ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ 63 ನೇ ಹೃದ್ರೋಗ ತಜ್ಞರ ಸಮ್ಮೇಳನಕ್ಕೆ ಚಾಲನೆ

ದೊಡ್ಡ ಕಾರ್ಡಿವಾಸ್ಕುಲರ್ ಮತ್ತು ಥೊರೋಟಿ ಸರ್ಜನ್ ಗಳ ಮಹಾಸಮ್ಮೇಳನ ಫೆಬ್ರವರಿ 23 ರಿಂದ 26 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 23, 2017: ಇಂಡಿಯನ್ ಅಸೋಸಿಯೇಶನ್ ಆಫ್ ಕಾರ್ಡಿವಾಸ್ಕುಲರ್ ಅಂಡ್ ಥೊರೋಟಿಕ್ ಸರ್ಜನ್ಸ್(ಐಎಸಿಟಿಎಸ್ ) ಒಂದು ದೊಡ್ಡ ಕಾರ್ಡಿವಾಸ್ಕುಲರ್ ಮತ್ತು ಥೊರೋಟಿ ಸರ್ಜನ್ ಗಳ ಮಹಾಸಮ್ಮೇಳನವಾಗಿದೆ. ಇದರಲ್ಲಿ ಪ್ರತಿವರ್ಷ ವಿಶ್ವದಾದ್ಯಂತದ ಉಪನ್ಯಾಸಕರು ಮತ್ತು ಪ್ರತಿನಿಧಿಗಳು ಪಾಲ್ಗೊಳ್ಳುತ್ತಾರೆ.

ಇದರ 63 ನೇ ಸಮ್ಮೇಳನ ಇಂದು (ಫೆಬ್ರವರಿ 23 ರಿಂದ 26 ರವರೆಗೆ) ಆರಂಭವಾಗಿದೆ. ಈ ಸಮ್ಮೇಳನವನ್ನು ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಆರ್ ಪಾಟೀಲ್ ಅವರು ಉದ್ಘಾಟಿಸಿದರು.

'ಹೊಸ ಗಡಿಯನ್ನು ತಲುಪುವ, ನಮ್ಮ ಇಚ್ಛೆ, ನಿಮ್ಮ ಕೌಶಲ್ಯ' ಎಂಬ ಧ್ಯೇಯವಾಕ್ಯದೊಂದಿಗೆ ಈ ಬಾರಿಯ ವಾಣಿಜ್ಯ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಸಮ್ಮೇಳನದಲ್ಲಿ ಉಪನ್ಯಾಸಗಳು, ಅತಿಥಿ ಉಪನ್ಯಾಸಗಳು, ಚರ್ಚೆಗಳು, ಸಂವಾದಗಳು ಮತ್ತು ಇತ್ತೀಚಿನ ಸುಧಾರಿತ ತಂತ್ರಜ್ಞಾನಗಳ ಬಗ್ಗೆ ಹತ್ತು ಹಲವಾರು ಚರ್ಚೆಗಳು ನಡೆಯುತ್ತಿವೆ.

Indian Association of Cardiovascular and Thoracic Surgeons (IACTS) IACTSCON 2017 63rd edition

ಈ ಸಂದರ್ಭದಲ್ಲಿ ಮಾತನಾಡಿದ ಐಎಸಿಟಿಎಸ್ ಸಿಒಎನ್ ನ ಅಧ್ಯಕ್ಷ ಡಾ.ವಿವೇಕ್ ಜವಳಿ ಅವರು, 'ದೇಶದ ವಿವಿಧ ಭಾಗಗಳ 2000 ಕ್ಕೂ ಅಧಿಕ ಹೃದ್ರೋಗ ತಜ್ಞರು ಮತ್ತು ಎದೆರೋಗ ಶಸ್ತ್ರಚಿಕಿತ್ಸಕರು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ.

ವೈದ್ಯಕೀಯ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಉಪನ್ಯಾಸಗಳು, ವೈದ್ಯಕೀಯ ಶಿಕ್ಷಣದ ಚರ್ಚೆಗಳು, ಸಂವಾದಗಳು ಮತ್ತು ಹೃದ್ರೋಗ ಚಿಕಿತ್ಸಾ ಪದ್ಧತಿಯ ಮಾರ್ಗಸೂಚಿಗಳ ಬಗ್ಗೆ ಈ ಸಮ್ಮೇಳನ ಬೆಳಕು ಚೆಲ್ಲಲಿದೆ. ಇದಲ್ಲದೇ, ಹೃದ್ರೋಗ ಶಸ್ತ್ರ ಚಿಕಿತ್ಸೆಗಳ ಬಗ್ಗೆಯೂ ಪ್ರಮುಖವಾಗಿ ಚರ್ಚೆಗಳು ನಡೆಯಲಿವೆ' ಎಂದು ತಿಳಿಸಿದರು.

ಐಎಸಿಟಿಎಸ್ ಸಿಒಎನ್ ನ ಸಂಘಟನಾ ಕಾರ್ಯದರ್ಶಿ ಡಾ.ಗಿರಿಧರ್ ಕಮಲಾಪೂರ್ಕರ್ ಅವರು ಮಾತನಾಡಿ, 'ಈ ವರ್ಷ ನಾವು 150 ಸಂಶೋಧನಾ ವರದಿಗಳು, 100 ಪೋಸ್ಟರ್ ಗಳನ್ನು ಸ್ವೀಕರಿಸಿದ್ದೇವೆ.

ಭಾರತೀಯ ಮೂಲದ ಹಿರಿಯ ಹೃದ್ರೋಗ ತಜ್ಞರನ್ನು ಒಂದೆಡೆ ಕರೆತರುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಈ ಮೂಲಕ ಭಾರತದಲ್ಲಿ ಹೃದ್ರೋಗ ತಜ್ಞರ ಸಂಪರ್ಕ ಜಾಲವನ್ನು ಗಟ್ಟಿಗೊಳಿಸುವ ಗುರಿಯಿಟ್ಟುಕೊಂಡಿದ್ದೇವೆ.

ಇದು ಭಾರತಕ್ಕೆ ಒಂದು ಉತ್ತಮ ಲಾಭವಾಗಲಿದೆ. ಈ ಸಂದರ್ಭದಲ್ಲಿ ದೇಶದ ಖ್ಯಾತ ಹೃದ್ರೋಗ ತಜ್ಞರಾದ ಮುಂಬೈನ ಡಾ. ರತ್ನ ಮಗೋತ್ರ ಮತ್ತು ಕೋಲ್ಕತ್ತಾದ ಡಾ.ಸುಶೀಲ ಶ್ರೀಪಾದ್ ಅವರನ್ನು ಸನ್ಮಾನಿಸಲಾಗುವುದು'' ಎಂದು ತಿಳಿಸಿದರು.

English summary
Indian Association of Cardiovascular and Thoracic Surgeons (IACTS) IACTSCON 2017 63rd edition conference held in Bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X