ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟೆಂಡರ್ ಶ್ಯೂರ್ ಯೋಜನೆಯ ಬಗ್ಗೆ ನಿಮಗೆಷ್ಟು ಗೊತ್ತು?

ಜಗತ್ತಿನ ಬಹುತೇಕ ಪ್ರಮುಖ ನಗರಗಳ ರಸ್ತೆಗಳು ಟೆಂಡರ್‌ ಶ್ಯೂರ್‌ ಸೌಲಭ್ಯವನ್ನು ಪಡೆದಿವೆ. ಆಯಾ ಸೇವಾ ಸಂಸ್ಥೆಗಳು ತಮ್ಮ ಪಾಲಿನ ಹೊಣೆಯನ್ನು ಹೊರಬೇಕಾಗುತ್ತದೆ.

|
Google Oneindia Kannada News

ಯಾವುದೇ ಕಾರಣಕ್ಕೂ ಮತ್ತೆ ಮತ್ತೆ ಅಗೆಯಲು ಅವಕಾಶ ಇಲ್ಲದಂತೆ ರಸ್ತೆಗಳನ್ನು ವಿನ್ಯಾಸಗೊಳಿಸುವ ವ್ಯವಸ್ಥೆಯೇ ಟೆಂಡರ್‌ ಶ್ಯೂರ್‌. ಇದು ಭಾರತದ ಪ್ರಪ್ರಥಮ ಮಾರ್ಗಸೂಚಿ ಪ್ರಕಟನೆ ಇದಾಗಿದ್ದು ಅಂತರರಾಷ್ಟ್ರೀಯ ಗುಣಮಟ್ಟದ ವ್ಯವಸ್ಥೆ ಇದಾಗಿದೆ.

ಜಗತ್ತಿನ ಬಹುತೇಕ ಪ್ರಮುಖ ನಗರಗಳ ರಸ್ತೆಗಳು ಟೆಂಡರ್‌ ಶ್ಯೂರ್‌ ಸೌಲಭ್ಯವನ್ನು ಪಡೆದಿವೆ. ಬಿಬಿಎಂಪಿ, ಬಿಎಂಟಿಸಿ, ಬೆಸ್ಕಾಂ, ಜಲಮಂಡಳಿ ಮತ್ತು ಪೊಲೀಸ್‌ ಇಲಾಖೆ ಸೇರಿದಂತೆ ಎಲ್ಲ ಸೇವಾ ಸಂಸ್ಥೆಗಳನ್ನು ಒಳಗೊಂಡ ಏಕಗವಾಕ್ಷಿ ವ್ಯವಸ್ಥೆ ಟೆಂಡರ್‌ ಶ್ಯೂರ್‌ನಲ್ಲಿ ಇರುತ್ತದೆ. ಆಯಾ ಸೇವಾ ಸಂಸ್ಥೆಗಳು ತಮ್ಮ ಪಾಲಿನ ಹೊಣೆಯನ್ನು ಹೊರಬೇಕಾಗುತ್ತದೆ.

ಕುಡಿಯುವ ನೀರಿನ ಕೊಳವೆ, ಒಳಚರಂಡಿ ಮಾರ್ಗ, ಬೆಸ್ಕಾಂ ಸಂಪರ್ಕ ಜಾಲ, ಆಪ್ಟಿಕಲ್‌ ಫೈಬರ್‌ ಕೇಬಲ್‌ (ಒಎಫ್‌ಸಿ), ಬೀದಿದೀಪ, ಸಿಗ್ನಲ್‌ ದೀಪ, ಸಿಸಿ ಟಿ.ವಿ ಕೇಬಲ್‌, ಗ್ಯಾಸ್‌ ಸಂಪರ್ಕ ಜಾಲ ಎಲ್ಲದಕ್ಕೂ ರಸ್ತೆ ಬದಿಯಲ್ಲಿ ಯುಟಿಲಿಟಿ ಡಕ್ಟ್‌ (ಸೇವಾ ಸಂಪರ್ಕ ಜಾಲದ ನೆಲದಡಿ ಮಾರ್ಗ) ವ್ಯವಸ್ಥೆ ರೂಪಿಸಲಾಗುತ್ತದೆ.

ಸಮತಟ್ಟಾದ ರಸ್ತೆಗಳು

ಸಮತಟ್ಟಾದ ರಸ್ತೆಗಳು

ಟೆಂಡರ್ ಶ್ಯೂರ್ ರಸ್ತೆಗಳು ಬಳಕೆದಾರನ ಸ್ವಾಭಾವಿಕ ಬದಲಾವಣೆಗೆ ಅನುಗುಣವಾಗಿ ಯಾವುದೇ ಸಮತಟ್ಟು ಅಥವಾ ದಿಣ್ಣೆ ಪ್ರದೇಶಗಳನ್ನು ಬೆಸೆದು ಸುಂದರವಾಗಿ ಕಾಣುವಂತೆ ಮಾಡಲಾಗುತ್ತದೆ. ನಗರದ ರಸ್ತೆಗಳ ಸಮಸ್ಯೆಗಳ ಗೋಳು ತಪ್ಪಿಸಲು ಬಂದ ಟೆಂಡರ್ ಶ್ಯೂರ್ ಯಾವುದೇ ಕಾರಣಕ್ಕೂ ರಸ್ತೆ ಹಾಳಾಗದಂತೆ ಕಾಪಾಡುತ್ತದೆ. ಪಾದಚಾರಿಗಳು ಮತ್ತು ಸೈಕಲ್ ಸವಾರರಿಗೂ ಸುರಕ್ಷಿತ ಸ್ಥಳಾವಕಾಶ ಮಾಡಿಕೊಟ್ಟಿದೆ.

700 ಕೋಟಿ ರು. ವೆಚ್ಚ

700 ಕೋಟಿ ರು. ವೆಚ್ಚ

ವಿಶ್ವದಲ್ಲಿಯೆ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಈ ಯೋಜನೆಯನ್ನು ಮಾಡಲಾಗಿದ್ದು. ಈವರೆಗೆ ವಿವಿಧ ರಸ್ತೆಗಳ ಕಾಮಗಾರಿ ಅಭಿವೃದ್ದಿಗೆ 700 ಕೋಟಿ ವೆಚ್ಚ ನೀಡಲಾಗಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಈ ವ್ಯವಸ್ಥೆಯನ್ನು ಅನುಷ್ಟಾನಕ್ಕೆ ತರಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಈ ಯೋಜನೆಯನ್ನು 2014 ರಲ್ಲಿ ಬೆಂಗಳೂರಿ 7 ರಸ್ತೆಗಳ ಕಾಮಗಾರಿಯಿಂದ ಆರಂಭಗೊಂಡು ಕಳೆದ ವರ್ಷ ಮೊದಲ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಿದೆ.

ಈಗಾಗಲೇ ಉದ್ಘಾಟನೆ

ಈಗಾಗಲೇ ಉದ್ಘಾಟನೆ

ಇದೀಗ 2017ರಲ್ಲಿ ಮೊದಲ ಹಂತದ 4 ಹಾಗೂ 2ನೇ ಹಂತದ ಕಾಮಗಾರಿಯಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ, ಕಮಿಷನರೇಟ್ ರಸ್ತೆ, ಮ್ಯೂಸಿಯಂ ರಸ್ತೆ, ಮತ್ತು ನೃಪತುಂಗಾ ರಸ್ತೆಗಳು ಪೂರ್ಣಗೊಂಡು ಉದ್ಘಾಟನೆಗೊಂಡಿದೆ.

ಅನುದಾನ ಹೆಚ್ಚಳ

ಅನುದಾನ ಹೆಚ್ಚಳ

ಬಿಬಿಎಂಪಿ ಯೋಜನೆಯಂತೆ ಮೊದಲನೇ ಹಂತದ 7 ರಸ್ತೆಗಳ ಅಭಿವೃದ್ಧಿಗಾಗಿ 115.33 ಕೋಟಿ ರೂ. ನಿಗದಿ ಮಾಡಲಾಗಿತ್ತು. ನಂತರ ಕಾಮಗಾರಿ ವೆಚ್ಚ ಹೆಚ್ಚಳವಾಗುತ್ತಿದೆ ಎಂಬ ಕಾರಣ ನೀಡಿ ಅದನ್ನು 130 ಕೋಟಿ ರೂ.ಗೆ ಹೆಚ್ಚಿಸಲಾಯಿತು;.

ಮತ್ತಷ್ಟು ರಸ್ತೆಗಳು

ಮತ್ತಷ್ಟು ರಸ್ತೆಗಳು

ಈವರೆಗೆ 13 ರಸ್ತೆಗಳಿಗೆ 200ಕೋಟಿ ವೆಚ್ಚ ಮಾಡಲಾಗಿದೆ. ಸದ್ಯ ಲೋಕಾರ್ಪಣೆಗೊಂಡ ರಸ್ತೆಗಳು 1 ಕೋಟಿ 25 ಲಕ್ಷ ರು. ವೆಚ್ಚದಾಗಿದೆ. ಮುಂದೆ 25 ರಸ್ತೆಗಳನ್ನು 700 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಸಾಧ್ಯತೆಗಳಿವೆ.

English summary
Here is the some information regarding the tender sure roads of Bengaluru. Government is going to construct some more tender sure roads in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X