ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಸಮಾವೇಶ

By Rajendra
|
Google Oneindia Kannada News

ಬೆಂಗಳೂರು, ಜ.29: ತನ್ನ ಸದಸ್ಯರಿಗೆ ಗುಣಮಟ್ಟದ ಶಿಕ್ಷಣ ಮತ್ತು ನಿರಂತರವಾದ ವೃತ್ತಿಪರ ಶಿಕ್ಷಣ ಒದಗಿಸುವುದಕ್ಕೆ ಐಸಿಎಐ ಬದ್ಧವಾಗಿದೆ. ವಿಶ್ವದಲ್ಲೇ ಅತಿದೊಡ್ಡ ಅಕೌಂಟಿಂಗ್ ಸಂಸ್ಥೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಐಸಿಎಐ, ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್ ಇಂಡಿಯನ್ ಚಾರ್ಟರ್ಡ್ ಅಕೌಂಟೆಂಟ್ ಎಂಬ ಸ್ಥಾನಮಾನ ಗಳಿಸುವತ್ತ ಮುನ್ನುಗ್ಗುತ್ತಿದೆ.

ಸದಸ್ಯರ ನಿರಂತರ ವೃತ್ತಿಪರ ಪ್ರಗತಿಯ ಭಾಗವಾಗಿ, ಐಸಿಎಐ "ಅಕೌಂಟೆನ್ಸಿ ಪ್ರೊಫೆಷನ್: ಬಿಲ್ಡಿಂಗ್ ಗ್ಲೋಬಲ್ ಕಾಂಪಿಟಿಟಿವ್ ನೆಸ್; ಆಕ್ಸೆಲರೇಟಿಂಗ್ ಗ್ರೋತ್'' ಎಂಬ ವಿಚಾರದಲ್ಲಿ 3 ದಿನಗಳ ಅಂತಾರಾಷ್ಟೀಯ ಸಮಾವೇಶವನ್ನು ಹಮ್ಮಿಕೊಂಡಿದೆ. ಬೆಂಗಳೂರಿನಲ್ಲಿ 2015ರ ಜನವರಿ 29ರಿಂದ 31ರವರೆಗೆ ಈ ಸಮಾವೇಶ ನಡೆಯಲಿದೆ.

ಕಾರ್ಯಕ್ರಮದ ಶ್ರೇಷ್ಠತೆ ಹಾಗೂ ಸಮಾವೇಶದಲ್ಲಿ ಚರ್ಚೆಯಾಗುವ ವಿಚಾರಗಳು, ಸಮಕಾಲೀನ ವಿಷಯಗಳ ಬಗ್ಗೆ ಹುಟ್ಟಿಕೊಂಡ ಹೊಸ ಚಿಂತನೆಗಳ ಕುರಿತು ಅರಿತುಕೊಳ್ಳುವ ವಿಶಿಷ್ಟ ಅವಕಾಶವಾಗಿದೆ ಹಾಗೂ ಇದು ನಿಮ್ಮನ್ನು ನೀವು ವೃತ್ತಿಪರವಾಗಿ ಮೇಲ್ದರ್ಜೆಗೇರಿಸಲೂ ಇದು ಸಹಕಾರಿ.

ICAI to hold International Conference in Bengaluru

ಸಮಾವೇಶದ ಪ್ರಧಾನ ವಿಚಾರಗಳು
* ವರದಿಗಾರಿಕೆಯ ಸಾರ- ಆಡಳಿತ ಮತ್ತು ಸುಸ್ಥಿರತೆ
* ಬದಲಾವಣೆಯ ನಿರ್ವಹಣೆ: ನಿಯಂತ್ರಣ ಮತ್ತು ಅಭಿವೃದ್ಧಿಯ ಸನ್ನಿವೇಶದಲ್ಲಿ
* ನಿರ್ವಹಣೆ ಮತ್ತು ನಾಯಕತ್ವ: ಪ್ರಗತಿಯ ಗಡಿಗಳು
* ಭವಿಷ್ಯದ ಪ್ರಗತಿಗಾಗಿ ವೃತ್ತಿಪರ ಮಾರ್ಗ
* ಸಂಗಮ- ವೃತ್ತಿಪರ ಮತ್ತು ಸಮಾಜ
* ವೃತ್ತಿಪರ ದೃಶ್ಯಾವಳಿ
* ಹಣಕಾಸು ಸೇವೆಗಳ ಕ್ಷೇತ್ರ- ಸುಸ್ಥಿರ ಅಭಿವೃದ್ಧಿಗಾಗಿ ಅಜೆಂಡಾ
* ಮುಂದಿನ ಶತಮಾನದಲ್ಲಿ ವೃತ್ತಿಪರತೆ: ಬದಲಾವಣೆಯ ಆಲಿಂಗನ

ಅಕೌಂಟೆನ್ಸಿ ವೃತ್ತಿಗೆ ಸಮಕಾಲೀನ ಪ್ರಾಮುಖ್ಯತೆ ಎಂಬ ವಿಚಾರಗಳಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪರಿಕಲ್ಪನೆಗಳನ್ನು ಒಂದೆಡೆ ತರುವುದೇ ಈ ಸಮಾವೇಶದ ಮುಖ್ಯ ಉದ್ದೇಶವಾಗಿದೆ. ಶೈಕ್ಷಣಿಕ ತಜ್ಞರು, ಸಂಶೋಧಕರು, ಪ್ರಾಕ್ಟೀಷನರ್ ಗಳು ಮತ್ತು ನೀತಿನಿರೂಪಕರು ಸಮಾವೇಶದಲ್ಲಿ ಭಾಗವಹಿಸಲಿದ್ದು, ಜಾಗತಿಕ ಟ್ರೆಂಡ್, ವಿಚಾರಗಳು ಮತ್ತು ಸವಾಲುಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.

ಸಮಾವೇಶದಲ್ಲಿ ಏಕಕಾಲಕ್ಕೆ ಅಂತಾರಾಷ್ಟ್ರೀಯ ಜಾಲ ಶೃಂಗ ಎಂಬ ಸೆಷನ್ ಕೂಡ ನಡೆಯಲಿದ್ದು, ಇದರಲ್ಲಿ ಎಸ್‍ಎಂಪಿಗಳು, ಮಹಿಳಾ ಸಿಎಂ ಸದಸ್ಯರು ಮತ್ತು ಯುವ ಸಿಎಂ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ತಂತ್ರಜ್ಞಾನ ಯೋಜನೆಗಳು, ಅಂತಾರಾಷ್ಟ್ರೀಯ ಯೋಜನೆಗಳು ಮತ್ತು ಶಾಖೆಗಳ ಗ್ಯಾಲರಿಗೆಂದು ವಿಶೇಷ ಪೆವಿಲಿಯನ್ ಗಳನ್ನೂ ಸ್ಥಾಪಿಸಲಾಗಿದೆ.

ಪ್ರತಿನಿಧಿಗಳಿಗೆ ಸುಲಭವಾಗಲೆಂದು, ಮೊಬೈಲ್ ಆಪ್ ಹಾಗೂ ನೋಂದಣಿ ವೆಬ್ ಸೈಟ್ ಸೌಲಭ್ಯವನ್ನೂ ಒದಗಿಸಲಾಗಿದೆ. ಸಮಾವೇಶದ ಸಂದರ್ಭದಲ್ಲಿ, ಇನ್ನೊಂದೆಡೆ ಎಸ್‍ಎಎಫ್‍ಎ ಸಭೆಯೂ ನಡೆಯಲಿದೆ. ಸೆಷನ್ನ್ ಗಳು, ಸಂವಾದ ಕಾರ್ಯಕ್ರಮಗಳು, ವಿಶೇಷ ಸೆಷನ್ ಗಳ ವಿವರವನ್ನು ಒಳಗೊಂಡ ಸಮಾವೇಶದ ಪ್ರಕಟಣೆಯನ್ನು ಇದರೊಂದಿಗೆ ಲಗತ್ತಿಸಲಾಗಿದೆ.

ಸ್ವಚ್ಛ ಭಾರತ ಅಭಿಯಾನ: "ಉತ್ತಮ ಆಡಳಿತ ದಿನ''ದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳಲೆಂದು 2014ರ ಡಿಸೆಂಬರ್ 25ರಂದು ವಾರಾಣಾಸಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಗೌರವಾನ್ವಿತ ಪ್ರಧಾನಿಯವರು, ಹಲವು ಗಣ್ಯರು ಮತ್ತು ಸಂಸ್ಥೆಗಳ ಜೊತೆಗೆ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಲು ಇನ್ಸ್ ಟಿಟ್ಯೂಟ್ ಆಫ್ ಚಾರ್ಟರ್ಡ್ ಆಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ) ಹೆಸರನ್ನೂ ನಾಮನಿರ್ದೇಶನ ಮಾಡಿದ್ದರು.

2014ರ ಅಕ್ಟೋಬರ್ 2ರಂದು ಸ್ವಚ್ಛ ಭಾರತ ಅಭಿಯಾನವನ್ನು ಘೋಷಿಸಿದ್ದ ಗೌರವಾನ್ವಿತ ಪ್ರಧಾನಮಂತ್ರಿಯವರು ಈ ಅಭಿಯಾನವನ್ನು ಮುಂದುವರಿಸಿಕೊಂಡು ಹೋಗಲು ಕೆಲವು ಗಣ್ಯರ ಹೆಸರುಗಳನ್ನು ನಾಮನಿರ್ದೇಶನ ಮಾಡಿದ್ದರು. ವಾರಾಣಾಸಿಯಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಪರಿಶೀಲಿಸುವ ವೇಳೆ ಪ್ರಧಾನಿಯವರು ಇತರರ ಜೊತೆಗೆ ಐಸಿಎಐ ಅನ್ನೂ ಹೆಸರಿಸಿದ್ದು ಹೆಮ್ಮೆಯ ಸಂಗತಿ.

ಸ್ವಚ್ಛ ಭಾರತ ಅಭಿಯಾನದಲ್ಲಿ ಐಸಿಎಐ ಪಾಲ್ಗೊಳ್ಳುವಿಕೆಯ ಪ್ರಮುಖಾಂಶಗಳು
* ಎಲ್ಲ ಕಚೇರಿಗಳು, ಶಾಖೆಗಳು, ಐಟಿಟಿ ಕೇಂದ್ರಗಳು, ಓದುವ ಕೋಣೆಗಳು, ಗ್ರಂಥಾಲಯ, ಸಭಾಂಗಣಗಳು ಇತ್ಯಾದಿಗಳಲ್ಲಿ ವಿಶೇಷ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುವುದು
* ವಿಶೇಷ ಸಮಿತಿಗಳ ರಚನೆ, ಪೇಪರ್‍ರಹಿತ ಪರಿಸರಕ್ಕೆ ಉತ್ತೇಜನ
* ಸ್ಪರ್ಧೆಗಳು, ವಾಕಥಾನ್ ಗಳು ಹಾಗೂ ಕಾರ್ಯಾಗಾರಗಳ ಮುಖಾಂತರ ಜಾಗೃತಿ ಮೂಡಿಸುವುದು
* ಸ್ವಚ್ಛ ಸಪ್ತಾಹ ಎಂಬ ಕಾರ್ಯಕ್ರಮ ಆಯೋಜಿಸುವುದು
* ಸ್ಲೋಗನ್ ಗಳನ್ನು ಒಳಗೊಂಡ ಸಾಕಷ್ಟು ಸಂಖ್ಯೆಯ ಕಸದ ಬುಟ್ಟಿಗಳನ್ನು ಅಳವಡಿಸುವುದು ಮತ್ತು ಅದನ್ನು ಬಳಸುವಂತೆ ಜನರು/ ಸಿಬ್ಬಂದಿ/ ಭೇಟಿ ನೀಡುವವರಿಗೆ ಪ್ರೇರಣೆ ನೀಡುವುದು.

ದೇಶಾದ್ಯಂತ ಇರುವ ಐಸಿಎಐ ಸಂಸ್ಥೆಯ ಸುಮಾರು 2.35 ಲಕ್ಷ ಸದಸ್ಯರು ಮತ್ತು 8.50 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಈ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಮತ್ತು ಆ ಮೂಲಕ ಸ್ವಚ್ಛ ಭಾರತ ಅಭಿಯಾನವನ್ನು ಯಶಸ್ವಿಗೊಳಿಸಲಿದ್ದಾರೆ.

ಐಸಿಎಐ ಕುರಿತು: ವಿಶ್ವದ ಖ್ಯಾತ ಅಕೌಂಟಿಂಗ್ ಸಂಸ್ಥೆಗಳಲ್ಲಿ ಒಂದಾದ ದಿ ಇನ್‍ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ)ವು ಶಿಕ್ಷಣ, ವೃತ್ತಿಪರ ಪ್ರಗತಿ, ಉನ್ನತ ಲೆಕ್ಕಪತ್ರ ನಿರ್ವಹಣೆ, ಆಡಿಟಿಂಗ್ ಮತ್ತು ನೈತಿಕ ಗುಣಮಟ್ಟದ ಕ್ಷೇತ್ರಗಳಲ್ಲಿ ತನ್ನದೇ ಆದ ಕೊಡುಗೆ ನೀಡುವ ಮೂಲಕ ಗಣನೀಯ ಸಾಧನೆಯನ್ನು ಮಾಡಿದೆ. ಅಕೌಂಟಿಂಗ್ ನಲ್ಲಿ ತಾಂತ್ರಿಕ ಗುಣಮಟ್ಟವನ್ನು ರಚಿಸುವ ಮತ್ತು ಅನುಷ್ಠಾನ ಮಾಡುವ ಕಾರ್ಯದಲ್ಲಿ ಈ ಸಂಸ್ಥೆಯು ಸಕ್ರಿಯ ಪಾತ್ರ ವಹಿಸುತ್ತಿದೆ.

ಕೇವಲ 1700 ಸದಸ್ಯರಿಂದ ಆರಂಭವಾದ ಈ ಸಂಸ್ಥೆಯು ಈಗ ಸುಮಾರು 2.35 ಲಕ್ಷದಷ್ಟು ಚಾರ್ಟರ್ಡ್ ಅಕೌಂಟೆಂಟ್ ಗಳನ್ನು ಸದಸ್ಯರನ್ನಾಗಿ ಹೊಂದಿದೆ. ಇನ್ನು ಶಿಕ್ಷಣದ ವಿಚಾರಕ್ಕೆ ಬಂದರೆ, 259 ವಿದ್ಯಾರ್ಥಿಗಳಿದ್ದ ಐಸಿಎಐನಲ್ಲಿ ಈಗ 8.50 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಸಕ್ರಿಯವಾಗಿದ್ದು ಸಂಸ್ಥೆಯ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಐಸಿಎಐ ದೇಶಾದ್ಯಂತ 5 ಪ್ರಾದೇಶಿಕ ಕಚೇರಿಗಳು ಮತ್ತು 147 ಶಾಖೆಗಳನ್ನು ಹೊಂದಿದೆ. ಇದರ ಜತೆಗೆ, ಐಸಿಎಸಿಯ ಸಾಗರೋತ್ತರ ಚಟುವಟಿಕೆಗಳೂ ಮುಂದುವರಿದಿದ್ದು, ಜಾಗತಿಕವಾಗಿ 26 ಪ್ರಮುಖ ಪ್ರದೇಶಗಳಲ್ಲಿ ಸಂಸ್ಥೆಯ ಕಾರ್ಯಚಟುವಟಿಕೆಗಳು ಸಾಗುತ್ತಿವೆ. ಹೆಚ್ಚಿನ ಮಾಹಿತಿಗೆ ಈ ವೆಬ್ ಸೈಟ್ ನೋಡಿ.

English summary
As part of the continuous professional development of the members, the Institute of Chartered Accountants of India, ICAI is organizing a 3 day International Conference on "Accountancy Profession: Building Global Competitiveness; Accelerating Growth" from January 29-31, 2015 at Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X