ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ಪಯಣದ ಆಶಾಕಿರಣಕ್ಕಾಗಿ ಕಿಕ್ ಸ್ಟಾರ್ಟ್ ಕ್ಯಾಬ್

ನಡೆಯಲಾಗದೆ, ಮನೆಯ ಕಿಟಕಿಯ ಪಕ್ಕ ಕೂತು ಹೊರ ಜಗತ್ತಿನ ಸಂಭ್ರಮವನ್ನು ಅನುಭವಿಸಲಾಗದೆ ಕುಳಿತವರಿಗೆ, ಆತ್ಮವಿಶ್ವಾಸ ಬಿತ್ತುವುದಕ್ಕೆ, ಕಿಕ್ ಸ್ಟಾರ್ಟ್ ಸಹಾಯ ಹಸ್ತ ಚಾಚುತ್ತಿದೆ. ಏನಿದು ಕಿಕ್ ಸ್ಟಾರ್ಟ್, ಇದರ ಉಪಯೋಗವೇನು?

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಏಪ್ರಿಲ್ 29: ಮನಸ್ಸಿನಲ್ಲಿ ಜಗತ್ತನ್ನೇ ಗೆಲ್ಲುವಷ್ಟು ಆತ್ಮವಿಶ್ವಾಸವಿದ್ದರೂ, ದೈಹಿಕ ನ್ಯೂನತೆಗಳು ಅದ್ಯಾವುದಕ್ಕೂ ಅವಕಾಶ ಕೊಡದೆ ಇದ್ದರಿರಬಹುದು. ಪುಟ್ಟ ಪುಟ್ಟ ಮಕ್ಕಳು ಆಟವಾಡುತ್ತ ಕುಣಿವಾಗ, ನಮ್ಮದೇ ಓರಗೆಯ ಯುವಕರು ಊರೂರು ಸುತ್ತುವಾಗ ನಾನ್ಯಾಕೆ ಈ ಎಲ್ಲ ಸಂತಸಗಳಿಂದ ವಂಚಿತಳಾಗಿದ್ದೇನೆ ಎಂಬ ಅನಿರ್ವಚನೀಯ ಅಳುಕೊಂದು ಮನಸ್ಸನ್ನು ಸುತ್ತಬಹುದು.

ಒಂದು ಹೆಜ್ಜೆಯನ್ನೂ ಮುಂದಿಡಲಾಗದ ನಿಮ್ಮ ಅಸಹಾಯಕತೆ ನಿಮ್ಮಲ್ಲೊಂದು ಕೀಳರಿಮೆಯ ಭಾವವನ್ನು ಮೂಡಿಸಿರಬಹುದು. ಆದರೆ ನಡೆಯಲಾಗದೆ ಅಸಹಾಯಕತೆಯಿಂದ ಕುಗ್ಗಿರುವವರಿಗೆ ಹೊಸ ಪಯಣವನ್ನು ಪರಿಚಯಿಸಲು ಕಿಕ್ ಸ್ಟಾರ್ಟ್ ಎಂಬ ಪರಿಕಲ್ಪನೆ ಶುರುವಾಗಿದೆ.

ನಡೆಯಲಾಗದೆ, ಮನೆಯ ಕಿಟಕಿಯ ಪಕ್ಕ ಕೂತು ಹೊರ ಜಗತ್ತಿನ ಸಂಭ್ರಮವನ್ನು ಅನುಭವಿಸಲಾಗದೆ ಕುಳಿತವರಿಗೆ, ಆತ್ಮವಿಶ್ವಾಸ ಬಿತ್ತುವುದಕ್ಕೆ, ಕಿಕ್ ಸ್ಟಾರ್ಟ್ ಸಹಾಯ ಹಸ್ತ ಚಾಚುತ್ತಿದೆ. ಏನಿದು ಕಿಕ್ ಸ್ಟಾರ್ಟ್, ಇದರ ಉಪಯೋಗವೇನು? ಇದು ದೈಹಿಕ ನ್ಯೂನತೆಯಿಂದ ಬಳಲುತ್ತಿರುವವರಿಗೆ ಹೇಗೆ ಅನುಕೂಲಕರ ಎಂಬಿತ್ಯಾದಿ ವಿಷಯಗಳ ಕುರಿತು ಮಾಹಿತಿ ಇಲ್ಲಿದೆ:

ಏನಿದು ಕಿಕ್ ಸ್ಟಾರ್ಟ್..?

ಏನಿದು ಕಿಕ್ ಸ್ಟಾರ್ಟ್..?

ಇದೊಂದು ಟ್ಯಾಕ್ಸಿ ಸರ್ವಿಸ್. ಓಲಾ, ಊಬರ್ ಗಳಂತೆ ಈ ಕ್ಯಾಬ್ ನಲ್ಲೂ ಬುಕ್ ಮಾಡಿ ನೀವು ನಿಮಗೆ ಬೇಕಾದೆಡೆ ಓಡಾಡಬಹುದು. ಆದರೆ ಈ ಸೇವೆ ನಡೆಯಲಾರದೆ, ದೈಹಿಕ ನ್ಯೂನತೆಯಿಂದ ಬಳಲುತ್ತಿರುವವರಿಗೆ ಮಾತ್ರ. ಸದ್ಯಕ್ಕೆ ಈ ಸೇವೆ ಬೆಂಗಳೂರಿಗರಿಗೆ ಮಾತ್ರ ಲಭ್ಯ.

ನ್ಯೂನತೆ ಮರೆಸುವ ಯತ್ನ

ನ್ಯೂನತೆ ಮರೆಸುವ ಯತ್ನ

ವ್ಹೀಲ್ ಚೇರ್ ಉಪಯೋಗಿಸುವವರಿಗೆ, ನಡೆಯುವುದಕ್ಕೇ ಬಾರದಿರುವವರಿಗೆ ಈ ಕ್ಯಾಬ್ ನಲ್ಲಿ ಸಾಕಷ್ಟು ಸೌಲಭ್ಯಗಳನ್ನು ಪರಿಚಯಿಸಲಾಗಿದೆ. ಕ್ಯಾಬ್ ನಲ್ಲಿರುವ ಅಡ್ಜಸ್ಟೆಬಲ್ ಸೀಟ್ ಅನ್ನು ದೈಹಿಕ ನ್ಯೂನತೆಯಿಂದ ಬಳಲುತ್ತಿರುವವರು ತಮ್ಮ ಅನುಕೂಲಕ್ಕೆ ಬೇಕಾದಂತೆ ಬಳಸಿಕೊಳ್ಳಬಹುದು.

ಪರಿಣಿತ ಪಡೆದ ಡ್ರೈವರ್ ಗಳು

ಪರಿಣಿತ ಪಡೆದ ಡ್ರೈವರ್ ಗಳು

ವ್ಹೀಲ್ ಚೇರ್ ಅನ್ನು ಕ್ಯಾಬ್ ನಲ್ಲಿಯೇ ಕೊಂಡೊಯ್ಯುವುದಕ್ಕೂ ಅನುಕೂಲತೆಯಿದೆ. ಕಿಕ್ ಸ್ಟಾರ್ಟ್ ಕ್ಯಾಬ್ ಡ್ರೈವರ್ ಗಳಿಗೆ ದೈಹಿಕ ನ್ಯೂನತೆಯಿಂದ ಬಳಲುತ್ತಿರುವವರನ್ನು ಹೇಗೆ ನಡೆಸಿಕೊಳ್ಳಬೇಕು ಮತ್ತು ಅವರಿಗೆ ಯಾವುದೇ ತೊಂದರೆಯಾಗದಂತೆ ಏನೆಲ್ಲ ಎಚ್ಚರಿಕೆ ಕೈಗೊಳ್ಳಬೇಕೆಂಬ ಬಗ್ಗೆ ತರಬೇತಿ ನೀಡಲಾಗಿರುತ್ತದೆ. ಪರಿಣಿತ ಡ್ರೈವರ್ ಗಳಾಗಿರುವುದರಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯುವ ಸಂಭವ ಕಡಿಮೆ.

ಬೆಲೆ ಸ್ವಲ್ಪ ಜಾಸ್ತಿ, ಆದ್ರೂ ಅನುಕೂಲ ಕಮ್ಮಿಯೇನಿಲ್ಲ ಬಿಡಿ!

ಬೆಲೆ ಸ್ವಲ್ಪ ಜಾಸ್ತಿ, ಆದ್ರೂ ಅನುಕೂಲ ಕಮ್ಮಿಯೇನಿಲ್ಲ ಬಿಡಿ!

ಸಾಮಾನ್ಯ ಕ್ಯಾಬ್ ಗಳಿಗೆ ಹೋಲಿಸಿದರೆ ಈ ಕ್ಯಾಬ್ ಗಳ ಬೆಲೆ ಸ್ವಲ್ಪ ಜಾಸ್ತಿನೇ. ಆದ್ರು ಇವು ದೈಹಿಕ ನ್ಯೂನತೆಯಿಂದ ಬಳಲುತ್ತಿರುವವರಿಗೆ ಸಾಕಷ್ಟು ಸೌಲಭ್ಯಗಳನ್ನೂ ನೀಡುವುದರಿಂದ ಬೆಲೆ ಜಾಸ್ತಿಯಿದ್ದರೂ ಅನುಕೂಲದ ಬಗ್ಗೆ ಯೋಚಿಸಬೇಕಾಗುತ್ತೆದೆ. 20 ಕಿ.ಮೀ. ಅಥವಾ 2 ಗಂಟೆ ಪ್ರಯಾಣಕ್ಕೆ 800 ರೂ. ನಂತರ ಪ್ರತಿ ಕಿ.ಮೀ.ಗೆ 20 ರೂ., 40 ಕಿ.ಮೀ. ಅಥವಾ 4 ಗಂಟೆ ಪ್ರಯಾಣಕ್ಕೆ 1500 ರೂ., ನಂತರ ಪ್ರತಿ ಕಿ.ಮೀ.ಗೆ 20 ರೂ., 80 ಕಿ.ಮೀ. ಅಥವಾ 8 ಗಂಟೆ ಪ್ರಯಾಣಕ್ಕೆ 3000 ರೂ. ನಂತರ ಪ್ರತಿ ಕಿ.ಮೀ.ಗೆ 20 ರೂ.

ಬುಕ್ ಮಾಡೋದು ಹೇಗೆ?

ಬುಕ್ ಮಾಡೋದು ಹೇಗೆ?

ನೀವೂ ಕಿನ್ ಸ್ಟಾರ್ಟ್ ಕ್ಯಾಬ್ ಬುಕ್ ಮಾಡಬಹುದು. www.kickstartcabs.com ವೆಬ್ ಸೈಟ್ ಗೆ ಹೋಗಿ, ಬುಕ್ ಎ ಕ್ಯಾಬ್ ಆಯ್ಕೆಯನ್ನು ಆರಿಸಿಕೊಳ್ಳಿ. 080-32327777 ಈ ನಂಬರ್ ಗೆ ಫೋನ್ ಮಾಡಿಯೂ ಕ್ಯಾಬ್ ಬುಕ್ ಮಾಡಬಹುದು. ಇಲ್ಲವೆಂದರೆ ಆನ್ ಲೈನ್ ಮೂಲಕವೂ ಕ್ಯಾಬ್ ಬುಕ್ ಮಾಡಬಹುದು. ಬುಕ್ ಎ ಕ್ಯಾಬ್ ಆಯ್ಕೆಯಲ್ಲಿ ನಿಮ್ಮ ಹೆಸರು, ಪಿಕ್ ಅಪ್ ಸ್ಥಳ, ಡ್ರಾಪ್ ಮಾಡಬೇಕಾದ ಸ್ಥಳ, ದಿನ, ಸಮಯ ಮತ್ತು ಯಾವ ರೀತಿಯ ಕ್ಯಾಬ್ ಬೇಕು ಎಂಬ ಕುರಿತು ಮಾಹಿತಿಯನ್ನು ತುಂಬಿದರೆ ಸಾಕು. ನೀವು ಹೇಳಿದ ಸಮಯಕ್ಕೆ ಸರಿಯಾಗಿ ಕಿಕ್ ಸ್ಟಾರ್ಟ್ ನೀವು ಹೇಳಿದ ಜಾಗಕ್ಕೆ ಬಂದು ನಿಂತಿರುತ್ತದೆ!

ವಿವಿಧ ಕಂಪೆನಿಗಳ ಸಹಯೋಗ

ವಿವಿಧ ಕಂಪೆನಿಗಳ ಸಹಯೋಗ

ಎಂಫಸಿಸ್ ಎಫ್ 1, ಐಐಟಿ.ಬಿ, ಡಿಇಒಸಿ, ಮಣಿಪಾಲ್ ಹಾಸ್ಪಿಟಲ್ ಸೇರಿದಂತೆ ವಿವಿಧ ಕಂಪೆನಿಗಳು ಈ ಸೇವೆಯೊಂದಿಗೆ ಕೈಜೋಡಿಸಿವೆ.
ಕಿಕ್ ಸ್ಟಾರ್ಟ್ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ: www.kickstartcabs.com

English summary
Kickstart cabs a taxi service which is exclusively for physically disables has started in Bengaluru. This is really a new ray of hope for the people who are unable to walk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X