ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆ ರವಿ ಕೇಸ್ : ಪ್ರಮುಖರಿಗೆ ಸಿಬಿಐ ಸಮನ್ಸ್ ಭೀತಿ

By Mahesh
|
Google Oneindia Kannada News

ಬೆಂಗಳೂರು, ಏ.16: ಐಎಎಸ್ ಅಧಿಕಾರಿ ಡಿಕೆ ರವಿ ಡೆತ್ ಕೇಸ್ ಫೈಲ್ ಮತ್ತೆ ಓಪನ್ ಆಗಿದೆ. ಚೆನ್ನೈನ ಸಿಬಿಐ ತಂಡ ಮತ್ತೊಮ್ಮೆ ಎಫ್ ಐಆರ್ ದಾಖಲಿಸಿಕೊಂಡು ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ. ಸಿಬಿಐ ತಂಡದ ಮೊದಲ ಸಮನ್ಸ್ ಯಾರಿಗೆ ಜಾರಿಯಾಗಲಿದೆ. ಯಾವ ಜನಪ್ರತಿನಿಧಿ, ಉದ್ಯಮಿ, ಅಧಿಕಾರಿ ವಿಚಾರಣೆಗೊಳಪಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಮಾ.23ರಂದು ಕರ್ನಾಟಕ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯಲ್ಲಿದ್ದ ಷರತ್ತುಗಳಿಗೆ ಸಿಬಿಐ ಒಪ್ಪಿರಲಿಲ್ಲ. ಮುಖ್ಯವಾಗಿ ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳ್ಳಬೇಕು ಎಂಬ ಷರತ್ತಿಗೆ ಸಿಬಿಐ ಆಕ್ಷೇಪ ವ್ಯಕ್ತಪಡಿಸಿ ಅಧಿಸೂಚನೆ ಹಿಂತಿರುಗಿಸಿತ್ತು. ರವಿ ಕೇಸ್ ಕೈಗೆತ್ತಿಕೊಳ್ಳುವುದೇ ಅನುಮಾನ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು.[ರವಿ ಸಾವಿನ ನಿಗೂಢತೆ: ಸಿದ್ದುಗೆ ಸತ್ಯ ಗೊತ್ತಾಗಿದ್ಯಾ?]

ಅದರೆ, ಸಿದ್ದರಾಮಯ್ಯ ಸರ್ಕಾರ ತ್ವರಿತಗತಿಯಲ್ಲಿ ನಡೆ ಇಟ್ಟು ಯಾವುದೇ ಷರತ್ತುಗಳಿಲ್ಲದೆ ಮುಕ್ತವಾಗಿ ತನಿಖೆ ನಡೆಸುವಂತೆ ಸಿಬಿಐಗೆ ಮತ್ತೊಮ್ಮೆ ಅಧಿಸೂಚನೆ ಕಳಿಸಿತ್ತು. ಇದಕ್ಕೆ ಕೇಂದ್ರ ಗೃಹಸಚಿವಾಲಯದ ಒಪ್ಪಿಗೆಯೂ ಸಿಕ್ಕಿತ್ತು. ಇದಾದ ಬಳಿಕೆ ಸಿಬಿಐ ತಂಡ ತನ್ನ ತನಿಖೆ ಮುಂದುವರೆಸಿದೆ. [ಸಿಬಿಐಗೆ ಷರತ್ತು ರಹಿತ ಸೂಚನೆ ಕೊಟ್ಟ ಸಿದ್ದು]

ಈ ನಡುವೆ ಪ್ರಕರಣವನ್ನು ಮತ್ತೊಮ್ಮೆ ಸಿಬಿಐಗೆ ವಹಿಸಿರುವುದನ್ನು ಸ್ವಾಗತಿಸಿದ ರವಿ ಅವರ ಗೆಳತಿ ಐಎಎಸ್ ಅಧಿಕಾರಿ, ಸತ್ಯಕ್ಕೆ ಜಯವಾಗಲಿ ಎಂದು ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದರು.

IAS Officer DK Ravi Death case CBI registers fresh FIR

ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣದ ತನಿಖೆ ನಡೆಸುವ ತಂಡದ ವಿವರ ಈಗ ಪ್ರಕಟವಾಗಿದೆ. ಚೆನ್ನೈ ಸಿಬಿಐ ಘಟಕದ ಡಿಐಜಿ ಸೆಲ್ವರಾಜ್ ಸೆಂಗತ್ತೀರ್ ಹಾಗೂ ವಿಶೇಷ ಬ್ರ್ಯಾಂಚಿನ ಎಸ್ಪಿ ಶರವಣನ್ ಅವರ ನೇತೃತ್ವದ ವಿಶೇಷ ತಂಡ ತನಿಖೆ ನಡೆಸುತ್ತಿದೆ. [ಡಿಕೆ ರವಿ ಕೇಸ್: ಸಿಬಿಐ ಪ್ರಕರಣ ಕೈ ಬಿಡುವ ಸಾಧ್ಯತೆ?]

ಯಾರಿಗೆ ಮೊದಲ ಸಮನ್ಸ್: ಮೂಲಗಳ ಪ್ರಕಾರ ಡಿಕೆ ರವಿ ಅವರ ಕಾರಿನ ಚಾಲಕನನ್ನು ಮೊದಲಿಗೆ ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ. ಸಿಐಡಿಯಿಂದ ಅಧಿಕೃತವಾಗಿ ಕೇಸಿಗೆ ಸಂಬಂಧಿಸಿದ ದಾಖಲೆಗಳನ್ನು ಸಿಬಿಐ ಪಡೆದುಕೊಳ್ಳಬೇಕಿದೆ.

ಡಿಕೆ ರವಿ ಪತ್ನಿ, ಮಾವ, ಅಣ್ಣ ಹಾಗೂ ಇತರೆ ಕುಟುಂಬಸ್ಥರು, ಡಿಕೆ ರವಿ ಸಹದ್ಯೋಗಿಗಳು, ಡಿಕೆ ರವಿ ರೈಡ್ ಮಾಡಿದ ಕಂಪನಿಗಳು ಸೇರಿದಂತೆ ಜನಪ್ರತಿನಿಧಿಗಳು, ಉದ್ಯಮಿಗಳು, ವಾಣಿಜ್ಯ ತೆರಿಗೆ ವಂಚಕರು, ರಿಯಲ್ ಎಸ್ಟೇಟ್ ಸಂಸ್ಥೆ ಮಾಲೀಕರು ಹಾಗೂ ಅಧಿಕಾರಿಗಳು ಸಿಬಿಐ ವಿಚಾರಣೆ ಲಿಸ್ಟ್ ನಲ್ಲಿದ್ದಾರೆ. [ರವಿ ಕೇಸ್: ಸಾವು, ಸಿಐಡಿ, ಸಿಬಿಐ ತನಕ ಟೈಮ್ ಲೈನ್]

ಸಿಬಿಐನ ಒಂದು ತಂಡ ರವಿ ಅವರ ಮೊಬೈಲ್, ಈಮೇಲ್, ಫೇಸ್​ಬುಕ್ ಖಾತೆಗಳನ್ನು ಪರಿಶೀಲಿಸಲಿದೆ. ಈ ಬಗ್ಗೆ ಸೈಬರ್ ಕ್ರೈಂ ವಿಭಾಗದಿಂದ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಜೊತೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಲಾದ ಮರಣೋತ್ತರ ಪರೀಕ್ಷೆ ವರದಿ
ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನಡೆಸಲಾದ ಎಫ್ ಎಸ್ ಎಲ್ ವರದಿಯನ್ನು ಸಿಬಿಐ ತಂಡ ಪಡೆಯಲಿದೆ.

English summary
The Central Bureau of Investigation has registered an FIR with regard to the death of IAS officer D K Ravi. The FIR or preliminary enquiry enables the CBI to formally investigate the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X