ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪನಗದೀಕರಣದಿಂದ ಅಮೆರಿಕ ಚುನಾವಣೆವರೆಗೆ ಇನ್ಫಿ ಸಿಇಒ ಸಿಕ್ಕಾ ಪತ್ರ

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಜನವರಿ 4: ಕೆಲಸದಲ್ಲಿ ನಿರಾಸಕ್ತಿ, ನೀರಸ ಪ್ರವೃತ್ತಿ ತೋರಿಸದಿರಿ. ನಮ್ಮ ಮುಂದಿನ ಹಾದಿ ತುಂಬ ದೀರ್ಘವಾಗಿದೆ ಮತ್ತು ಅದರಲ್ಲಿ ಸಾಗುವುದು ಸಲೀಸಲ್ಲ ಎಂದು ಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕಾ ಕಂಪೆನಿ ಉದ್ಯೋಗಿಗಳಿಗೆ ಪತ್ರ ಬರೆದಿದ್ದಾರೆ. ಹೊಸ ವರ್ಷದಲ್ಲಿ ಸಿಕ್ಕಾ ಅವರು ಬರೆದ ಪತ್ರ ಕುತೂಹಲ ಮೂಡಿಸುವಂತಿದೆ.

ಎದುರಿಗಿರುವ ಬೆಟ್ಟ ತುಂಬ ಎತ್ತರದ್ದು. ಅದನ್ನು ದಾಟಿ ಹೋಗದ ಹೊರತು ಬೇರೆ ದಾರಿಗಳಿಲ್ಲ. ನಾವು ಅದನ್ನು ದಾಟಲು ಆಗಲಿಲ್ಲ ಅಂದರೆ ಹಳತಾಗುತ್ತೇವೆ. ತಂತ್ರಜ್ಞಾನ ಹಾಗೂ ಯಾಂತ್ರೀಕರಣದ ಬದಲಾವಣೆಗೆ ನಾವು ಒಗ್ಗಿಕೊಳ್ಳಲೇ ಬೇಕಾಗಿದೆ ಎಂದು ಸಿಕ್ಕಾ ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ.[ಇನ್ಫೋಸಿಸ್ ನಲ್ಲಿ ವಾರವಿಡೀ ರಾಜ್ಯೋತ್ಸವ ಸಂಭ್ರಮ]

ಈಚೆಗೆ ಕೆಲವು ತಂಡಗಳು ಭೇಟಿ ಮಾಡಿದ ಪ್ರಸ್ತಾವ ಮಾಡಿರುವ ಸಿಕ್ಕಾ, ಯಾಂತ್ರೀಕರಣ ಹಾಗೂ ಆವಿಷ್ಕಾರದ ಎರಡು ಬಗೆಯ ಸಾಧ್ಯತೆಗಳನ್ನು ಅರ್ಥ ಮಾಡಿಕೊಳ್ಳುವುದನ್ನು, ಜಾರಿ ಮಾಡುವುದನ್ನು ಆರಂಭಿಸಿದ್ದೇವೆ. ನಮಗೆ ವಹಿಸಿದ ಕೆಲಸವನ್ನು ಯಾಂತ್ರಿಕವಾಗಿ ಮಾಡುವುದಷ್ಟೇ ಅಲ್ಲ, ನಮ್ಮ ಗ್ರಾಹಕರಿಗೆ ಮೌಲ್ಯ ತರುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದಿದ್ದಾರೆ.

Infosys CEO talks about demonetisation, US elections

ಆಗಸ್ಟ್ 2014ರಲ್ಲಿ ವಿಶಾಕ್ ಸಿಕ್ಕಾ ಇನ್ಫೋಸಿಸ್ ನ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಜವಾಬ್ದಾರಿ ಸ್ವೀಕರಿಸಿದ್ದರು. 2016ರ ಫೆಬ್ರವರಿಯಲ್ಲಿ ಎರಡು ವರ್ಷಗಳ ಕಾಲ ಅವರ ಅವಧಿಯನ್ನು ವಿಸ್ತರಿಸಲಾಯಿತು. ಕಳೆದ ವರ್ಷದ ಮಹತ್ವದ ಘಟನೆಗಳನ್ನು ಸಹ ಸಿಕ್ಕಾ ಪ್ರಸ್ತಾವ ಮಾಡಿದ್ದಾರೆ.

ಬ್ರೆಕ್ಸ್ ಇಟ್, ಅಮೆರಿಕ ಅಧ್ಯಕ್ಷೀಯ ಚುನಾವಣೆ, ಅಪನಗದೀಕರಣ, ಸೈಬರ್ ಸುರಕ್ಷೆ, ವಲಸಿಗರು ಮತ್ತು ಭಯೋತ್ಪಾದನೆ ಸನ್ನಿವೇಶ ಮತ್ತು ಇನ್ನೂ ಹಲವು ಘಟನೆಗಳು ನಾವು ಜಗತ್ತನ್ನು ನೋಡುವ ರೀತಿಯನ್ನೇ ಬದಲಿಸಿವೆ. ಯಾವುದೇ ದೊಡ್ಡ ಆತಂಕವು ನಮ್ಮ ಕಾಲಘಟ್ಟದ ಅತಿ ದೊಡ್ಡ ಚಲನಶಕ್ತಿಯಾದ ತಂತಜ್ಞಾನ ಹಾಗೂ ಡಿಜಿಟಲ್ ತಂತ್ರಜ್ಞಾನವನ್ನು ತಡೆಯಲು ಸಾಧ್ಯವಿಲ್ಲ.[2017ರಲ್ಲಿ ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಆರಂಭ]

ನಮ್ಮ ವ್ಯವಹಾರಕ್ಕೆ ಭವಿಷ್ಯದಲ್ಲಿ ಇನ್ನಷ್ಟು ಅಡ್ಡಿ-ಆತಂಕ ಎದುರಾಗುವ ಸಾಧ್ಯತೆ ಇದೆ. ತಂತ್ರಜ್ಞಾನ ಹಾಗೂ ರಾಜಕೀಯ ಸನ್ನಿವೇಶಗಳ ಅಡೆತಡೆಗಳು ಎದುರಾಗಬಹುದು. ನಾವು ಕಿರಿದಾದ ಸ್ಥಳದಲ್ಲಿ ಉಳಿದುಕೊಂಡು ಬಿಟ್ಟರೆ ಇಲ್ಲಿ ಉಳಿಯುವುದು ತುಂಬ ಕಷ್ಟವಾಗುತ್ತದೆ ಎಂದು ವಿಶಾಲ್ ಸಿಕ್ಕಾ ಬರೆದಿರುವ ಪತ್ರ ಹಲವು ಅರ್ಥವನ್ನು ಧ್ವನಿಸುವಂತಿದೆ.

English summary
Cautioning Infosys employees against "lackadaisical" attitude towards greater value creation, CEO Vishal Sikka in a letter to them said "the road ahead is long and not easy".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X