ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಹದಿ ವಿರುದ್ಧ ಕಠಿಣ ಪ್ರಕರಣ ದಾಖಲು : ಪೊಲೀಸ್

By Kiran B Hegde
|
Google Oneindia Kannada News

ಬೆಂಗಳೂರು, ಡಿ. 18: ಐಎಸ್ಐಎಸ್ ಪರ ಟ್ವಿಟ್ಟರ್ ಖಾತೆ ನಿರ್ವಹಿಸುತ್ತಿದ್ದ ಆರೋಪಕ್ಕೊಳಗಾಗಿರುವ ಮೆಹದಿ ಮಸ್ರೂರ್ ಬಿಸ್ವಾಸ್ (24) ವಿರುದ್ಧ ಕಠಿಣ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಮೆಹದಿ ವಿರುದ್ಧ ಗಂಭೀರವಲ್ಲದ ಪ್ರಕರಣ ದಾಖಲಿಸಲಾಗಿದೆ ಎಂಬ ಆರೋಪವನ್ನು ಪೊಲೀಸರು ಅಲ್ಲಗಳೆದಿದ್ದಾರೆ.

ಭಾರತೀಯ ದಂಡ ಸಂಹಿತೆಯ 27ನೇ ಪರಿಚ್ಛೇದದಡಿ ಹೊಸದಾಗಿ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ 125ನೇ ಪರಿಚ್ಛೇದದಡಿ ದೇಶ ಅಥವಾ ಭಾರತದ ಜೊತೆ ಸ್ನೇಹ ಹೊಂದಿರುವ ರಾಷ್ಟ್ರದ ವಿರುದ್ಧ ಸಂಚು ರೂಪಿಸಿದ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಪರಿಚ್ಛೇದ 18 ಹಾಗೂ 39ರ ಅಡಿ ಕಾನೂನು ಬಾಹಿರ ಚಟುವಟಿಕೆ (ತಡೆ) ಕಾಯಿದೆ ಹಾಗೂ ಪರಿಚ್ಛೇದ 66 (ಎಫ್) ಅಡಿ ಪಿತೂರಿ ಮತ್ತು ಸೈಬರ್-ಭಯೋತ್ಪಾದನೆ ನಡೆಸಿದ ಪ್ರಕರಣ ದಾಖಲಾಗಿದೆ. [ತಪ್ಪೊಪ್ಪಿಕೊಂಡ ಮೆಹದಿ ಬಿಸ್ವಾಸ್]

biswas

"ಐಎಸ್ಐಎಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಷೇಧಿತ ಸಂಘಟನೆ. ಬಿಸ್ವಾಸ್ ಆ ಸಂಘಟನೆಯ ತತ್ವವನ್ನು ಟ್ವೀಟ್ ಮಾಡುತ್ತಿದ್ದ. ಆದ್ದರಿಂದ ಪ್ರಕರಣದ ಕಾಠಿಣ್ಯತೆ ಕುರಿತು ಅನುಮಾನ ಬೇಡ" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. [ಮೆಹದಿ ಬಂಧನ : ಟಾಪ್ 10 ಬೆಳವಣಿಗೆ]

"ಮೆಹದಿ ಬಿಸ್ವಾಸ್ ಐಎಸ್ಐಎಸ್ ಸಿದ್ಧಾಂತವನ್ನು ಟ್ವೀಟ್ ಮಾಡುತ್ತಿದ್ದ ಕಾರಣ ಆತನ ವಿರುದ್ಧ ಸೈಬರ್ ಭಯೋತ್ಪಾದನೆ ಪ್ರಕರಣ ದಾಖಲಿಸಲಾಗಿದೆ. ನಮಗೆ ಈಗ ಈ ಎಲ್ಲ ಪ್ರಕರಣಗಳನ್ನು ಸಾಬೀತುಪಡಿಸಲು ಸಾಕ್ಷಿ ಸಂಗ್ರಹವೊಂದೆ ಉಳಿದಿರುವ ಕೆಲಸ" ಎಂದು ಸ್ಪಷ್ಟಪಡಿಸಿದ್ದಾರೆ. [ಮೆಹದಿ ಗುಪ್ತದಳದ ಕಣ್ಣು ತಪ್ಪಿಸಿದ್ದು ಹೇಗೆ]

ಭಾರತೀಯ ಮುಸ್ಲಿಮರು ಅಲ್ಲಾಹ್ ಮತ್ತು ಶರಿಯಾ ಆಡಳಿತದ ಬದಲು ಭಾರತೀಯ ರಾಜ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಮೆಹದಿ ನಂಬಿದ್ದಾನೆ.

ಆತ ಬಹುಶಃ 18ನೇ ವಯಸ್ಸಿನಲ್ಲಿ ಅಲ್ ಖೈದಾ ಹರಡಿದ ಸಿದ್ಧಾಂತಗಳಿಂದ ಪ್ರಭಾವಿತನಾಗಿದ್ದಾನೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

English summary
Investigators questioning ISIS tweeter Mehdi Masroor Biswas say they have a "cast-iron" case against him. And brush aside doubts expressed in the legal fraternity over the "lack of serious charges."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X