ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಳ್ಳಿಗರ ಆರೋಗ್ಯದತ್ತ ಮುಖ ಮಾಡಿದ ವೈದ್ಯರು

By Vanitha
|
Google Oneindia Kannada News

ಬೆಂಗಳೂರು, ಜುಲೈ, 29 : ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಮುಂದಿನ ಅಕ್ಟೋಬರ್ ತಿಂಗಳ ವೇಳೆಗೆ ಕೊಂಚ ಕಡಿಮೆಯಾಗಲಿದೆ. ಗ್ರಾಮೀಣ ಸೇವೆ ಕಡ್ಡಾಯ ಕಾನೂನಿನಡಿ 2,174 ಎಂಬಿಬಿಎಸ್ ಪದವೀಧರರು ಹಾಗೂ 541 ಪಿಜಿ ವೈದ್ಯರು ತಮ್ಮ ಸೇವೆ ನಿರ್ವಹಿಸಲಿದ್ದಾರೆ.

ಹಳ್ಳಿಗಳ ಸರ್ಕಾರಿ ವೈದ್ಯರ ಕೊರತೆ ನಿವಾರಿಸಲು ಪದವಿ ಕೋರ್ಸ್ ಪೂರೈಸಲು ಯುವ ವೈದ್ಯರಿಗೆ ಯುವ ವೈದ್ಯರಿಗೆ ಸೇವೆ ಕಡ್ಡಾಯ ಮಾಡುವ ಸಂಬಂಧದ ಕಾಯ್ದೆಗೆ ಪೂರಕ ನಿಯಮಾವಳಿ ರಚಿಸಿ ಜುಲೈ 24ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.[ಅಂಗಾಂಗ ದಾನ ಮಾಡಿ ನಾಲ್ವರಿಗೆ ಮರು ಜೀವ ನೀಡಿದರು]

In government doctors going on villages within three months

ಎಂಬಿಬಿಎಸ್ ಪದವೀಧರರನ್ನು ಗ್ರಾಮೀಣ ಪ್ರದೇಶದ ಆಸ್ಪತ್ರೆಗೆ ಹಾಗೂ ಪಿಜಿ ವೈದ್ಯರನ್ನು 30 ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ನಿಯೋಜಿಸಲಾಗುವುದು. ಕೌನ್ಸೆಲಿಂಗ್ ಮೂಲಕ ಸ್ಥಳ ನಿಯೋಜನೆ ಆಗಲಿದ್ದು, ಮೆರಿಟ್ ಆಧರಿಸಿ ಸ್ಥಳ ಆಯ್ಕೆಗೆ ಅವಕಾಶ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ವೈದ್ಯರ ಗ್ರಾಮೀಣ ಸೇವೆ ಕಡ್ಡಾಯ ಕಾನೂನು ಜಾರಿಯಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ 300 ಕೋಟಿ ರೂ. ಹೆಚ್ಚುವರಿ ವೆಚ್ಚವಾಗಲಿದ್ದು, ಈಗಾಗಲೆ ಅಂದಾಜಿನಲ್ಲಿ 185ಕೋಟಿ ರೂ. ಒದಗಿಸಲಾಗಿದೆ ಎಂದು ತಿಳಿಸಿದರು.

ಅನುಸರಣಾ ನಿಯಮಗಳು:
* ವೈದ್ಯರ ಕಡ್ಡಾಯ ಗ್ರಾಮೀಣ ಸೇವೆಗಾಗಿ ಒಂದು ವರ್ಷದ ಸೇವಾ ತರಬೆತಿ ಎಂಬಿಬಿಎಸ್, ಪಿಜಿ ವೈದ್ಯ ಪದವಿ ಮತ್ತು ಪಿಜಿ ಡಿಪ್ಲೊಮಾ ಭಾಗವಾಗಿರುತ್ತದೆ.
* ಒಂದು ವರ್ಷದ ಸೇವಾ ತರಬೆತಿ ಪೂರ್ಣಗೊಳಿಸದಿದ್ದರೆ ಪದವಿ ಪೂರ್ಣಗೊಳ್ಳುವುದಿಲ್ಲ
* ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ತರಬೇತಿ ವೆಳೆ ಎಂಬಿಬಿಎಸ್ ಪದವೀಧರರನ್ನು ಜೂನಿಯರ್ ರೆಸಿಡೆಂಟ್ ಟ್ರೈನಿ ಹಾಗೂ ಪಿಜಿ ವೈದ್ಯರನ್ನು ಸೂಪರ್ ಸ್ಪೆಷಲಿಟಿ ಟ್ರೈನಿ ಎಂದು ಪರಿಗಣಿಸಲಾಗುವುದು.

ಪೆರಿಟೋನಿಯಲ್ ಸೌಲಭ್ಯ ವಿಸ್ತರಣೆ:

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಡರೋಗಿಗಳ ಡಯಾಲಿಸಿಸ್ ಒತ್ತಡ ತಗ್ಗಿಸಲು ಪೆರಿಟೋನಿಯಲ್ (ಜಠರದ ಒಳಪೊರೆ ಚಿಕಿತ್ಸೆ) ವಿಧಾನವನ್ನು ರಾಜ್ಯದ ಬೇರೆಬೇರೆ ಭಾಗಗಳ ಸರ್ಕಾರಿ ಆಸ್ಪತ್ರೆಗಳಿಗೂ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.

ರಾಜ್ಯದಲ್ಲಿ ಕಿಡ್ನಿ ವೈಫಲ್ಯದ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ದುಬಾರಿ ಚಿಕಿತ್ಸಾ ವಿಧಾನ ಮತ್ತು ವಿಶ್ರಾಂತಿ ಬೇಕಿರುವ ಕಾರಣ ವಿಶೇಷವಾಗಿ ಬಡವರಿಗೆ ಸಮಸ್ಯೆಯಾಗುತ್ತಿದೆ. ಈ ವಿಧಾನದಿಂದ ತಿಂಗಳಿಗೊಮ್ಮೆ ವೈದ್ಯರನ್ನು ಭೇಟಿ ಮಾಡಿದರೆ ಸಾಕಾಗುತ್ತದೆ. ಡಯಾಲಿಸಿಸ್ ಗಾಗಿ ಪೆರಿಟೋನಿಯಲ್ ಮಷಿನ್ ಖರೀದಿಗೆ 18ರಿಂದ 20ಸಾವಿರ ವೆಚ್ಚವಾಗಲಿದ್ದು, ಇದರಲ್ಲಿ 66% ಹಣವನ್ನು ಸರ್ಕಾರ ಭರಿಸಲಿದ್ದು ಉಳಿದ 34% ನ್ನು ರೋಗಿಗಳು ಭರಿಸಬೇಕಾಗುತ್ತದೆ.

English summary
In 2715 government doctors going on villages within three months. villagers have taking medical facilities as early as possible.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X