ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ವಡೆ, ಪೂರಿ, ಬೊಂಡ ಮೇಲೂ ತೆರಿಗೆ ಹಾಕಿ"

By Mahesh
|
Google Oneindia Kannada News

ಬೆಂಗಳೂರು, ಜುಲೈ 12: ಪಿಜ್ಜಾ, ಬರ್ಗರ್, ಪಾಸ್ತಾ ಮುಂತಾದ ಜಂಕ್ ಫುಡ್ ಮೇಲೆ ಕೊಬ್ಬು ದರ (fat tax) ಹಾಕಲು ಕೇರಳ ಸರ್ಕಾರ ಮುಂದಾಗಿರುವ ಸುದ್ದಿ ಓದಿರಬಹುದು. ಈಗ ಇದೇ ಕ್ರಮವನ್ನು ಕರ್ನಾಟಕದಲ್ಲೂ ಅಳವಡಿಸಿಕೊಳ್ಳಿ ಹಾಗೂ ಭಾರತೀಯ ಕುರುಕುಲು ತಿಂಡಿಗಳ ಮೇಲೂ ತೆರಿಗೆ ವಿಧಿಸಿ ಎಂದು ಪೌಷ್ಟಿಕಾಂಶ ತಜ್ಞರು ಮತ್ತು ಆಹಾರಪಥ್ಯ ಕ್ರಮದ ತಜ್ಞರು ಆಗ್ರಹಿಸಿದ್ದಾರೆ.

ಬರ್ಗರ್, ಪಿಜ್ಜಾ, ಧಪ್ನಟ್ ಹಾಗೂ ಸ್ಯಾಂಡ್ವಿಚ್ ಗಳ ಮೇಲೆ ಶೇಕಡ 14.5ರಷ್ಟು ಬೊಜ್ಜು ತೆರಿಗೆಯನ್ನು ಕೇರಳ ಸರ್ಕಾರ ವಿಧಿಸಿದೆ. ದೇಶದದಲ್ಲೇ ಮೊಟ್ಟ ಮೊದಲ ಬಾರಿಗೆ ಇಂಥದ್ದೊಂಡು ಆರೋಗ್ಯಕರ ಹೆಜ್ಜೆ ಇಟ್ಟಿರುವುದಕ್ಕೆ ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.[ಮೈಸೂರ್ ಪಾಕ್ ಜನ್ಮ ತಾಳಿದ ಸವಿಯಾದ ಕಥೆ]

 Indian Dietetic Association wants Indian Food Items to be taxed in Karnataka

ಸಾರ್ವಜನಿಕ ಆರೋಗ್ಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕದಲ್ಲೂ ಈ ಕ್ರಮ ಜರುಗಿಸಲು ಸಿದ್ದರಾಮಯ್ಯ ಸರ್ಕಾರ ಮುಂದಾಗಬೇಕು. ಕೇವಲ ಅಂತಾರಾಷ್ಟ್ರೀಯ ಆಹಾರಗಳ ಮೇಲೆ ಈ ಬೊಜ್ಜು ತೆರಿಗೆ ವಿಧಿಸುವುದಲ್ಲ. ಬದಲಾಗಿ ಅಧಿಕ ಕೊಬ್ಬು, ಸಕ್ಕರೆ ಮತ್ತು ಸಂಸ್ಕರಿತ ಆಹಾರದ ಮೇಲೆ ಕೂಡಾ ವಿಧಿಸಬೇಕು ಎಂದು ಭಾರತೀಯ ಆಹಾರಪಥ್ಯ ಸಂಗದ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷೆ ಶೀಲಾ ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟಿದ್ದಾರೆ. [ಜಂಕ್ ಫುಡ್‌ ಗಳ ಮೇಲೆ ಕೇರಳದಲ್ಲಿ ಶೇ 14ರಷ್ಟು fat tax]

ಭಾರತೀಯ ತಿನಸುಗಳಾದ ವಡಾ, ನಮ್ಕೀನ್, ಬಜ್ಜಿ, ಪೂರಿ ಕೂಡಾ ತೆರಿಗೆ ಜಾಲದ ಒಳಗೆ ಬರಬೇಕು ಎನ್ನುವುದು ತಜ್ಞರ ಸಲಹೆ. ಇದರಿಂದ ಆಹಾರದ ಆದ್ಯತೆ, ಸೇವನೆ ಕ್ರಮ ಬದಲಾಗಬಹುದು ಎಂದು ನಿರೀಕ್ಷಿಸಲಾಗಿದೆ.

English summary
Sheela Krishnaswamy, president, Karnataka chapter of Indian Dietetic Association urged Karnataka should also follow the Kerala government's health step and extend it to many Indian food items like vada, namkeen, bajji, puri among others
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X