ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜುಲೈ 1 ರಿಂದ ಇಂಡಿಯಾ ಮೆಡ್ ಎಕ್ಸ್ ಪೋ 2017

By Mahesh
|
Google Oneindia Kannada News

ಬೆಂಗಳೂರು, ಜೂನ್ 29: ಇಂಡಿಯಾ ಮೆಡ್ ಎಕ್ಸ್ ಪೋ, ಭಾರತೀಯ ಔಷದ ಮತ್ತು ವೈದ್ಯಕೀಯ ವಲಯದ ವಸ್ತು ಪ್ರದರ್ಶನ ಜುಲೈ 1 ರಿಂದ 3ರ ವರೆಗೆ ಡಾ. ಪ್ರಭಾಕರ ಕೋರೆ, ಕನ್ವೆನ್ಷನ್ ಸೆಂಟರ್, ಯಶವಂತಪುರ, ತುಮಕೂರು ರಸ್ತೆ, ಬೆಂಗಳೂರಿನಲ್ಲಿ ನಡೆಯಲಿದೆ.

8ನೇ ಆವೃತ್ತಿಯ ಇಂಡಿಯಾ ಮೆಡ್ ಎಕ್ಸ್ ಪೋನಲ್ಲಿ ವೈದ್ಯಕೀಯ ಸಲಕರಣೆ, ಶಸ್ತ್ರ ಚಿಕಿತ್ಸಾ ಉತ್ಪನ್ನಗಳು, ಹೀಗೆ ವೈದ್ಯಕೀಯ ವಲಯಕ್ಕೆ ಮೀಸಲಾಗಿರುವ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಿವೆ. ಕಾರ್ಯಕ್ರಮದಲ್ಲಿ ಸುಮಾರು 300 ಕಂಪನಿಗಳು ಭಾಗವಹಿಸಿ ಅವರ 5000ಕ್ಕಿಂತ ಹೆಚ್ಚು ಉತ್ಪನ್ನಗಳನ್ನು ಪ್ರದರ್ಶಿಸಲಿವೆ.

India Med Expo 2017 to be held in Bengaluru between July 1 & 3, 2017

ಇಂಡಿಯಾ ಮೆಡ್ ಎಕ್ಸ್‍ಪೋ 2017ರಲ್ಲಿ ವೈದ್ಯಕೀಯ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉತ್ಪನ್ನಗಳಾದ, ಸರ್ಜಿಕಲ್ ಸಲಕರಣೆ, ಆಸ್ಪತ್ರೆ ಸಲಕರಣೆ, ಆಸ್ಪತ್ರೆ ಪೀಠೋಪಕರಣಗಳು, ಹೋಮ್ ಹೆಲ್ತ್ ಕೇರ್ ಉತ್ಪನ್ನಗಳು, ವೈದ್ಯಕೀಯ ಗ್ಯಾಸ್ ಪೈಪ್ ಲೈನ್ ಪ್ರಯೋಗಾಲಯ ಸಾಧನ, ಡಯಾಗ್ನಾಸ್ಟಿಕ್ಸ್, ಫಿಸಿಯೋಥೆರಪಿ, ಆತ್ರ್ರೋಪೆಡಿಕ್ ತಂತ್ರಜ್ಞಾನದ ಸರಕುಗಳು, ರೇಡಿಯಾಲಜಿ, ಇಮೇಜಿಂಗ್, ಕಾರ್ಡಿಯಾಲಜಿ ಉಪಕರಣ ಮತ್ತು ಆಸ್ಪತ್ರೆ ಸರಕುಗಳು ಪ್ರದರ್ಶಿಸಲಿವೆ.

ಈ ಆವೃತ್ತಿಯಲ್ಲಿ ಆರೋಗ್ಯ ಸೇವೆಗೆ ಸಂಬಂಧಿಸಿದ ಹೆಲ್ತ್ ಕೇರ್ ಬಿಲ್ಡಿಂಗ್ ಟೆಕ್ನಾಲಜಿ, ಮೆಡಿಕಲ್ ಪಬ್ಲಿಕೇಷನ್ಸ್, ಹೆಲ್ತ್ ಕೇರ್ ಕನ್ಸಲ್ಟಿಂಗ್ ಸರ್ವಿಸಸ್ ಹಾಗೂ ವೈದ್ಯಕೀಯ ಉದ್ಯಮಕ್ಕೆ ಅಗತ್ಯತೆಗಳನ್ನು ಪೂರೈಸುವಂತಹ ಮಾಹಿತಿ ಮತ್ತು ಸಂವಹನ ನೀಡುವಂತಹ ಕಂಪನಿಗಳು ಭಾಗವಹಿಸಲಿವೆ.

English summary
India Med Expo, India’s premier trade fair for hospitals and clinics, will host India Med Expo 2017, in Bengaluru between July 1 and 3, 2017. The expo will be held at Dr. Prabhakar Kore Convention Center, Yeshwanthpur, Tumkur Road, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X