂಕೋರ್ಟಿನಿಂದ ಜಾಮೀನು ಪ್ರತಿ ಹೈದರಾಬಾದಿನ ಕೋರ್ಟಿಗೆ ತಲುಪಿತು.
* ಮಧ್ಯಾಹ್ನದ ವೇಳೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ತಲುಪಿತು.
* ಜೈಲು ಅಧೀಕ್ಷಕ ಜಯಸಿಂಹ ಅವರು ಬಿಡುಗಡೆ ಪ್ರಕ್ರಿಯೆ ಆರಂಭಿಸುವ ವೇಳೆಗೆ ಜೈಲಿನ ಸುತ್ತಾ ಮುತ್ತಾ ನೂರಾರು ಜನ ಅಭಿಮಾನಿಗಳು ನೆರೆದಿದ್ದರು.
* ಯಮಗಂಡ ಕಾಲ ಕಳೆದುಕೊಂಡು 4.40ರ ವೇಳೆಗೆ ಜೈಲಿನಿಂದ ಹೊರಬಂದ ಗಾಲಿ ರೆಡ್ಡಿ ಅವರನ್ನು ಬೆಂಜ್ ಕಾರಿನಲ್ಲಿ ಕೂರಿಸಿಕೊಂಡು ಶ್ರೀರಾಮುಲು ಅವರು ಮನೆ ಕಡೆ ಕರೆದುಕೊಂಡು ಹೋದರು.
* ಪಾರಿಜಾತ ಅಪಾರ್ಟ್ಮೆಂಟ್ ಗೆ ತೆರಳುವ ಮುನ್ನ ಸಿಐಡಿ ಕಚೇರಿ ಎದುರಿನ ಗಣೇಶ ದೇಗುಲಕ್ಕೆ ಭೇಟಿ ನೀಡಿದ ಗಾಲಿ ರೆಡ್ಡಿ.
* ಗಾಲಿ ರೆಡ್ಡಿ ಅವರು ಗೃಹ ಪ್ರವೇಶಕ್ಕೆ ಸೋಮಶೇಖರ ರೆಡ್ಡಿ, ಸುರೇಶ್ ಬಾಬು, ಶ್ರೀರಾಮುಲು ಸಾಥ್ ನೀಡಿದರು.

English summary
Janardhana Reddy Timeline : Former minister G Janardhana Reddy released from Parappana Agraha Jail today(Jan.23). He was arrested by CBI team on Sept.5, 2011
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X