ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ಫಿ ಟೆಕ್ಕಿ ರಾಘವೇಂದ್ರ ನಾಪತ್ತೆ, ತಾಯಿಯ ಅಳಲು

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 23: ಬೆಲ್ಜಿಯಂನ ಬ್ರುಸೆಲ್ಸ್ ನ ವಿಮಾನ ನಿಲ್ದಾಣದಲ್ಲಿ ಅವಳಿ ಸ್ಫೋಟ ಸಂಭವಿಸುವುದಕ್ಕೂ ಒಂದು ಗಂಟೆಗೂ ಮುನ್ನ ತಮ್ಮ ತಾಯಿಯ ಜೊತೆ ಮಾತನಾಡಿದ್ದರು. ಕಳೆದ ತಿಂಗಳಷ್ಟೆ ತಮ್ಮ ಮಡದಿ ಹಾಗೂ ನವಜಾತ ಶಿಶು ನೋಡಿಕೊಂಡು ಬ್ರುಸೆಲ್ಸ್ ಗೆ ಮರಳಿದ್ದರು. ಈಗ ಮಂಗಳವಾರದಿಂದ ನಾಪತ್ತೆಯಾಗಿದ್ದಾರೆ.

ಬೆಂಗಳೂರಿನ ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ ನ ಉದ್ಯೋಗಿ ರಾಘವೇಂದ್ರ ಗಣೇಶನ್ ನಾಪತ್ತೆಯಾಗಿದ್ದಾರೆ ಎಂದು ಬುಧವಾರ ಕುಟುಂಬಸ್ಥರು ತಿಳಿಸಿದ್ದಾರೆ. ರಾಘವೇಂದ್ರ ಅವರ ಪತ್ತೆಯಾಗಿ ಭಾರತೀಯ ರಾಯಭಾರ ಕಚೇರಿ ಹಾಗೂ ಅಲ್ಲಿನ ಬ್ರುಸೆಲ್ಸ್ ಕಚೇರಿ ನಿರಂತರವಾಗಿ ಹುಡುಕಾಟ ನಡೆಸಿದೆ.[ಬ್ರುಸೆಲ್ಸ್ ನಲ್ಲಿ ಸ್ಫೋಟ: ಇನ್ಫೋಸಿಸ್ ಟೆಕ್ಕಿ ರಾಘವೇಂದ್ರ ನಾಪತ್ತೆ!]

ರಾಘವೇಂದ್ರನ್ ಗಣೇಶನ್ ಅವರ ನಾಪತ್ತೆಯಾಗಿರುವುದನ್ನು ದೃಢಪಡಿಸುರುವ ಬ್ರುಸೆಲ್ಸ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ರಾಘವೇಂದ್ರನ್ ಅವರ ಪತ್ತೆಗಾಗಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ. ಮಂಗಳವಾರ ನಡೆದ ದುರ್ಘಟನೆಯಲ್ಲಿ 34 ಜನ ಸಾವನ್ನಪ್ಪಿದ್ದು, 130ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

Raghavendran Ganesh missing

ನಾಲ್ಕು ವರ್ಷದಿಂದ ಬ್ರುಸೆಲ್ಸ್ ನಲ್ಲಿ ವಾಸ: ಬೆಂಗಳೂರು ಮೂಲದ ಇನ್ಫೋಸಿಸ್ ಸಂಸ್ಥೆ ಸೇರಿದ ಸಾಫ್ಟ್ ವೇರ್ ಇಂಜಿನಿಯರ್ ರಾಘವೇಂದ್ರ ಅವರು ಮೊದಲಿಗೆ ಪುಣೆಯಲ್ಲಿ ನಾಲ್ಕು ವರ್ಷ ಕಾರ್ಯನಿರ್ವಹಿಸಿದ್ದರು. ನಂತರ ಬ್ರುಸೆಲ್ಸ್ ಗೆ ಬಂದು ನಾಲ್ಕು ವರ್ಷವಾಗಿದೆ.

ಕಳೆದ ತಿಂಗಳಷ್ಟೇ ತಮ್ಮ ನವಜಾತ ಶಿಶು ನೋಡಲು ಚೆನ್ನೈಗೆ ಬಂದಿದ್ದರು. ಈ ದುರ್ಘಟನೆ ನಡೆಯುವುದಕ್ಕೂ ಮುನ್ನ ಮುಂಬೈನಲ್ಲಿರುವ ಅವರ ತಾಯಿ ಅಣ್ಣಪೂರ್ಣಿ ಗಣೇಶನ್ ಅವರಿಗೆ 1:25pm IST ಸ್ಕೈಪ್ ಮೂಲಕ ವಿಡಿಯೋ ಕರೆ ಮಾಡಿದ್ದಾರೆ. ತಾಯಿ ಜೊತೆ 10 ನಿಮಿಷ ಮಾತನಾಡಿದ್ದಾರೆ. ಇದೀಗ ಕಚೇರಿಗೆ ತೆರಳುತ್ತಿದ್ದೇನೆ ಎಂದುತಿಳಿಸಿದ್ದಾರೆ.[ಬ್ರುಸೆಲ್ಸ್ ನಂತರ ಇನ್ನಷ್ಟು ದಾಳಿ ಮಾಡ್ತೇವೆ: ಐಎಸ್ಐಎಸ್]

ಮತ್ತೊಬ್ಬ ಮಗನಿಂದ ಮಾಹಿತಿ : ಇದಾದ 1 ಗಂಟೆ ಬಳಿಕ ಅನ್ನಪೂರ್ಣಿ ಅವರ ಜರ್ಮನಿಯಲ್ಲಿರುವ ಮತ್ತೊಬ್ಬ ಮಗನಿಂದ ಕರೆ ಬಂದಿದೆ. ಬ್ರುಸೆಲ್ಸ್ ನ ವಿಮಾನ ನಿಲ್ದಾಣದ ಎರಡು ಟರ್ಮಿನಲ್ ಗಳ ಬಳಿ ಬಾಂಬ್ ಸ್ಫೋಟವಾಗಿದೆ. ರಾಘವೇಂದ್ರನಿಗೆ ಕರೆ ಮಾಡುತ್ತಿದ್ದೇನೆ ಸಂಪರ್ಕ ಸಿಗುತ್ತಿಲ್ಲ ಎಂದಿದ್ದಾರೆ.

ವಿಮಾನ ನಿಲ್ದಾಣ ನಂತರ ಮೆಟ್ರೋ ನಿಲ್ದಾಣ ಬಳಿ ಕೂಡಾ ಸ್ಫೋಟಗೊಂಡ ಸುದ್ದಿ ನೋಡಿದ ಮೇಲೆ ನಮ್ಮ ಆತಂಕ ಹೆಚ್ಚಾಯಿತು. ನನ್ನ ಮಗ ಪ್ರತಿನಿತ್ಯ ಮೆಟ್ರೋ ರೂಟ್ ನಲ್ಲೇ ಪ್ರಯಾಣಿಸುತ್ತಾನೆ. ತಕ್ಷಣವೇ ಇನ್ಫೋಸಿಸ್ ಬೆಂಗಳೂರು ವಿಭಾಗದ ಮಾನವ ಸಂಪನ್ಮೂಲ ಅಧಿಕಾರಿಗಳಿಗೆ ಕರೆ ಮಾಡಿ ವಿವರ ಕೇಳಿದೆವು. ಪುಣೆ ಹಾಗೂ ಬ್ರುಸೆಲ್ಸ್ ನಲ್ಲೂ ವಿಚಾರಿಸಲಾಯಿತು.

ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ರಾಯಭಾರಿ ಕಚೇರಿ ಪ್ರಕಾರ, ಮೃತಪಟ್ಟವರು ಹಾಗೂ ಗಾಯಾಳುಗಳ ಪಟ್ಟಿಯಲ್ಲೂ ನನ್ನ ಮಗನ ಹೆಸರಿಲ್ಲ. ನಾವೆಲ್ಲ ಆತಂಕದಿಂದ ಇದ್ದೇವೆ. ಆದರೆ, ರಾಘವೇಂದ್ರ ಬದುಕಿರುವ ನಂಬಿಕೆ ಇದೆ ಎಂದು ಅನ್ನಪೂರ್ಣಿ ಅವರು ವೆಬ್ ಸೈಟ್ ವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.


(ಒನ್ಇಂಡಿಯಾ ಸುದ್ದಿ)

English summary
We are doing our best to locate Raghavendran Ganesh: Sushma Swaraj Tweets. He spoke to his mother, Annapoorni Ganeshan, who lives in Mumbai just an hour before the Brussels Attacks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X