ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೋಮವಾರ ಸಂಜೆ ಆಗಸದಲ್ಲಿ ಬುಧ ಸಂಕ್ರಮಣ!

By ಅಶೋಕ ರಂಗಪ್ಪ ಉ೦ಡಿ, ಗದಗ
|
Google Oneindia Kannada News

ಖಗೋಳ ವೀಕ್ಷಕರಿಗೆ, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಸಾರ್ವಜನಿಕರಿಗೆ ಸಿಹಿ ಸುದ್ಧಿ ಇದೇ ಮೇ 9ರ ಸಂಜೆ 5 ಗಂಟೆ 35 ನಿಮಿಷಕ್ಕೆ ಸೂರ್ಯಾಸ್ತಕ್ಕೂ ಮುಂಚೆ ದಶಕಗಳ ನಂತರ ಆಗಸದಲ್ಲಿ ವಿಸ್ಮಯ ಗೋಚರಿಸಲಿದೆ ಅದುವೇ ಬುಧ ಸಂಕ್ರಮಣ.

ಸೂರ್ಯನ ಸಂಸಾರದಲ್ಲಿಯ 8 ಗ್ರಹಗಳಲ್ಲಿ ಅತ್ಯಂತ ಚಿಕ್ಕ ಹಾಗೂ ಸೂರ್ಯನಿಗೆ ಅತೀ ಸಮೀಪವಿರುವ ಗ್ರಹವೇ ಬುಧ ಗ್ರಹ. ಸೂರ್ಯನಿಂದ ಸುಮಾರು 43,000,000 ಕಿ.ಮೀ ರಿಂದ 70,000,000 ಕಿ.ಮೀ ದೂರದಲ್ಲಿರುವ ಬುಧ ಗ್ರಹವು ಸೂರ್ಯೋದಯದ ಎರಡು ಗಂಟೆ ಮೊದಲು ಉದಯವಾಗುತ್ತದೆ ಅಥವಾ ಸೂರ್ಯಾಸ್ತದ ಸುಮಾರು ಎರಡು ಗಂಟೆ ನಂತರ ಇದು ಅಸ್ತವಾಗುತ್ತದೆ.

ಇದೇ ವರ್ಷದ ಜನವರಿ 20ರಿಂದ ಫೆಬ್ರವರಿ 20ರವರೆಗೆ ಸೂರ್ಯಾಸ್ತಕ್ಕೂ ಮೊದಲು ಬುಧ ಗ್ರಹ ನೋಡುವ ಅವಕಾಶ ಸಿಕ್ಕಿತ್ತು. ಇದರ ಭ್ರಮಣ ಅವಧಿ 59 (58 ದಿನ 15.5088 ಘಂಟೆಗಳು), ಇದರ ಕಕ್ಷಾ ಅವಧಿ 88 ದಿನಗಳು. ಇದರ ಮುಕ್ತಿ ವೇಗ 4.435 ಕಿ.ಮೀ/ಸೆ. [ಖಗೋಳ ವಿಸ್ಮಯ 'ಬುಧ ಸಂಕ್ರಮಣ' ಕಣ್ಣು ತುಂಬಿಕೊಳ್ಳಿ]

How to watch Mercury transit 2016

ಏನಿದು ಬುಧ ಸಂಕ್ರಮಣ?

ಬುಧ ಗ್ರಹದ ಕಕ್ಷೆಯು ಭೂಮಿಯ ಕಕ್ಷೆಯ ಸಮತಲಕ್ಕೆ 7 ಡಿಗ್ರಿ ಓರೆಯಾಗಿದೆ. ಈ ಕಾರಣದಿಂದಾಗಿ ಬುಧ ಗ್ರಹವು ಈ ಸಮತಲವನ್ನು ದಾಟಿ ಹೋಗುವಾಗ ಸೂರ್ಯ ಮತ್ತು ಭೂಮಿಗಳ ನಡುವೆ ಇದ್ದರೆ ಮಾತ್ರ ಬುಧ ಸಂಕ್ರಮಣವು ಉಂಟಾಗುತ್ತದೆ. ಈ ವಿಸ್ಮಯ ಸರಾಸರಿ 7 ವರ್ಷಗಳಿಗೊಮ್ಮೆ ಸಂಭವಿಸುತ್ತದೆ.

ಹಿನ್ನೆಲೆ

ಬುಧ ಗ್ರಹವು ಕ್ರಿ.ಪೂ 3000ಕ್ಕೂ ಮೊದಲೇ ಪರಿಚಿತವಾದ ಗ್ರಹ. ಪ್ರಾಚೀನ ಗ್ರೀಕರು ಈ ಗ್ರಹಕ್ಕೆ ಎರಡು ಹೆಸರುಗಳನ್ನು ಕೊಟ್ಟಿದ್ದರು; ಬುಧ ಗ್ರಹವು ಮುಂಜಾನೆ ಕಂಡಾಗ ಅಪೋಲೋ ಎಂತಲೂ ಸಂಜೆ ಕಂಡಾಗ ಹರ್ಮಸ್ ಎಂತಲೂ ಕರೆಯುತ್ತಿದ್ದರು. ಪೈಥಾಗೋರಸ್ ಇದರ ಬಗಗೆ ಸಂಪೂರ್ಣ ಮಾಹಿತಿ ಒಳಗೊಂಡ ತನ್ನ ಯೋಚನೆಯನ್ನು ಪ್ರತಿಪಾದಿಸಿದ ನಂತರ ಇವೆರಡೂ ಒಂದೇ ಗ್ರಹವೆಂದು ಗ್ರೀಕ್ ಖಗೋಳಶಾಸ್ತ್ರಜ್ಞರು ಅರಿತುಕೊಂಡರು. [ನಾಸಾ ಸಂಸ್ಥೆ ಸ್ಪರ್ಧೆ ಗೆದ್ದ ಬೆಂಗಳೂರಿನ ವಿದ್ಯಾರ್ಥಿನಿ]

How to watch Mercury transit 2016

17ನೇ ಶತಮಾನದಲ್ಲಿ ಗೆಲಿಲಿಯೋ ಮೊದಲಬಾರಿಗೆ ದೂರದರ್ಶಕದಿಂದ ಬುಧ ಗ್ರಹವನ್ನು ಅವಲೋಕಿಸಿದನು. ಜರ್ಮನ್ ಖಗೋಳ ಶಾಸ್ತ್ರಜ್ಞ ಜೋಹಾನ್ಸ್ ಕೆಪ್ಲರ್ ನ ಭವಿಷ್ಯವಾಣಿಯಂತೆ 1631ರಲ್ಲಿ ಬುಧ ಸಂಕ್ರಮಣ ಉಂಟಾಯಿತು. ಸೂರ್ಯನ ಮುಂದೆ ನಡೆದ ಸಂಕ್ರಮಣದ ಒಂದು ವೀಕ್ಷಣೆಯು ಅದೇ ಮೊದಲ ಬಾರಿಗೆ ನಡೆಯಿತು. 1639ರಲ್ಲಿ ದೂರದರ್ಶಕವನ್ನು ಉಪಯೋಗಿಸಿ ಬುಧದ ಕಕ್ಷೆಯಲ್ಲೂ ಪಕ್ಷಗಳುಂಟಾಗುತ್ತವೆಂದು ಜಿಯೋವಾನಿ ಜುಪಿ ಕಂಡುಹಿಡಿದನು. ಈ ಅವಲೋಕನೆಗಳಿಂದ ಬೂಧ ಗ್ರಹ ಸೂರ್ಯನ ಸುತ್ತ ಪರಿಭ್ರಮಿಸುತ್ತದೆಯೆಂದು ನಿರ್ಣಾಯಕವಾಗಿ ಸಾಬೀತಾಯಿತು.

ಭೂಮಿಯಿಂದ ನೋಡಿದಂತೆ ಒಂದು ಗ್ರಹದ ಮುಂದೆ ಇನ್ನೊಂದು ಗ್ರಹವು ಹಾದುಹೋಗುವ, ಮರೆಮಾಡುವ ಘಟನೆಯು ಬಹಳ ಅಪರೂಪ. ಬುಧ ಮತ್ತು ಶುಕ್ರಗಳು ಪ್ರತಿ ಕೆಲವು ಶತಮಾನಗಳಿಗೊಮ್ಮೆ ಒಂದು ಇನ್ನೊಂದನ್ನು ಮರೆಮಾಡುತ್ತವೆ. ಮೇ 28, 1937ರಂದು ನಡೆದ ಮರೆಮಾಚುವಿಕೆ ಇತಿಹಾಸದಲ್ಲೇ ವೀಕ್ಷಿಸಲಾದ ಏಕೈಕ ಮರೆಮಾಚುವಿಕೆಯ ಘಟನೆ. ಈ ಘಟನೆಯನ್ನು ರಾಯಲ್ ಗ್ರೀನ್‌ವಿಚ್ ವೀಕ್ಷಣಾಲಯದಲ್ಲಿ ಜಾನ್ ಬೆವಿಸ್ ವೀಕ್ಷಿಸಿದನು. [ವಿಶ್ವದ ರಚನೆ ಕಾರಣ ಪತ್ತೆ ಹಚ್ಚಿದ ವಿಜ್ಞಾನಿಗಳು]


ವಿಶೇಷ ಸೂಚನೆ

ಗ್ರಹಣಗಳನ್ನಾಗಲಿ, ಸಂಕ್ರಮಣಗಳನ್ನಾಗಲಿ ಹಾಗೂ ಸೂರ್ಯನನ್ನಾಗಲಿ ಬರಿಗಣ್ಣಿನಿಂದ ನೋಡಬಾರದು. ಇದರಿಂದ ಕಣ್ಣುಗಳಿಗೆ ಹಾನಿಯಾಗುವ ಸಂಭವವೇ ಹೆಚ್ಚು ಆದ್ದರಿಂದ ಇಂತಹ ಸಂದರ್ಭಗಳಲ್ಲಿ ಸೋಲಾರ್ ಫಿಲ್ಟರ್ ಪೇಪರ್ ಉಪಯೋಗಿಸುವುದು ಒಳಿತು. ಇಲ್ಲವೇ ಅನುಭವಿಗಳ ಮಾರ್ಗದರ್ಶನದಲ್ಲಿ ದೂರದರ್ಶಕದ ಸಹಾಯದಿಂದ ಚಿತ್ರವನ್ನು ಪರದೆಯ ಮೇಲೆ ಸೆರೆಹಿಡಿದು ವೀಕ್ಷೀಸಬಹುದು. ಭಾರತದಲ್ಲಿ ಭಾಗಶಃ ಸಂಕ್ರಮಣ ವೀಕ್ಷಿಸುವ ಅವಕಾಶ ಸಿಗುತ್ತದೆ.

ಅಶೋಕ ರಂಗಪ್ಪ ಉ೦ಡಿ
ವಿಜ್ಞಾನ ಶಿಕ್ಷಕರು ಹಾಗೂ ಹವ್ಯಾಸಿ ಖಗೋಳ ವೀಕ್ಷಕರು
ಬಾಲಕರ ಸರಕಾರಿ ಮಾದರಿ ಕೇಂದ್ರ ಶಾಲೆ, ಸೂಡಿ
ತಾ//ರೋಣ ಜಿ// ಗದಗ
ದೂರವಾಣಿ- 94812 82946

English summary
How to watch Mercury transit 2016? On 9th of May at 5.35 in the evening unusual thing is happening in the space. Planet Mercury, which is nearest to our Sun in our solar system, goes through the sun, making a spectacular view. Do not forget to watch it with solar filter paper.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X