ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯಾರ್ಥಿಗಳೆ, ಸಿಗರೇಟ್ ಕೊಲ್ಲಲ್ಲ, ಕ್ಯಾನ್ಸರ್ ಕೊಲ್ಲತ್ತೆ!

By Prasad
|
Google Oneindia Kannada News

ಬೆಂಗಳೂರು, ಅ. 21 : ಶ್ವಾಸಕೋಶ ಕ್ಯಾನ್ಸರ್ ತೊಲಗಿಸುವುದು ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ಧೂಮಪಾನ ದುಶ್ಚಟದ ದುಷ್ಪರಿಣಾಮ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ 'ಐಕೇರ್ ಗ್ರೂಪ್' ಬೆಂಗಳೂರಿನ ಆಚಾರ್ಯ ಇನ್‌ಸ್ಟಿಟ್ಯೂಟ್‌ನಲ್ಲಿ 'ಐ ಸ್ಮೋಕ್' ಎಂಬ ಒಂದು ಬೃಹತ್ ಆಂದೋಲನವನ್ನು ಹಮ್ಮಿಕೊಂಡಿತ್ತು.

I SMOKE ಅಂದ್ರೆ I Support the Movement tO Kill CancEr. ಐ ಕೇರ್ ಗ್ರೂಪ್ ಆಯೋಜಿಸಿದ್ದ ಈ ಆಂದೋಲನಕ್ಕೆ ಜೊತೆ ನೀಡಿದ್ದು ಐಐಟಿ ಬಾಂಬೆಯ ಟೆಕ್‌ಫೆಸ್ಟ್. ಭಾರತದಲ್ಲಿ ಕ್ಯಾನ್ಸರ್ ತೊಗಲಿಸಬೇಕು ಎಂಬ ಜನಜಾಗೃತಿ ಆಂದೋಲನಕ್ಕೆ ಭಾರೀ ಸ್ಪಂದನೆ ವ್ಯಕ್ತವಾಯಿತು.

ಈ ಕುರಿತು ಕಾಲೇಜು ಕ್ಯಾಂಪಸ್ ನಲ್ಲಿರುವ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಧೂಮಪಾನದ ದುಷ್ಪರಿಣಾಮದ ಬಗ್ಗೆ ತಿಳಿವಳಿಕೆ ಹೇಳುವುದು ಈ ಆಂದೋಲನದ ಮೂಲ ಉದ್ದೇಶವಾಗಿತ್ತು. ಇದರ ಭಾಗವಾಗಿ 'ಡೂಡಲ್ ಪ್ರಾಜೆಕ್ಟ್' ಎಂಬ ಹೊಸ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ. ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಈ ಜಾಗೃತಿ ತೀರ ಅಗತ್ಯ ಎಂದು ಐಕೇರಿ ನಂಬಿದೆ.

ಈ ಅಭಿಯಾನವನ್ನು ಆಚಾರ್ಯ ಇನ್‌ಸ್ಟಿಟ್ಯೂಟ್‌ನಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು. ಸಿಗರೇಟು ಸೇವನೆಯಿಂದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚುತ್ತಿದೆ ಮತ್ತು ಬೆಂಗಳೂರಿನ ಜನರು ಸಿಗರೇಟಿಗೆ ದಾಸರಾಗಿ ಕ್ಯಾನ್ಸರಿಗೆ ಬಲಿಯಾಗುತ್ತಿದ್ದಾರೆ ಎಂಬ ಅಧ್ಯಯನ ವರದಿಗಳು ಬಂದಿರುವ ಹಿನ್ನೆಲೆಯಲ್ಲಿ ಈ ಜಾಗೃತಿ ಎಲ್ಲ ಕಾಲೇಜುಗಳಿಗೂ ಹಬ್ಬಬೇಕಿದೆ.

ಸ್ಮೋಕ್ ಮಾಡುವವರ ಆಲಿಂಗನ

ಸ್ಮೋಕ್ ಮಾಡುವವರ ಆಲಿಂಗನ

ಧೂಮಪಾನ ಮಾಡದಿರುವವರ ಮುಂದೆಯೇ ಸ್ಟೈಲಾಗಿ ಸಿಗರೇಟು ಸೇದುವವರನ್ನು ಐಕೇರ್ ಗ್ರೂಪ್‌ನ ಸದಸ್ಯರು ಆಲಂಗಿಸುವುದು ಮತ್ತು ಅವರಿಗೆ ಈ ದುಶ್ಚಟದ ಬಗ್ಗೆ ಮನದಟ್ಟು ಮಾಡಿಕೊಡುವುದು ಅಭಿಯಾನದ ಮುಖ್ಯ ಉದ್ದೇಶವಾಗಿತ್ತು. ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು ಎಂದು ಆಯೋಜಕರು ಹೇಳುತ್ತಾರೆ.

ಸಿಗರೇಟು ಸೇದದವರು 1 ರು. ದಾನ ಮಾಡಿ

ಸಿಗರೇಟು ಸೇದದವರು 1 ರು. ದಾನ ಮಾಡಿ

ಜೊತೆಗೆ, ಅಲ್ಲಿ ಒಂದು ಬಾಕ್ಸ್ ಇಟ್ಟು, ಅದರಲ್ಲಿ ಸಿಗರೇಟು ಸೇದದೆ ಇರುವವರು 1 ರು. ದಾನ ಮಾಡಬೇಕು ಎಂದು ಹೇಳಲಾಗಿತ್ತು. ಸಿಗರೇಟು ಸೇದುವವರು ದಾನ ಮಾಡಬಾರದು. ಏಕೆಂದರೆ, ಆ ಹಣ ನಿಮ್ಮ ಆರೋಗ್ಯದ ದೃಷ್ಟಿಯಿಂದ ಕೂಡಿಸಲಾಗುತ್ತಿದೆ ಎಂದು ಮಾರ್ಮಿಕವಾಗಿ ಹೇಳಲಾಗಿತ್ತು.

ಈ ಸಂದೇಶ ವಿದ್ಯಾರ್ಥಿಗಳಿಗೆ ತಲುಪುವುದೆ?

ಈ ಸಂದೇಶ ವಿದ್ಯಾರ್ಥಿಗಳಿಗೆ ತಲುಪುವುದೆ?

ಇತ್ತೀಚಿನ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಗುಂಪಾಗಿ ಸೇರಿಕೊಂಡು ಸಿಗರೇಟು ಸೇದುವುದು ಸ್ಟೈಲ್ ಆಗಿದೆ. ಅದರಲ್ಲೂ ಹುಡುಗಿಯರನ್ನು ಸೆಳೆಯುವುದಕ್ಕಾಗಿಯೇ ಧೂಮಪಾನದ ದುಶ್ಚಟವನ್ನು ಅಂಟಿಸಿಕೊಳ್ಳುತ್ತಿದ್ದಾರೆ. ಈ ಅಭಿಯಾನದಿಂದಲಾದರೂ ಸಿಗರೇಟಿಗೆ ವಿದ್ಯಾರ್ಥಿಗಳು ತಿಲಾಂಜಲಿ ನೀಡುವರೆ?

ಸಿಗರೇಟು ಕೊಲ್ಲದಿದ್ದರೆ ಕ್ಯಾನ್ಸರ್ ಕೊಲ್ಲತ್ತೆ

ಸಿಗರೇಟು ಕೊಲ್ಲದಿದ್ದರೆ ಕ್ಯಾನ್ಸರ್ ಕೊಲ್ಲತ್ತೆ

ಇದು ಅಕ್ಷರಶಃ ನಿಜ. "ಒಂದು ವೇಳೆ ಸಿಗರೇಟು ನಿಮ್ಮನ್ನು ಕೊಲ್ಲದಿದ್ದರೆ, ಕ್ಯಾನ್ಸರ್ ನಿಮ್ಮನ್ನು ಕೊಲ್ಲುತ್ತದೆ" ಎಂಬ ಸಂದೇಶವಿದ್ದ ಭಿತ್ತಿಚಿತ್ರ ಹಿಡಿದುಕೊಂಡ ಯುವ ವಿದ್ಯಾರ್ಥಿಗಳು ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಸೆಳೆದರು. ಸ್ಮೋಕಿಂಗ್ ದುಷ್ಪರಣಾಮದ ಬಗ್ಗೆ ಮತ್ತೊಂದು ಸಂದೇಶವಿದ್ದ ಉದ್ದನೆಯ ಬ್ಯಾನರ್ ಹಿಡಿದು ಘೋಷಣೆಗಳನ್ನು ಕೂಗುತ್ತ ಕ್ಯಾಂಪಸ್ ಉದ್ದಕ್ಕೂ ಸಂಚರಿಸಿದರು.

ಹುಡುಗಿಯರಿಂದಲೂ ಸಿಗರೇಟು ಸೇವನೆ

ಹುಡುಗಿಯರಿಂದಲೂ ಸಿಗರೇಟು ಸೇವನೆ

ಎಲ್ಲಕ್ಕಿಂತ ಆಘಾತಕರ ಸಂಗತಿಯೆಂದರೆ, ಕಾಲೇಜು ಹುಡುಗಿಯರು ಮತ್ತು ಉದ್ಯೋಗದಲ್ಲಿರುವ ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಸಿಗರೇಟು ಸೇದುತ್ತಿರುವುದು ಹೆಚ್ಚಾಗುತ್ತಿದೆ. ಇದು ಉತ್ತರ ಭಾರತದಿಂದ ಉದ್ಯೋಗ ಹುಡುಕಿಕೊಂಡು ಬಂದ ಮಹಿಳೆಯರಲ್ಲಿ ತೀರ ಹೆಚ್ಚು ಎನ್ನುವುದು ಒಂದು ಅಧ್ಯಯನ ಬಹಿರಂಗಪಡಿಸಿದೆ.

ಸ್ಮೋಕಿಂಗ್ ಕ್ಯಾನ್ಸರ್ ತರಬಲ್ಲದು ಹುಷಾರ್

ಸ್ಮೋಕಿಂಗ್ ಕ್ಯಾನ್ಸರ್ ತರಬಲ್ಲದು ಹುಷಾರ್

ಸಿಗರೇಟು ಸೇವನೆಯಿಂದ ಬಾಯಿ ಕ್ಯಾನ್ಸರ್, ಶ್ವಾಶಕೋಶ ಕ್ಯಾನ್ಸರ್ ಮಾತ್ರವಲ್ಲ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕೂಡ ತರಬಲ್ಲದು. ಬೆಂಗಳೂರಿನ ಜೀವನಶೈಲಿಯಲ್ಲಿ ಆಗುತ್ತಿರುವ ತೀವ್ರತರ ಬದಲಾವಣೆಯೆ ಕ್ಯಾನ್ಸರ್ ಹಬ್ಬಲು ಕಾರಣವಾಗುತ್ತಿದೆ ಎಂದು ಪಾಪ್ಯುಲೇಷನ್ ಬೇಸ್ಡ್ ಕ್ಯಾನ್ಸರ್ ರಿಜಿಸ್ಟ್ರಿ (PBCR) ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

English summary
‘I SMOKE’ (I Support the Movement tO Kill cancEr) was a movement conducted in Bangalore by ‘The iCare Group’ in association with 'Techfest, IIT Bombay' with a vision to eradicate lung cancer in India, to eliminate the ill-habit of smoking and aware the youth about its harmful effects.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X