ದೊಮ್ಮಲೂರು: ಶಂಕರ್ ನಾಗ್ ಪಾರ್ಕ್ ನಲ್ಲಿ 'ಇಂದಿರಾ ಕ್ಯಾಂಟೀನ್' ಗೆ ತಡೆ

Posted By:
Subscribe to Oneindia Kannada

ಬೆಂಗಳೂರು, ಜುಲೈ 17: ದೊಮ್ಮಲೂರಿನಲ್ಲಿರುವ ಶಂಕರ್ ನಾಗ್ ಉದ್ಯಾನವನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಮುಂದಾಗಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಗೆ (ಬಿಬಿಎಂಪಿ) ಸದ್ಯಕ್ಕೆ ಆ ಯೋಜನೆಯನ್ನು ಸ್ಥಗಿತಗೊಳಿಸಿದೆ.

ಕ್ಯಾಂಟೀನ್ ನಿರ್ಮಾಣಕ್ಕಾಗಿ ಪಾರ್ಕ್ ನಲ್ಲಿ ನಡೆಯಬೇಕಿದ್ದ ಮರಗಳ ಮಾರಣಹೋಮ ನಡೆಸಲು ಬಿಬಿಎಂಪಿ ಸಜ್ಜಾಗಿತ್ತು. ಇದರ ವಿರುದ್ಧ ಅಲ್ಲಿ ಸಾರ್ವಜನಿಕರ ಪ್ರತಿಭಟನೆಯೂ ನಡೆದಿತ್ತು.

INDIRA CANTEEN CONSTRUCTION INSIDE DOMLUR PARK SHELVED

ಈ ಹಿನ್ನೆಲೆಯಲ್ಲಿ, ಕೆಲ ಅಂತರ್ಜಾಲ ಮಾಧ್ಯಮಗಳು ಅಲ್ಲಿನ ಸ್ಥಳೀಯರ ಅನಿಸಿಕೆಗಳನ್ನು ಸಂಗ್ರಹಿಸಿ ವಿಶೇಷ ವರದಿಯೊಂದನ್ನು ಪ್ರಕಟಿಸಿತ್ತು.

ಈ ವರದಿಗಳು ಬಂದ ಬಳಿಕ, ಆ ಕ್ಷೇತ್ರದ ಶಾಸಕ ಎನ್.ಎ. ಹ್ಯಾರಿಸ್, ಇತ್ತೀಚೆಗೆ ಶಂಕರ್ ನಾಗ್ ಪಾರ್ಕ್ ಗೆ ಭೇಟಿ ನೀಡಿ ಅವಲೋಕಿಸಿದ್ದರು.

ಅಲ್ಲಿನ ವೈವಿಧ್ಯಮರ ಮರ, ಗಡಿ ಹಾಗೂ ಸಾರ್ವಜನಿಕರು ಆ ಪಾರ್ಕ್ ಬಗ್ಗೆ ಇಟ್ಟುಕೊಂಡಿರುವ ಪ್ರೀತಿಯನ್ನು ಗಮನಿಸಿದ ಅವರು, ತಕ್ಷಣವೇ ಬಿಬಿಎಂಪಿಗೆ ಇಂದಿರಾ ಕ್ಯಾಂಟೀನ್ ಅನ್ನು ಪಾರ್ಕ್ ನೊಳಗೆ ನಿರ್ಮಿಸುವ ಯೋಜನೆ ಕೈಬಿಡಬೇಕೆಂದು ಆಗ್ರಹಿಸಿದ್ದರು.

ಇದರನ್ವಯ, ಬಿಬಿಎಂಪಿ ಆ ಯೋಜನೆಗೆ ಸದ್ಯದ ಮಟ್ಟಿಗೆ ಪೂರ್ಣ ವಿರಾಮ ನೀಡಿದೆ.

Indira Canteen starts from August 15th Menu details in the video
English summary
The Bruhat Bengaluru Mahanagara Palike (BBMP) has shelved the plans to construct an Indira Canteen inside the Shankar Nag Park in Domlur.
Please Wait while comments are loading...