ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೂತನ ಸಚಿವರೊಂದಿಗೆ ಸಂಪುಟ ಸಭೆ ನಡೆಸಿದ ಸಿದ್ದರಾಮಯ್ಯ

By Mahesh
|
Google Oneindia Kannada News

ಬೆಂಗಳೂರು, ಜೂನ್ 19: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಸಂಜೆ ತಮ್ಮ ನೂತನ ಸಚಿವ ಸಂಪುಟ ಸದಸ್ಯರೊಂದಿಗೆ ಸಂಪುಟ ಸಭೆ ನಡೆಸಿದರು. ತಮ್ಮ ಕಾವೇರಿ ನಿವಾಸದಲ್ಲಿ ನೂತನ ಸಚಿವರನ್ನು ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದು ಘೋಷಿಸಿದರು.

ಭಾನುವಾರ ಸಂಜೆ ರಾಜಭವನದ ಗ್ಲಾಸ್ ಹೌಸ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು 13 ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.[ಸಿದ್ದರಾಮಯ್ಯ ಸಚಿವ ಸಂಪುಟಕ್ಕೆ 13 ಹೊಸಮುಖಗಳ ಸೇರ್ಪಡೆ]

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಸಚಿವ ಸಂಪುಟದ ಹಲವಾರು ಸದಸ್ಯರು ಪಾಲ್ಗೊಂಡಿದ್ದರು.[ಅಂಬರೀಶ್ ಅವನತಿಗೆ ಕಾರಣವಾದ ಹೆಂಗಸಿನ ಬಗ್ಗೆ ಜಗ್ಗೇಶ್ ಟ್ವೀಟ್]

ಈ ಸಂದರ್ಭದಲ್ಲಿ ರಾಜ್ಯದ ಮುಖ್ಯಕಾರ್ಯದರ್ಶಿ ಅರವಿಂದ ಜಾದವ್, ರಾಜ್ಯದ ಪೊಲೀಸ್ ಮುಖ್ಯಸ್ಥ ಓಂ ಪ್ರಕಾಶ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಮೇಘರಿಕ್ ಸೇರಿದಂತೆ ರಾಜ್ಯ ಸರ್ಕಾರದ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.[ಚನ್ನಪಟ್ಟಣದ ಶಾಸಕ ಸಿಪಿ ಯೋಗೇಶ್ವರ್ ಗೆ ಸಚಿವ 'ಭಾಗ್ಯ'?]

In pics : Siddaramaiah Cabinet meet with 13 new faces

9 ಮಂದಿ ಕ್ಯಾಬಿನೆಟ್ ಸಚಿವರಾಗಿ ಹಾಗೂ 4 ಮಂದಿ ಸ್ವತಂತ್ರ ಖಾತೆ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರಲ್ಲಿ 12 ಮಂದಿ ವಿಧಾನ ಸಭಾ ಸದಸ್ಯರು ಹಾಗೂ ಒಬ್ಬರು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.[ಸಚಿವ ಸಂಪುಟ ವಿಸ್ತರಣೆ, ಲೇಟೆಸ್ಟ್ ಸುದ್ದಿ ಏನಿದೆ?]

ಇಂದು ಪ್ರಮಾಣ ವಚನ ಸ್ವೀಕರಿಸಿದ ಕ್ಯಾಬಿನೆಟ್ ಸಚಿವರುಗಳೆಂದರೆ ಕಾಗೋಡು ತಿಮ್ಮಪ್ಪ, ಕೆ.ಆರ್. ರಮೇಶ್ಮಾರ್, ಬಸವರಾಜ ರಾಯರೆಡ್ಡಿ, ಹೆಚ್.ವೈ. ಮೇಟಿ, ತನ್ವೀರ್ ಸೇಠ್, ಎಸ್.ಎಸ್. ಮಲ್ಲಿಕಾರ್ಜುನ, ಎಂ.ಆರ್. ಸೀತಾರಾಂ, ಸಂತೋಷ್ ಲಾಡ್ ಹಾಗೂ ರಮೇಶ್ ಲಕ್ಷ್ಮಣ ಜಾರಕಿಹೊಳಿ.[ಶ್ರೀನಿವಾಸಪ್ರಸಾದ್ ರನ್ನು ಕೈಬಿಟ್ಟಿದ್ದಕ್ಕೆ ಮೈಸೂರಲ್ಲಿ ಆಕ್ರೋಶ]

ಹೊಸ ಸಚಿವರೊಂದಿಗೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ


ಸ್ವತಂತ್ರ ಖಾತೆಯ ರಾಜ್ಯ ಸಚಿವರಾಗಿ ಪ್ರಿಯಾಂಕ ಎಂ. ಖರ್ಗೆ, ರುದ್ರಪ್ಪ ಲಮಾಣಿ, ಈಶ್ವರ ಖಂಡ್ರೆ ಹಾಗೂ ಪ್ರಮೋದ್ ಮದ್ವರಾಜ್ ಅವರುಗಳು ಪ್ರಮಾಣ ವಚನ ಸ್ವೀಕರಿಸಿದರು. ಸಚಿವರುಗಳ ಸಂಪರ್ಕವಿವರ ಹಾಗೂ ಸಿದ್ದರಾಮಯ್ಯ ಅವರ ಜತೆಗಿನ ಚಿತ್ರಗಳ ಗ್ಯಾಲರಿ ತಪ್ಪದೇ ನೋಡಿ...

English summary
Karnataka Chief Minister Siddaramaiah, on Sunday(Jun 19) inducted 13 new ministers into his cabinet. Later he had meeting with new ministers at his resident Cauvery in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X