ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಸ್‌ಐಎಸ್ ಟ್ವೀಟ್, ಬೆಂಗಳೂರಿನಲ್ಲಿ ಹೈ ಅಲರ್ಟ್

|
Google Oneindia Kannada News

ಬೆಂಗಳೂರು, ಡಿ.16 : ಸಿಡ್ನಿ ಒತ್ತೆಯಾಳು ಪ್ರಕರಣದ ನಂತರ ಬೆಂಗಳೂರಿನಲ್ಲಿ ದಾಳಿ ನಡೆಸುವುದಾಗಿ ಬಂದಿರುವ ಟ್ವೀಟ್ ಹಿನ್ನಲೆಯಲ್ಲಿ ನಗರದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಗರುಡ ಮಾಲ್‌ಗೆ ಸೆಂಟ್ರಲ್ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು.

ಬೆಂಗಳೂರಿನಲ್ಲಿ ದಾಳಿ ನಡೆಸುವುದಾಗಿ ಬಂದಿರುವ ಟ್ವೀಟ್ ನೋಡಿ ಭಯಪಡಬೇಡಿ. ಭಯೋತ್ಪಾದಕರ ವಿಧ್ವಂಸಕ ಕೃತ್ಯ ನಡೆಸುವ ಬಗ್ಗೆ ಬರುವ ಟ್ವೀಟ್ ಗಳನ್ನು ನಂಬಬೇಡಿ, ಅನೇಕ ನಕಲಿ ಖಾತೆಗಳು ಸೃಷ್ಟಿಯಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಜನರಿಗೆ ಮಾನವಿ ಮಾಡಿದ್ದಾರೆ.

Garuda Mall

ಗರುಡ ಮಾಲ್‌ಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂದೀಪ್ ಪಾಟೀಲ್, ನಗರದ ಪ್ರಮುಖ ಪ್ರದೇಶಗಳಲ್ಲಿ ಅಗತ್ಯ ಭದ್ರತೆ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಹೆದರುವ ಅಗತ್ಯವಿಲ್ಲ. ಅನುಮಾನಸ್ಪದ ವಸ್ತುಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಿದರು. [ಟ್ವೀಟ್ ಬೆದರಿಕೆಗೆ ಹೆದರಬೇಡಿ]

ಮೆಹದಿ ಮಸ್ರೂರ್ ಬಿಸ್ವಾಸ್ ಬಂಧನಕ್ಕೆ ಪ್ರತೀಕಾರವಾಗಿ ಬೆಂಗಳೂರಿನಲ್ಲೂ ಸಿಡ್ನಿ ಮಾದರಿಯಲ್ಲಿ ದಾಳಿ ಮಾಡಲಾಗುವುದು ಎಂದು ಟ್ವಿಟ್ಟರ್ ನಲ್ಲಿ ಸೋಮವಾರ ಸಂದೇಶವೊಂದು ಹರಿದಾಡಿತ್ತು. ಇದರಿಂದ ಉದ್ಯಾನ ನಗರಿಯಲಿ ಸಹಜವಾಗಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. [ಸಿಡ್ನಿಯಲ್ಲಿ ಹೇಗೆ ದಾಳಿ ನಡೆಯಿತು?]

English summary
ISIS threat to Bengaluru : Central DCP Sandeep Patil visited Garuda Mall on Tuesday and reviewed security arrangements.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X