ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಣ್ಣು ಮಕ್ಕಳ ರಕ್ಷಣೆಗಾಗಿ ಬೆಂಗಳೂರಿನಲ್ಲಿ ಜಾಗೃತಿ

By Prasad
|
Google Oneindia Kannada News

ಬೆಂಗಳೂರು, ಅ. 11 : ಹೆಣ್ಣು ಮಕ್ಕಳ ಸಬಲೀಕರಣ, ಹಾಗು ಹೆಣ್ಣುಮಗುವಿನ ಮೇಲೆ ನಡೆಯುತ್ತಿರುವ ಹಿಂಸೆಗೆ ಅಂತ್ಯ ಹಾಡುವ ಉದ್ದೇಶದೊಂದಿಗೆ ಗೋಡೆಗೆ ಚಿತ್ರ ಬಿಡಿಸುವ ವಿಶೇಷ ಕಾರ್ಯಕ್ರಮವನ್ನು ಹೆಣ್ಣು ಮಗುವಿನ ಅಂತಾರಾಷ್ಟೀಯ ದಿನವಾದ ಅ.11, ಶನಿವಾರ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಈ ವಿಶೇಷ ದಿನವನ್ನು ಮೂರನೇ ಬಾರಿಗೆ ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ.

ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಸಿಗಬೇಕೆಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ನಡೆಸಿರುವ ಪಾಕಿಸ್ತಾನ ಮಲಾಲಾ ಮತ್ತು ಮಕ್ಕಳ ಹಕ್ಕಿಗಾಗಿ ನಿರಂತರ ಹೋರಾಟ ನಡೆಸುತ್ತಿರುವ ಭಾರತದ ಕೈಲಾಶ್ ಸತ್ಯಾರ್ಥಿ ಅವರಿಗೆ ಪ್ರತಿಷ್ಠಿತ ನೊಬೆಲ್ ಶಾಂತಿ ಪುರಸ್ಕಾರ ಬಂದಿರುವ ಹೊತ್ತಿನಲ್ಲಿ ಹೆಣ್ಣು ಮಕ್ಕಳ ಅಂತಾರಾಷ್ಟ್ರೀಯ ದಿನ ಆಚರಿಸುತ್ತಿರುವುದಕ್ಕೆ ವಿಶೇಷ ಕಳೆ ಬಂದಿತ್ತು. [ಮಲಾಲ, ಸತ್ಯಾರ್ಥಿಗೆ ನೊಬೆಲ್]

International day for the girl child 3rd anniversary in Bangalore

ಭಾರತದಲ್ಲಿ ಹೆಣ್ಣು ಮಕ್ಕಳು ಇಂದಿಗೂ ತಮ್ಮ ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಈ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ರ‍್ಯಾಫಲ್ಸ್ ಸಂಸ್ಥೆಯ ವಿದ್ಯಾರ್ಥಿಗಳು ಹಾಗು ಕ್ರೈ(CRY) ಸಂಸ್ಥೆಯ ಸ್ವಯಂ ಸೇವಕರು ಬೆಂಗಳೂರಿನ ಹೊಸೂರು ರಸ್ತೆಯ ಬಾಲ್ಡ್‌ವಿನ್ ಶಾಲೆ ಬಳಿಯ ರಸ್ತೆಯ ಅಕ್ಕಪಕ್ಕದ ಗೋಡೆಗಳ ಮೇಲೆ ಚಿತ್ರ ಬಿಡಿಸಿದರು. ಈ ಚಿತ್ರದ ಮೂಲಕ ದೇಶದ ಪ್ರತೀ ಹೆಣ್ಣು ಮಗುವಿಗೂ ಸುಭದ್ರ, ಆರೋಗ್ಯಕರ ಹಾಗು ಸಂತೋಷದಾಯಕ ಬಾಲ್ಯ ಸಿಗಬೇಕು ಎಂಬ ಸಂದೇಶವನ್ನು ಸಾರಿದರು.

ಈ ಸಂದರ್ಭದಲ್ಲಿ ಮಾತನಾಡಿದ CRY ಸಂಸ್ಥೆಯ ದಕ್ಷಿಣ ವಿಭಾಗದ ಪ್ರಾದೇಶಿಕ ನಿರ್ದೇಶಕಿ ಸುಮಾ ರವಿ, ಅಕ್ಟೋಬರ್ 11ರಂದು ನಾವೆಲ್ಲರೂ ಒಗ್ಗೂಡಿ ದೇಶದ ಪ್ರತೀ ಹೆಣ್ಣು ಮಗೂ ಆರೋಗ್ಯಪೂರ್ಣ ಬದುಕು ನಡೆಸಲು ಸಹಾಯವಾಗುವ ಎಲ್ಲಾ ಬಗೆಯ ಪ್ರಯತ್ನವನ್ನು ಮಾಡಬೇಕು. ಈ ದಿಸೆಯಲ್ಲಿ ನಮ್ಮೊಟ್ಟಿಗೆ ರ‍್ಯಾಫಲ್ಸ್ ಮಿಲೇನಿಯಂ ಇಂಟರ್‌ನ್ಯಾಷನಲ್ ಸಂಸ್ಥೆ ಕೈ ಜೋಡಿಸಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.


ನಂತರ ಮಾತನಾಡಿದ ರ‍್ಯಾಫಲ್ಸ್ ಮಿಲೇನಿಯಮ್ ಇಂಟರ್‌ನ್ಯಾಷನಲ್ ಸಂಸ್ಥೆಯ ನಿರ್ದೇಶಕ ಡಾರೆನ್ ಕಾಂಗ್ ಮಾತನಾಡಿ, ಕಲೆ ಹಾಗು ವಿನ್ಯಾಸವನ್ನು ಸಾಮಾಜಿಕ ಜಾಗೃತಿ ಮೂಲಕ ಬದಲಾವಣೆಗೆ ಬಳಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಈ ರೀತಿಯ ಪ್ರಯತ್ನಗಳು ಸಾಮಾಜಿಕ ಕಾಳಜಿಯುಳ್ಳ ವಿನ್ಯಾಸಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಲು ಸಹಕರಿಸುತ್ತೇವೆ ಎಂದರು.

ವಿಶ್ವಸಂಸ್ಥೆಯ ಆಶಯದಂತೆ 2011ರಿಂದ ಹೆಣ್ಣು ಮಗುವಿನ ಅಂತಾರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತಿದೆ. 2012ರಲ್ಲಿ ಬಾಲ್ಯ ವಿವಾಹ ಹಾಗು 2013ರಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಕುರಿತಂತೆ ಇದೇ ರೀತಿ ಸಂಸ್ಥೆಯಿಂದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ದಿವ್ಯ - 77605 98121

English summary
October 11 is observed as International day for the girl child. Raffles Millennium students along with Child Rights and You (CRY) activists painted a message for the safety of Girl Child near Baldwin school on Hosur road in Bangalore. 3rd anniversary celebrated on Oct 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X