ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಗದೀಶ್ ಪತ್ನಿ ರಮ್ಯಾಗೆ ಸರ್ಕಾರಿ ಉದ್ಯೋಗದ ಭರವಸೆ!

By Mahesh
|
Google Oneindia Kannada News

ಬೆಂಗಳೂರು, ನ.04: ಬೈಕ್ ಕಳ್ಳರಿಂದ ಹತ್ಯೆಯಾದ ಪಿಎಸ್ ಐ ಜಗದೀಶ್ ಅವರ ಪತ್ನಿ ರಮ್ಯಾ ಅವರು ಮಂಗಳವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಆಯೋಜಿಸಿದ್ದ ಜನತಾ ದರ್ಶನದಲ್ಲಿ ಕಂಡು ಬಂದರು. ಕುಟುಂಬ ನಿರ್ವಹಣೆ ಕಷ್ಟವಾಗಿದೆ, ಉದ್ಯೋಗ ನೀಡಿ ಎಂದು ಬೇಡಿಕೊಂಡರು. ಇದಕ್ಕೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿದರು.

ಮೃತ ಅಧಿಕಾರಿ ಜಗದೀಶ್ ಅವರ ಪತ್ನಿ ರಮ್ಯಾ ಅವರಿಗೆ ಸರಕಾರಿ ನೌಕರಿ ಕೊಡಲು ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಮಂಗಳವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಆಯೋಜಿಸಿದ್ದ ಜನತಾ ದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎಸ್ಸೈ ಜಗದೀಶ್ ಕುಟುಂಬಸ್ಥರು ಭೇಟಿ ಮಾಡಿ ಮನವಿ ಸಲ್ಲಿಸಿದರು. [ಜಗದೀಶ್ ಹತ್ಯೆ ಆರೋಪಿಗಳು 14 ದಿನಗಳ ಕಾಲ ಪೊಲೀಸ್ ವಶಕ್ಕೆ]

PSI Jagadish's Wife Ramya to get Government Job

ನಂತರ ಈ ಬಗ್ಗೆ ಪ್ರತಿಕ್ರಿಯಿಸಿದ ರಮ್ಯಾ, ಪತಿಯ ಸಾವಿನ ನಂತರ ಕುಟುಂಬದ ನಿರ್ವಹಣೆ ಹೊಣೆ ನನ್ನ ಮೇಲಿದೆ. ಪದವೀಧರಳಾಗಿರುವ ನನಗೆ ಯಾವುದಾದರೂ ಸರಕಾರಿ ಕಚೇರಿಯಲ್ಲಿ ನೌಕರಿಯನ್ನು ಕೊಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದೇನೆ. ಇದಕ್ಕೆ ಸ್ಪಂದಿಸಿದ ಸಿದ್ದರಾಮಯ್ಯ ಅವರು ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ ಎಂದರು.

2012ರಲ್ಲಿ ನೆಲಮಂಗಲ ತಾಲೂಕಿನ ಮಲ್ಲಾಪುರದ ಜಗದೀಶ್ ಅವರ ಜೊತೆ ರಮ್ಯಾ ಅವರ ವಿವಾಹವಾಗಿತ್ತು. ಕೋಲಾರದಲ್ಲಿ ಮದುವೆ ಮಾಡಿಕೊಂಡ ಈ ದಂಪತಿ ಟಿ ದಾಸರಹಳ್ಳಿ ನೆಲೆಸಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. [ಪಿಎಸ್ಐ ಕೊಂದ ಮಧು ಬಗ್ಗೆ ಎಸ್ಐ ದೇವರಾಜ್]

ಯಾರಿಗೂ ಕೇಡು ಬಯಸದ ನನ್ನ ಮಗನನ್ನು ಹತ್ಯೆ ಮಾಡಲಾಗಿದೆ. ಮಗನನ್ನು ಕಳೆದುಕೊಂಡ ನಾವು ಅನಾಥರಾಗಿದ್ದೇವೆ. ನಮ್ಮ ಸ್ಥಿತಿ ಯಾವ ಅಧಿಕಾರಿಗಳಿಗೂ ಬರಬಾರದೆಂದರೆ, ಅಪರಾಧಿಗಳನ್ನು ನೇಣಿಗೇರಿಸಬೇಕು ಎಂದು ಜಗದೀಶ್ ಅವರ ಪೋಷಕರು ಕಣ್ಣೀರಿಟ್ಟು ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು. (ಒನ್ ಇಂಡಿಯಾ ಸುದ್ದಿ)

English summary
Slain IPS officer PSI Jagadish's Wife Ramya to get Government Job. CM Siddaramaih has received plea from Ramya, instructed concerned department and assured her job.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X