ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇ 30ಕ್ಕೆ ಹೋಟೆಲ್ ಗಳು ಬಂದ್, ಊಟ-ತಿಂಡಿಗೆ ವ್ಯವಸ್ಥೆ ಮಾಡಿಕೊಳ್ರೀ...

|
Google Oneindia Kannada News

ಬೆಂಗಳೂರು, ಮೇ 27: ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿಯನ್ನು ಖಂಡಿಸಿರುವ ಹೋಟೆಲ್ ಉದ್ಯಮಿಗಳಿ ಮೇ 30ನೇ ತಾರೀಕು ರಾಜ್ಯಾದ್ಯಂತ ಹೋಟೆಲ್, ರೆಸ್ಟುರಾಂಟ್ ಗಳನ್ನು ಮುಚ್ಚಿ, ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದ್ದಾರೆ. ಹೋಟೆಲ್ ಉದ್ಯಮಿಗಳ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ ಈ ಬಗ್ಗೆ ಮಾಧ್ಯಮದ ಜತೆ ಮಾತನಾಡಿದ್ದಾರೆ.

ಜಿಎಸ್ ಟಿ ಜಾರಿಯಾದರೆ ಗ್ರಾಹಕರ ಮೇಲೆ ಹೊರೆ ಬೀಳುತ್ತದೆ. ಆದ್ದರಿಂದ ಇದನ್ನು ಖಂಡನೆ ಮಾಡಿ, ಪ್ರತಿಭಟನೆ ನಡೆಸುವುದಕ್ಕೆ ನಿರ್ಧರಿಸಿದ್ದೇವೆ ಎಂಉ ಹೇಳಿದ್ದಾರೆ. ಹೋಟೆಲ್-ರೆಸ್ಟುರಾಂಟ್ ಗಳಲ್ಲಿ ನೂರು ರುಪಾಯಿ ಬಿಲ್ ಗೆ ಹೆಚ್ಚುವರಿ ಹನ್ನೆರಡು ರುಪಾಯಿ ಹೊರೆ ಬೀಳುತ್ತದೆ, ಪಾರ್ಸೆಲ್ ತೆಗೆದುಕೊಂಡು ಹೋದರೆ ಹದಿನೆಂಟು ರುಪಾಯಿ ಹೆಚ್ಚುವರಿಯಾಗಿ ಕೊಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.[GST: ಸಕ್ಕರೆ, ಟೀ, ಕಾಫಿ ಬೆಲೆ ಜುಲೈ 1ರಿಂದ ಇಳಿಕೆ]

Including Bengaluru Karnatka's hotel and lodges bandh on May 30th

ಇಂಥ ಹೊರೆಯಿಂದ ನಿತ್ಯವೂ ಹೋಟೆಲ್ ಗಳನ್ನು ನಂಬಿಕೊಂಡವರಿಗೆ ವಿಪರೀತ ಹೊರೆಯಾಗುತ್ತದೆ. ಇನ್ನು ಲಾಡ್ಜ್ ಗಳಿಗೆ ಸ್ವಲ್ಪ ವಿನಾಯಿತಿ ಸಿಗುತ್ತಿದೆ. ಆದರೆ ಹೋಟೆಲ್ ಗೆ ಬರುವ ಗ್ರಾಹಕರ ಸಂಖ್ಯೆ ಹೆಚ್ಚಿರುತ್ತದೆ. ಲಾಡ್ಜ್ ಗಳಿಗೆ ಬರುವವರ ಪ್ರಮಾಣ ತೀರಾ ಕಡಿಮೆ. ಬೆಂಗಳೂರಿನಲ್ಲಿ ಎರಡು ಸಾವಿರ ಹೋಟೆಲ್ ಹಾಗೂ ಐನೂರು ಲಾಡ್ಜ್ ಗಳಿವೆ. ಎಲ್ಲವೂ ಬಂದ್ ಆಗಲಿವೆ. ಬಂದ್ ಗೆ ರಾಜ್ಯದ ಎಲ್ಲ ಹೋಟೆಲ್ ಉದ್ಯಮಿಗಳು ಬೆಂಬಲಿಸಲಿದ್ದಾರೆ ಎಂದು ವಿವರ ನೀಡಿದ್ದಾರೆ.

English summary
Bengaluru hotel association decided to call bandh of hotels and lodges on May 30th, registering protest against GST implementation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X