ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ APP ಬಳಕೆ ಹೇಗೆ?

By Mahesh
|
Google Oneindia Kannada News

ಬೆಂಗಳೂರು, ಸೆ.19: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಂಪೂರ್ಣ ಮಾಹಿತಿಯುಳ್ಳ ಆಂಡ್ರಾಯ್ಡ್ ಅಪ್ಲಿಕೇಷನ್ ನಿಧಾನವಾಗಿ ಜನಪ್ರಿಯತೆ ಗಳಿಸುತ್ತಿದೆ.

ಈ ಮೊಬೈಲ್ ಅಪ್ಲಿಕೇಷನ್ ನಲ್ಲಿ ವಿಮಾನಗಳ ಆಗಮನ-ನಿರ್ಗಮನ ಸೇರಿದಂತೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಸೌಲಭ್ಯಗಳ ಸಮಗ್ರ ಮಾಹಿತಿ ಸಿಗಲಿದೆ. ವಿಮಾನ ನಿಲ್ದಾಣ ಪ್ರಾಧಿಕಾರ ಸಿದ್ದಪಡಿಸಿರುವ ಈ ಮೊಬೈಲ್ ಅಪ್ಲಿಕೇಷನ್ ಆಂಡ್ರಾಯ್ಡ್ ಹಾಗೂ ಐಒಎಸ್ ನಲ್ಲೂ ಲಭ್ಯವಿದೆ.

* ರಿಯಲ್ ಟೈಮ್ ನಲ್ಲಿ ವಿಮಾನಯಾನ ವಿವರದ ಅಪ್ಡೇಟ್ಸ್, ಇದನ್ನು ಸ್ನೇಹಿತರು ಹಾಗೂ ಕುಟುಂಬದವರೊಡನೆ ಹಂಚಿಕೊಳ್ಳಬಹುದು.
* ವಿಮಾನ ನಿಲ್ದಾಣದ ವೈಫೈ ಜತೆಗೆ ಕೂಡಲೇ ಸಂಪರ್ಕ ಹೊಂದಬಹುದು.
* ವಿಮಾನ ನಿಲ್ದಾಣದಲ್ಲಿ ಎಲ್ಲೆಲ್ಲಿ ಏನೇನು ಸಿಗಲಿದೆ? ಶಾಪಿಂಗ್, ಕೆಫೆ ಎಲ್ಲಾ ಮಾಹಿತಿ ಸಿಗಲಿದೆ.
* ತೆರಿಗೆ ರಹಿತ ಶಾಪಿಂಗ್ ಎಲ್ಲಿ ಮಾಡಬಹುದು
* ವಿಮಾನ ನಿಲ್ದಾಣದಿಂದ ಸಾರಿಗೆ ವ್ಯವಸ್ಥೆ, ಟ್ಯಾಕ್ಸಿ, ಬಸ್ ಬಗ್ಗೆ ಪೂರ್ಣ ಮಾಹಿತಿ ಸುಲಭವಾಗಿ ಲಭ್ಯ.

ವಿಮಾನ ನಿಲ್ದಾಣ APP ಅಳವಡಿಸಿಕೊಳ್ಳುವುದು ಹೇಗೆ?

ವಿಮಾನ ನಿಲ್ದಾಣ APP ಅಳವಡಿಸಿಕೊಳ್ಳುವುದು ಹೇಗೆ?

ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಈ ಲಿಂಕ್ ಕ್ಲಿಕ್ ಮಾಡಿ

ನಿಮ್ಮ ಆಂಡ್ರಾಯ್ಡ್ ಮೊಬೈಲ್ ಫೋನಿನಲ್ಲಿ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ 4.1ಕ್ಕಿಂತ ಅಧಿಕ ಓಸ್ ಇದ್ದರೆ ಸಾಕು. 11 ಎಂಬಿ ತೂಗುವ ಈ ಅಪ್ಲಿಕೇಷನ್ ಸುಲಭವಾಗಿ ಇನ್ ಸ್ಟಾಲ್ ಮಾಡಿಕೊಳ್ಳಬಹುದು.
ಅಪ್ಲಿಕೇಷನ್ ಬಗ್ಗೆ ಏನಾದರೂ ಸಲಹೆ, ಸೂಚನೆ, ಸಮಸ್ಯೆಗಳಿದ್ದರೆ, ಡೆವಲಪರ್ ಗಳನ್ನು ನೇರವಾಗಿ ಸಂಪರ್ಕಿಸಿ:
ಇಮೇಲ್: [email protected]
1st Floor, Alpha 2 Building, Kempegowda International Airport, Bengaluru Devanahalli, Bangalore - 560300
ಏನೆಲ್ಲ ಸೌಲಭ್ಯಗಳು ಇಲ್ಲಿ ಲಭ್ಯ

ಏನೆಲ್ಲ ಸೌಲಭ್ಯಗಳು ಇಲ್ಲಿ ಲಭ್ಯ

* ರಿಯಲ್ ಟೈಮ್ ನಲ್ಲಿ ವಿಮಾನಯಾನ ವಿವರದ ಅಪ್ಡೇಟ್ಸ್, ಇದನ್ನು ಸ್ನೇಹಿತರು ಹಾಗೂ ಕುಟುಂಬದವರೊಡನೆ ಹಂಚಿಕೊಳ್ಳಬಹುದು.
* ವೈಫೈ, ಶಾಪಿಂಗ್, ತೆರಿಗೆ ರಹಿತ ಶಾಪಿಂಗ್, ಎಲ್ಲೆಲ್ಲಿ ಆಸನದ ವ್ಯವಸ್ಥೆ ಇದೆ ಹೀಗೆ ಎಲ್ಲಾ ವಿವರಗಳು ಡ್ಯಾಶ್ ಬೋರ್ಡ್ ನಲ್ಲಿ ಲಭ್ಯವಿರುತ್ತದೆ.
* ಎಲ್ಲಕ್ಕೂ ಪ್ರತ್ಯೇಕ ಲಿಂಕ್ ಗಳಿದ್ದು, ಥಂಬ್ ನೇಲ್ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ವಿವರಣೆ ಪಡೆಯಬಹುದು.
* ಅಪ್ಲಿಕೇಷನ್ ಓಪನ್ ಆದ ತಕ್ಷಣ ತೋರಿಸುವಂತೆ ವಿಮಾನಯಾನ ಸಂಸ್ಥೆ, ವಿಮಾನದ ಸಂಖ್ಯೆ, ಆಗಮನ-ನಿರ್ಗಮನದ ಸಮಯ, ಚೆಕ್ ಇನ್ ಟೈಮ್, ಯಾವ ಗೇಟ್ ಎಲ್ಲವೂ ವಿವರವಾಗಿ ನೀಡಲಾಗಿದೆ.

 ರಿಯಲ್ ಟೈಮ್ ನಲ್ಲಿ ವಿಮಾನಯಾನ ಟ್ರ್ಯಾಕ್ ಮಾಡಿ

ರಿಯಲ್ ಟೈಮ್ ನಲ್ಲಿ ವಿಮಾನಯಾನ ಟ್ರ್ಯಾಕ್ ಮಾಡಿ

ಪ್ರಯಾಣಿಕರು ವಿಮಾನನಿಲ್ದಾಣಕ್ಕೆ ಬರುವ ಮುಂಚಿತವಾಗಿಯೇ ರಿಯಲ್ ಟೈಮ್ ನಲ್ಲಿ ತಾವು ಬುಕ್ ಮಾಡಿರುವ ವಿಮಾನ ಈಗ ಎಲ್ಲಿದೆ ಎಂಬುದನ್ನು ಟ್ಯಾಕ್ ಮಾಡಬಹುದು.

ವಿಮಾನಯಾನ ಸಂಸ್ಥೆ, ವಿಮಾನದ ಸಂಖ್ಯೆ, ಆಗಮನ-ನಿರ್ಗಮನದ ಸಮಯ, ಚೆಕ್ ಇನ್ ಟೈಮ್, ಯಾವ ಗೇಟ್ ಎಲ್ಲವೂ ವಿವರವಾಗಿ ನೀಡಲಾಗಿದೆ. 20 ನಿಮಿಷಕ್ಕೂ ಮುನ್ನ ಗೇಟ್ ಮೂಲಕ ಪ್ರವೇಶ ಪಡೆಯಿರಿ ಎಂಬ ಸಲಹೆಯೂ ಇದೆ. ಬೇಕೆನಿಸಿದಾಗ ಟ್ಯಾಕ್ ಮಾಡುವುದನ್ನು ನಿಲ್ಲಿಸಬಹುದು.

ವಿಮಾನ ನಿಲ್ದಾಣದ ವೈಫೈಗೆ ಕನೆಕ್ಟ್ ಆಗುವುದು ಹೇಗೆ

ವಿಮಾನ ನಿಲ್ದಾಣದ ವೈಫೈಗೆ ಕನೆಕ್ಟ್ ಆಗುವುದು ಹೇಗೆ

BLR ಅಪ್ಲಿಕೇಷನ್ ಆನ್ ಮಾಡಿ ವೈಫೈಗೆ ಚಾಲನೆ ನೀಡಿ, ವಿಮಾನ ನಿಲ್ದಾಣದ ವೈಫೈ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಹೆಸರು, ಇಮೇಲ್ ವಿಳಾಸ ನೀಡಿ, ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಸಿಗಲಿದೆ. ಒಟಿಪಿ(ಒನ್ ಟೈಮ್ ಪಾಸ್ ವರ್ಡ್) ನಮೂದಿಸಿ ಲಾಗ್ ಇನ್ ಆಗಿ.

ಶಾಪಿಂಗ್ ಹಾಗೂ ಇನ್ನಿತರ ವಿವರಗಳನ್ನು ಪಡೆಯುವುದು

ಶಾಪಿಂಗ್ ಹಾಗೂ ಇನ್ನಿತರ ವಿವರಗಳನ್ನು ಪಡೆಯುವುದು

ಶಾಪಿಂಗ್ ಮಾಲ್ ಎಲ್ಲಿದೆ, ಕಾಫಿ ಡೇ ಅಲ್ಲದೆ ಕಡಿಮೆ ದರದ ತಿಂಡಿ ತಿನಿಸು ಎಲ್ಲಿ ಸಿಗಲಿದೆ ಎಂಬ ವಿವರಗಳು ಸುಲಭವಾಗಿ ಸಿಗಲಿದೆ.
ಜತೆಗೆ ಬೇಬಿ ಕೇರ್, ಬ್ಯಾಗೇಜ್ ಮಾಹಿತಿ, ಹಣ ವಿನಿಮಯ ಕೇಂದ್ರ, ಹೆಲ್ಪ್ ಡೆಸ್ಕ್, ಸೆಕ್ಯುರಿಟಿ ವ್ಯವಸ್ಥೆ, ವಿಮಾನ ನಿಲ್ದಾಣದಲ್ಲಿ ಎಲ್ಲೆಲ್ಲಿ ಏನಿದೆ ಎಂಬ ಮ್ಯಾಪ್ ನಿಮ್ಮ ಬೆರಳ ತುದಿಯಲ್ಲೇ ಲಭ್ಯ.

English summary
How to use the official Mobile Application of Kempegowda International Airport Bengaluru . It is your guide to India's fastest growing airport.The app will help you track your flight, access and connect to a variety of airport facilities, browse through a wide range of food, beverage and shopping options amon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X