ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿ.28: ಐಐಎಸ್ಸಿ ದಾಳಿ, ಚರ್ಚ್ ಸ್ಟ್ರೀಟ್ ಸ್ಫೋಟ ಕಾಕತಾಳೀಯ

By ವಿಕಾಸ್ ನಂಜಪ್ಪ
|
Google Oneindia Kannada News

ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ ಸಿ) ಆವರಣದಲ್ಲಿ 28 ಡಿಸೆಂಬರ್ 2005ರಂದು ಬಾಂಬ್ ಸ್ಫೋಟಕ್ಕೂ ಡಿ.28, 2014ರಂದು ಚರ್ಚ್ ಸ್ಟ್ರೀಟ್ ನಲ್ಲಿ ನಡೆದ ಬಾಂಬ್ ಸ್ಫೋಟಕ್ಕೂ ಏನಾದರೂ ಲಿಂಕ್ ಇದ್ಯಾ? ಮೊದಲ ಬಾರಿಗೆ ಬೆಂಗಳೂರನ್ನು ತಲ್ಲಣಗೊಳಿಸಿದ ಆ ಸ್ಫೋಟ ನಿನ್ನೆ ನಡೆದ ಸ್ಫೋಟ ಡಿ.28ರಂದು ನಡೆದಿದ್ದು ಬಿಟ್ಟರೆ ಯಾವುದೇ ಸಾಮ್ಯತೆ ಇದುವರೆವಿಗೂ ಕಂಡು ಬಂದಿಲ್ಲ. ಇದು ಕಾಕತಾಳೀಯ ಎನ್ನಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಐಐಎಸ್ಸಿ ಸ್ಪೋಟದ ವರ್ಷಾಚರಣೆ ಆಚರಿಸಲು ಉಗ್ರರು ಚರ್ಚ್ ಸ್ಟ್ರೀಟ್ ಬಳಿ ಬಾಂಬ್ ಸ್ಫೋಟದ ಸ್ಕೆಚ್ ಹಾಕಿದರೆ? ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ. 2005ರ ದಾಳಿಯಲ್ಲಿ ವಿಜ್ಞಾನಿ ಪ್ರೊ. ಮುನೀಶ್ ಚಂದ್ರ ಪುರಿ ಬಲಿಯಾಗಿದ್ದರು, 4 ಮಂದಿ ಗಾಯಗೊಂಡಿದ್ದರು.

ಅದರೆ, ಸ್ಫೋಟದ ನಂತರ ಲಷ್ಕರ್ ಇ ತೋಯ್ಬಾ ಸಂಘಟನೆ ಸ್ಫೋಟದ ಹೊಣೆ ಹೊತ್ತುಕೊಂಡಿತ್ತು. ಅದರೆ, ಚರ್ಚ್ ಸ್ಟ್ರೀಟ್ ದಾಳಿಯ ರುವಾರಿ ಯಾರು ಎಂಬುದು ಇನ್ನೂ ತಿಳಿದು ಬಂದಿಲ್ಲ. ಸ್ಫೋಟದ ತೀವ್ರತೆ, ದಿನಾಂಕ ಎರಡರಲ್ಲೂ ಸಾಮತ್ಯೆ ಇದ್ದರೂ ಇದು ಕಾಕತಾಳೀಯವಷ್ಟೇ ಎಂದು ಈ ಸಂದರ್ಭದಲ್ಲಿ ಹೇಳಬಹುದು. [5 ಬಾರಿ ಉಗ್ರರು ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಿಸಿದ್ದಾರೆ]

IISc and Church Street attack on December 28: Just a coincidence

ಲಷ್ಕರ್ ಉಗ್ರರ ದಾಳಿ : ನಿಷೇಧಿತ ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆಗೆ ಸೇರಿದ ಆತ್ಮಾಹುತಿ ದಳದ ಸದಸ್ಯರು ಐಐಎಸ್ಸಿ ದಾಳಿಯ ರುವಾರಿಗಳಾಗಿದ್ದರು. ಐಐಎಸ್ಸಿಯಲ್ಲಿ ನಡೆಯುತ್ತಿದ್ದ ವಿಜ್ಞಾನ ಮೇಳ ಟಾರ್ಗೆಟ್ ಮಾಡಿಕೊಂಡು ಬಾಂಬ್ ಸ್ಫೋಟಿಸಲಾಗಿತ್ತು. ಅದರೆ, ಬೆಂಗಳೂರಿನಲ್ಲಿ ಕಡಿಮೆ ತೀವ್ರತೆಯುಳ್ಳ ಬಾಂಬ್ ಸ್ಫೋಟಿಸಲು ಮತ್ತೊಮ್ಮೆ ಲಷ್ಕರ್ ಉಗ್ರರು ಏಕೆ ಯತ್ನಿಸುತ್ತಾರೆ ಎಂಬ ಪ್ರಶ್ನೆ ಏಳುತ್ತದೆ.

ಐಐಎಸ್ಸಿ ದಾಳಿಯ ಆರೋಪಿಯಾಗಿರುವ ಬಂಧಿತ ಉಗ್ರ ಸಬಾಬುದ್ದೀನ್ ಅಹ್ಮದ್ ಹೇಳಿಕೆಯನ್ನು ಗಮನಿಸಿದರೆ ಎರಡು ಸ್ಫೋಟಕ್ಕೂ ಯಾವುದೇ ಲಿಂಕ್ ಇಲ್ಲ ಎಂದು ಸ್ಪಷ್ಟವಾಗುತ್ತದೆ. 'ಲಷ್ಕರ್ ಉಗ್ರರು ಎಂದಿಗೂ ಕಡಿಮೆ ಪ್ರಮಾಣದ ಬಾಂಬ್ ದಾಳಿಗೆ ಯತ್ನಿಸುವುದಿಲ್ಲ' ಎಂದು ಅಹ್ಮದ್ ಹೇಳಿಕೆ ನೀಡಿದ್ದ.

ಹಾಗೆ ನೋಡಿದರೆ ಐಐಎಸ್ಸಿ ದಾಳಿ ಲಷ್ಕರ್ ಮಾಡಿದ ವಿಫಲ ಯತ್ನ ಎನ್ನಬಹುದು. ಭಾರಿ ಪ್ರಮಾಣದಲ್ಲಿ ಸ್ಫೋಟದ ಸಂಚು ವಿಫಲವಾಗಿ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿತ್ತು.

ದಿನಾಂಕ ಕಾಕತಾಳೀಯ: ಚರ್ಚ್ ಸ್ಟ್ರೀಟ್ ದಾಳಿಯ ರುವಾರಿಗಳು ಯಾರು ಎಂದು ತಿಳಿಯುವ ತನಕ ಡಿ.28 ರಂದೇ ಎರಡು ಸ್ಫೋಟ ಸಂಭವಿಸಿರುವುದು ಕಾಕತಾಳೀಯ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಬಹುದು.

ಟ್ವಿಟ್ಟರ್ ಮೂಲಕ ಐಎಸ್ಐಎಸ್ ಉಗ್ರರಿಗೆ ನೆರವಾಗುತ್ತಿದ್ದ ಆರೋಪ ಹೊತ್ತಿರುವ ಮೆಹ್ದಿ ಮಸ್ರೂಸ್ ಬಿಸ್ವಾಸ್ ಬಂಧನದ ನಂತರ ಉಗ್ರರು ಪ್ರತೀಕಾರ ತೆಗೆದುಕೊಳ್ಳುವ ಬಗ್ಗೆ ಗಾಳಿಸುದ್ದಿ ಹಬ್ಬಿತ್ತು. ಅದರೆ, ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರಬಿದ್ದಿರಲಿಲ್ಲ. ಮೆಹ್ದಿ ಬಿಡುಗಡೆಗೆ ಒತ್ತಾಯಿಸಿ ಸ್ಥಳೀಯ ಉಗ್ರ ಸಂಘಟನೆಗಳು ಎಚ್ಚರಿಕೆ ಗಂಟೆ ಬಾರಿಸಲು ಈ ಸ್ಫೋಟಕ್ಕೆ ಯತ್ನಿಸಿರುವ ಸಾಧ್ಯತೆಯಿದೆ.

ವೀಕೇಂಡ್ ಗಳಲ್ಲಿ ಸಾಮಾನ್ಯವಾಗಿ ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆ ಸುತ್ತಮುತ್ತಾ ಹೆಚ್ಚಿನ ಭದ್ರತೆ ಒದಗಿಸಲಾಗುತ್ತದೆ. ಹೋಟೆಲ್ ಗಳಿಗೆ ಪ್ರತ್ಯೇಕ ಭದ್ರತಾ ಸಿಬ್ಬಂದಿ ಇರುತ್ತಾರೆ. ಅದರೆ, ನಿನ್ನೆ ಕೋಕನೆಟ್ ಗ್ರೂವ್ ಹೋಟೆಲ್ ಬಳಿ ಮಾತ್ರ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿತ್ತು. ಸದಾ ಜನನಿಬಿಡವಾಗಿರುವ ಈ ರಸ್ತೆಯಲ್ಲಿ ಬಾಂಬ್ ಇಟ್ಟಿದ್ದು ಯಾವಾಗ? ಹೇಗೆ? ಎಂಬುದು ಈಗ ಕುತೂಹಲಕಾರಿಯಾಗಿದೆ.

English summary
The blast at Bangalore today brought out an eerie coincidence. It was the year 2005 December 28th when Bangalore witnessed a major attack at the Indian Institute of Sciences or the IISc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X