ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭೂ ಕಬಳಿಕೆ: ರಾಮಸ್ವಾಮಿಗೆ ಸಾಂಗ್ಲಿಯಾನ ಚಾಲೆಂಜ್

By Mahesh
|
Google Oneindia Kannada News

ಬೆಂಗಳೂರು, ಅ.19: ತಮ್ಮ ಕುಟುಂಬದ ವಿರುದ್ಧದ ಭೂ ಕಬಳಿಕೆ ಆರೋಪವನ್ನು ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಉಪಾಧ್ಯಕ್ಷ ಡಾ.ಎಚ್.ಟಿ.ಸಾಂಗ್ಲಿಯಾನ ತಳ್ಳಿ ಹಾಕಿದ್ದಾರೆ. ಆರೋಪಗಳನ್ನು ಸಾಬೀತು ಪಡಿಸುವಂತೆ ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಎ.ಟಿ.ರಾಮಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ.

ನಮ್ಮ ಕುಟುಂಬದಿಂದ ಯಾವುದೇ ಭೂ ಒತ್ತುವರಿಯಾಗಿಲ್ಲ. ಈ ಸಂಬಂಧ ಯಾವುದೇ ರೀತಿಯ ತನಿಖೆ ಎದುರಿಸಲು ಸಿದ್ಧ. ಸರ್ಕಾರ ತನಗೆ ಭೂಮಿ ನೀಡಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಇಷ್ಟು ವರ್ಷದ ತನ್ನ ಸಾರ್ವಜನಿಕ ಜೀವನದಲ್ಲಿ ಯಾವುದೇ ಭೂಮಿಯನ್ನು ಪರಭಾರೆ ಮಾಡಿಲ್ಲ. ಸರ್ಕಾರದ ಯಾವುದೇ ಆಸ್ತಿಯನ್ನು ಅತಿಕ್ರಮಣ ಮಾಡಿಲ್ಲ. ನನ್ನ ವಿರುದ್ಧ ರಾಮಸ್ವಾಮಿ ಮಾಡಿರುವ ಆರೋಪವನ್ನು ಸಾಬೀತುಪಡಿಸಬೇಕು ಎಂದು ಸಾಂಗ್ಲಿಯಾನ ಚಾಲೆಂಜ್ ಮಾಡಿದ್ದಾರೆ.

ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಉಪಾಧ್ಯಕ್ಷ ಡಾ.ಎಚ್.ಟಿ.ಸಾಂಗ್ಲಿಯಾನ ಕುಟುಂಬವು ನಕಲಿ ದಾಖಲೆ ಸೃಷ್ಟಿಸಿ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದೆ ಎಂದು ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಎ.ಟಿ.ರಾಮಸ್ವಾಮಿ ಆರೋಪಿಸಿದ್ದಾರೆ.

H.T. Sangliana denies AT Ramaswamy allegations on Land Encroachment

ಬೆಂಗಳೂರು ಉತ್ತರ ತಾಲೂಕಿನ ಜಾಲ ಹೋಬಳಿಯ ಬಡೇನಹಳ್ಳಿ ಗ್ರಾಮದಲ್ಲಿ ಆರು ಎಕರೆ ಭೂಮಿ(ಗೋಮಾಳದ ಜಾಗ)ಯನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ್ದಾರೆ. ಸಾಂಗ್ಲಿಯಾನ ತಮ್ಮ ಮಗಳು ಎಲಿಜಬೆತ್‌ಯಾನಾ ಸಿಂಟೊ, ಅಳಿಯ ಜಾನ್‌ಪಾಲ್ ಸಿಂಟೊ ಹೆಸರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರಕಾರಿ ಭೂಮಿಯನ್ನು ಕಬಳಿಸಿದ್ದಾರೆ. ಈ ಕಾರ್ಯಕ್ಕೆ ತಹಶೀಲ್ದಾರ್, ಉಪ ವಿಭಾಗಾಧಿಕಾರಿ, ಅಪರ ಜಿಲ್ಲಾಧಿಕಾರಿಗಳು ಕೈಜೋಡಿಸಿದ್ದಾರೆ ಎಂದು ರಾಮಸ್ವಾಮಿ ಆರೋಪಿಸಿದರು.

ಮತ್ತೊಂದು ಪ್ರಕರಣ: ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ಶ್ರೀನಿವಾಗಿಲು ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರು, ಆರ್ಥಿಕವಾಗಿ ಹಿಂದುಳಿದಿರುವವರಿಗಾಗಿ ನಿವೇಶನ ನೀಡಲು ಸರಕಾರ 1984ರಲ್ಲಿ 66 ಎಕರೆ 22 ಗುಂಟೆ ಜಮೀನನ್ನು ಮಂಜೂರು ಮಾಡಿತ್ತು

ಆದರೆ, 2004ರವರೆಗೂ ಯಾವುದೇ ಕಾರ್ಯಚಟುವಟಿಕೆಗಳು ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಶಾಂತಿನಗರ ಗೃಹ ನಿರ್ಮಾಣ ಸಂಘ ಈ ನಿವೇಶನಗಳನ್ನು ಕಬಳಿಸಲು ಸಂಚು ರೂಪಿಸಿದೆ. ಒಂದೇ ಕುಟುಂಬದವರಿಗೆ 150ಕ್ಕೂ ಹೆಚ್ಚು ನಿವೇಶನಗಳನ್ನು ಮಾರಾಟ ಮಾಡಿರುವುದು ಅನುಮಾನ ಮೂಡಿಸಿದೆ

ಸಾಂಗ್ಲಿಯಾನ ಹಾಗೂ ಶಾಂತಿನಗರ ಗೃಹ ನಿರ್ಮಾಣ ಸಂಘಕ್ಕೆ ಸಂಬಂಧಿಸಿದ ಎರಡು ಪ್ರಕರಣಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆಗೊಳಪಡಿಸಬೇಕು. ಅಲ್ಲದೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಮಸ್ವಾಮಿ ಆಗ್ರಹಿಸಿದ್ದಾರೆ.

English summary
A.T Ramaswamy alleged that H.T. Sangliana and his family forged documents to acquire six acres of gomala land in Jadevahalli of Jaala hobli in Bangalore North taluk.Former Bangalore Police Commissioner H.T. Sangliana denied the allegations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X