ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿಕ್ಷಕನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ

|
Google Oneindia Kannada News

ಬೆಂಗಳೂರು, ಅ.24: ಆರ್ಕಿಡ್ಸ್ ಶಾಲೆಯ ಅತ್ಯಾಚಾರ ಪ್ರಕರಣ ಹಸಿಯಾಗಿರುವಾಗಲೆ ಬೆಂಗಳೂರಿನಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೂರನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಯಶವಂತಪುರದ ಪ್ರತಿಷ್ಠಿತ ಶಾಲೆಯ ಅಧ್ಯಾಪಕನೊಬ್ಬನನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿ ಕಲಾ ವಿಭಾಗದ ಅಧ್ಯಾಪಕನನ್ನು ಬಂಧಿಸಲಾಗಿದೆ. ಶಾಲಾ ಕೋಣೆಯೊಂದರಲ್ಲಿ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡುತ್ತಿದ್ದ ಸಂದರ್ಭ ಅಧ್ಯಾಪಕ ಸಿಕ್ಕಿ ಬಿದ್ದಿದ್ದಾನೆ. ಘಟನೆ ನಡೆದು ಸುಮಾರು ಒಂದು ತಿಂಗಳುಗಳೇ ಕಳೆದಿದ್ದು ಶಾಲಾ ಆಡಳಿತ ಮಂಡಳಿ ತಾನೇ ತನಿಖೆ ನಡೆಸುತ್ತೇನೆ ಎಂದು ಹೇಳಿ ಕೈತೊಳೆದುಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.[ಆರ್ಕಿಡ್ಸ್ ಶಾಲೆಗೆ ಈಗ ಕ್ರಿಮಿನಲ್ ಕೇಸ್ ಭೀತಿ]

rapr

ಈ ಬಗ್ಗೆ ಮಾಹಿತಿ ನೀಡಿದ ಉತ್ತರ ವಿಭಾಗದ ಡಿಸಿಪಿ ಟಿ.ಆರ್.ಸುರೇಶ್, ವಿದ್ಯಾರ್ಥಿನಿ ಪಾಲಕರು ಈ ಬಗ್ಗೆ ದೂರು ದಾಖಲಿಸಲು ಮುಂದಾಗಿರಲಿಲ್ಲ. ನಾವು ಶಾಲಾ ಆಡಳಿತ ಮಂಡಳಿಯಿಂದಲೂ ಹೇಳಿಕೆ ಪಡೆದುಕೊಂಡಿದ್ದೇವೆ. ಸಪ್ಟೆಂಬರ್ 12 ರಂದು ಘಟನೆ ನಡೆದಿದ್ದು ಪೊಸ್ಕೋ(ಮಕ್ಕಳ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ)ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.[ಬಾಲಕಿ ರೇಪ್ : ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿ]

ಬಾಲಕಿಯ ಪಾಲಕರಿಗೆ ಈ ಬಗ್ಗೆ ನೋಟಿಸ್ ನೀಡಿ ಹೇಳಿಕೆ ನೀಡುವಂತೆ ಕೇಳಿಕೊಂಡಿದ್ದರೂ ಅವರು ತಿರಸ್ಕರಿಸಿದ್ದಾರೆ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

English summary
Bangaloreː Police have booked a case against the teacher of a prestigious school in Yeshwantpur for indecent exposure but are yet to make headway due to non-cooperation by the parents of the class 3 student.ccording to the police, the accused is an arts teacher. He was caught red-handed by colleagues allegedly misbehaving with the girl in a classroom.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X