ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಬಜೆಟ್ ಅರ್ಥ ಮಾಡಿಕೊಳ್ಳುವುದು ಹೇಗೆ?

By Prasad
|
Google Oneindia Kannada News

ಭಾರತ ಒಂದು ಒಕ್ಕೂಟ ವ್ಯವಸ್ಥೆ. ಇಲ್ಲಿ ರಾಜ್ಯ ಸರ್ಕಾರಗಳೇ ಜನರ ಏಳಿಗೆಯ ನೇರ ಹೊಣೆಗಾರಿಕೆ ಹೊಂದಿವೆ. ಹೀಗಿದ್ದಾಗಲೂ ಭಾರತ ಸರ್ಕಾರದ ಬಜೆಟ್ಟಿಗೆ ಸಿಕ್ಕಷ್ಟು ಮಹತ್ವ, ಪ್ರಚಾರ ಮತ್ತು ಚರ್ಚೆ ರಾಜ್ಯ ಸರ್ಕಾರ ಮಂಡಿಸುವ ಬಜೆಟ್ಟಿಗೆ ಸಿಗುವುದಿಲ್ಲ.

ಹಾಗಿದ್ದರೆ ರಾಜ್ಯ ಸರ್ಕಾರದ ಬಜೆಟ್ ಯಾಕೆ ಮುಖ್ಯ? ಅದರಲ್ಲೇನಿದೆ? ಅದನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ರಾಜ್ಯ ಸರ್ಕಾರದ ನಿಲುವು, ನಿರ್ಧಾರಗಳನ್ನು ಜನಪರತೆಯ ಕಣ್ಣಿನಿಂದ ಅರಿಯಲು ಸಾಮಾನ್ಯ ಜನರಿಗೆ ನೆರವಾಗುವ ಉದ್ದೇಶದಿಂದ ಒಂದು ವಿಶಿಷ್ಟ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.

How to understand Karnataka Budget?

ಇದೇ ಮಾರ್ಚ್ 15ಕ್ಕೆ ಕರ್ನಾಟಕದ ಬಜೆಟ್ ಮಂಡನೆಯಾಗುತ್ತಿರುವ ಹೊತ್ತಿನಲ್ಲಿ "ಕರ್ನಾಟಕ ಬಜೆಟ್ ಅರ್ಥ ಮಾಡಿಕೊಳ್ಳುವುದು ಹೇಗೆ?" ಅನ್ನುವ ವಿಷಯದ ಬಗ್ಗೆ ಮಾತುಕತೆ@ಮುನ್ನೋಟ ಕಾರ್ಯಕ್ರಮವನ್ನು ಬೆಂಗಳೂರಿನ ಪಬ್ಲಿಕ್ ಪಾಲಿಸಿ ಥಿಂಕ್ ಟ್ಯಾಂಕ್ ಸಂಸ್ಥೆಯಾದ ತಕ್ಷಶಿಲಾದಲ್ಲಿ ಫೆಲೊ ಆಗಿರುವ ಪವನ್ ಶ್ರೀನಾಥ್ ಅವರು ನಡೆಸಿಕೊಡಲಿದ್ದಾರೆ.

ದಿನ : ಮಾರ್ಚ್ 5, ಭಾನುವಾರ
ಸಮಯ : ಸಂಜೆ 6ರಿಂದ 7.30ರ ವರೆಗೆ
ಸ್ಥಳ : ಮುನ್ನೋಟ, ನಂ. 67, ಸೌತ್ ಅವೆನ್ಯೂ ಕಾಂಪ್ಲೆಕ್ಸ್, ಡಿವಿಜಿ ರಸ್ತೆ, ನಾಗಸಂದ್ರ ಸರ್ಕಲ್ ಬಳಿ, ಬಸವನಗುಡಿ, ಬೆಂಗಳೂರು - 560 004.

ಈ ವಿಷಯ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರಿಗೂ ಅನ್ವಯವಾಗುವುದರಿಂದ ಆಸಕ್ತರು ಬಂದು ಕರ್ನಾಟಕ ಆಯವ್ಯಯ ವಿಷಯದ ಬಗ್ಗೆ ತಿಳಿದುಕೊಳ್ಳಬಹುದು ಮತ್ತು ಚರ್ಚೆಯಲ್ಲಿ ಬಾಗವಹಿಸಬಹುದು.

English summary
How to understand Karnataka Budget? Why much importance is not given to the state budget as it is given to union budget? If you are interested to know more about it, then participate in the talk program by Pavan Srinath, Fellow & faculty at Takshashila.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X