ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ನಮ್ಮ ಮೆಟ್ರೋ' ಟೋಕನ್ ಮತ್ತು ಕಾರ್ಡ್ ಪಡೆಯುವುದು ಹೇಗೆ?

|
Google Oneindia Kannada News

ಬೆಂಗಳೂರು, ಜೂನ್ 17: ಬೆಂಗಳೂರಿಗರಿಗೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ನೀಡುವುದಕ್ಕಾಗಿ, ಸುಗಮ ಸಂಚಾರದ ಅನುಭವ ನೀಡುವುದಕ್ಕಾಗಿ ನಿರ್ಮಾಣಗೊಂಡ ನಮ್ಮ ಮೆಟ್ರೋ ಮೊದಲ ಹಂತದ ಕೊನೆಯ ಹೆಜ್ಜೆ ಇಂದು (ಜೂನ್ 17) ಉದ್ಘಾಟನೆಗೊಳ್ಳುತ್ತಿದೆ.

ಬೆಂಗಳೂರಿಗರೆಲ್ಲ ನಿಜಕ್ಕೂ ಯಾವುದೋ ಹಬ್ಬ ಸ್ವಾಗತಿಸುವಷ್ಟು ಸಂಭ್ರಮದಲ್ಲಿದ್ದಾರೆ. ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿ ವರೆಗಿನ 12 ಕಿ.ಮೀ.ಮಾರ್ಗ ಇಂಮದು ಲೋಕಾರ್ಪಣೆಗೊಳ್ಳುತ್ತಿದ್ದು, ಬೆಂಗಳೂರಿನ ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ಎಲ್ಲೆಡೆಯೂ ಸದ್ಯಕ್ಕೆ ಮೆಟ್ರೋ ಸಂಚಾರ ಲಭ್ಯವಾದಂತಾಗಿದೆ.

ಬೆಂಗಳೂರಿಗರ ಹೆಮ್ಮೆಯ ನಮ್ಮ ಮೆಟ್ರೊ ಉದ್ಘಾಟನೆಗೆ ಕ್ಷಣಗಣನೆ ಬೆಂಗಳೂರಿಗರ ಹೆಮ್ಮೆಯ ನಮ್ಮ ಮೆಟ್ರೊ ಉದ್ಘಾಟನೆಗೆ ಕ್ಷಣಗಣನೆ

ಮೆಟ್ರೋ ಏನೋ ಉದ್ಘಾಟನೆಯಾಗುತ್ತದೆ. ಆದರೆ ಮೆಟ್ರೋದಲ್ಲಿ ಪ್ರಯಾಣಿಸುವವರು ಟಿಕೇಟ್ ಖರೀದಿಸುವವುದು ಹೇಗೆ? ಟಿಕೇಟಿನ ಬೆಲೆ ಎಷ್ಟಿರುತ್ತದೆ? ಮೆಟ್ರೋ ಕಾರ್ಡ್ ಖರೀದಿ ಮಾಡೋದು ಹೇಗೆ? ಅದರ ಉಪಯೋಗವೇನು? ಅದನ್ನು ರೀಚಾರ್ಜ್ ಮಾಡಿಸೋದು ಹೇಗೆ ಇದ್ಯಾದಿ ಅನುಮಾನಗಳಿಗೆ ಇಲ್ಲಿದೆ ಉತ್ತರ.

ಸೂತಕದ ಕಲೆಯೊಂದಿಗೆ ನಮ್ಮ ಮೆಟ್ರೋ -1 ಸಂಭ್ರಮಸೂತಕದ ಕಲೆಯೊಂದಿಗೆ ನಮ್ಮ ಮೆಟ್ರೋ -1 ಸಂಭ್ರಮ

ಮೆಟ್ರೋದಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಮೆಟ್ರೋ ಟೋಕನ್ ಖರೀದಿಸಲೇಬೇಕು. ಮೆಟ್ರೋ ಕಾರ್ಡ್ ಹೊಂದಿರುವವರು ಟೋಕನ್ ಖರೀದಿಸುವ ಅಗತ್ಯವಿಲ್ಲ. ಈ ಟೋಕನ್ ಪ್ರಯಾಣಿಕರು ಮೆಟ್ರೋ ಹತ್ತಿದ ಸ್ಥಳದಿಂದ ಇಳಿಯುವ ಸ್ಥಳದವರೆಗೂ ಜೊತೆಯಲ್ಲಿಯೇ ಇರಬೇಕು. ಈ ಟೋಕನ್ ಇಲ್ಲದಿದ್ದರೆ ಫ್ಲ್ಯಾಟ್ ಫಾರ್ಮಿಗೆ ಹೋಗುವುದಕ್ಕೆ ಗೇಟ್ ಓಪನ್ ಆಗೋದಿಲ್ಲ!

ಒಂದು ಟೋಕನ್ ಗೆ ಒಂದೇ ಪ್ರಯಾಣ

ಒಂದು ಟೋಕನ್ ಗೆ ಒಂದೇ ಪ್ರಯಾಣ

ಮೆಟ್ರೋ ಟಿಕೇಟ್ ಗಳು ಟೋಕನ್ ರೂಪದಲ್ಲಿರುತ್ತವೆ. ನೀವು ಒಂದು ಟೋಕನ್ ಖರೀದಿಸಿದರೆ ಒಂದು ಬಾರಿ ಮಾತ್ರ ಮೆಟ್ರೋನಲ್ಲಿ ಪ್ರಯಾಣಿಸಬಹುದು. ಈ ಟೋಕನ್ ಗಳನ್ನು ನಿರ್ಗಮನ ದ್ವಾರದ ಬಳಿ ಸಂಗ್ರಹಿಸಲಾಗುತ್ತದೆ. ನೀವು ಮೆಟ್ರೋ ಟಿಕೇಟ್ ಖರೀದಿಸಿ 30 ನಿಮಿಷದೊಳಗೆ ಪ್ರಯಾಣ ಕೈಗೊಳ್ಳಲೇ ಬೇಕು. ಇಲ್ಲವೆಂದರೆ ಟಿಕೇಟ್ ವ್ಯಾಲಿಡಿಟಿ ಕಳೆದುಕೊಳ್ಳುತ್ತದೆ. ಬಹಳ ಹೊತ್ತು ಒಂದೇ ಸ್ಟೇಶನ್ನಿನಲ್ಲಿ ನಿಂತು ವೃಥಾ ಜನಜಂಗುಳಿ ಉಂಟುಮಾಡುವುದನ್ನು ತಪ್ಪಿಸುವುದಕ್ಕಾಗಿ ಈ ಕ್ರಮ.

ಭಾರತದ ಅತೀದೊಡ್ಡ ಮೆಟ್ರೋ ನಿಲ್ದಾಣ, ನಮ್ಮ ಕೆಂಪೇಗೌಡ ಮೆಟ್ರೋ ನಿಲ್ದಾಣ!ಭಾರತದ ಅತೀದೊಡ್ಡ ಮೆಟ್ರೋ ನಿಲ್ದಾಣ, ನಮ್ಮ ಕೆಂಪೇಗೌಡ ಮೆಟ್ರೋ ನಿಲ್ದಾಣ!

ಗರಿಷ್ಠ ಆರು ಟಿಕೇಟ್

ಗರಿಷ್ಠ ಆರು ಟಿಕೇಟ್

ಒಬ್ಬ ವ್ಯಕ್ತಿ ಒಂದು ಬಾರಿಗೆ ಮೆಟ್ರೋ ಕೌಂಟರ್ ನಲ್ಲಿ ಆರಕ್ಕಿಂತ ಹೆಚ್ಚು ಟಿಕೇಟ್ ಖರೀದಿಸುವುದಕ್ಕೆ ಸಾಧ್ಯವಿಲ್ಲ. ಟೋಕನ್ ಕಳೆದುಕೊಂಡವರಿಗೆ 200 ರೂ. ಡಂಡ ವಿಧಿಸಲಾಗುತ್ತದೆ.

ಮೆಟ್ರೋ ಕಾರ್ಡ್ ಉಪಯೋಗ

ಮೆಟ್ರೋ ಕಾರ್ಡ್ ಉಪಯೋಗ

ತೀರಾ ಅಪರೂಪಕ್ಕೆ ಮೆಟ್ರೋ ಪ್ರಯಾಣ ಮಾಡುವವರು ಟೋಕನ್ ಖರೀದಿಸಬಹುದು. ಆದರೆ ದಿನಂಪ್ರತಿ ಮೆಟ್ರೋ ಪ್ರಯಾಣ ಮಾಡುವವರು ಮೆಟ್ರೋ ಕಾರ್ಡ್ ಖರೀದಿಸುವುದೇ ಅನುಕೂಲಕರ. ಒಂದು ಕಾರ್ಡ್ ಬೆಲೆ 50 ರೂ. ಈ ಕಾರ್ಡನ್ನು ಆಗಾಗ ರೀಚಾರ್ಜ್ ಮಾಡಿಕೊಂಡು ಬಳಸಬಹುದು. ಒಂದು ಪ್ರಯಾಣದ ಸಮಯದಲ್ಲಿ ನೀವು ಕಾರ್ಡ್ ಗೀರಿದರೆ ನಿಮ್ಮ ಕಾರ್ಡ್ ನಲ್ಲಿ ಎಷ್ಟು ಬಾಕಿ ಹಣವಿದೆ ಎಂಬುದನ್ನು ಅಲ್ಲಿರುವ ಸ್ಕ್ರೀನ್ ತೋರಿಸುತ್ತದೆ.

ಮೆಟ್ರೋ ಕಾರ್ಡ್ ಪಡೆಯೋದು ಹೇಗೆ?

ಮೆಟ್ರೋ ಕಾರ್ಡ್ ಪಡೆಯೋದು ಹೇಗೆ?

ಈ ಮೆಟ್ರೋ ಕಾರ್ಡ್ ಸಹ ಮೆಟ್ರೋ ಟೋಕನ್ ಸಿಗುವ ಕೌಂಟರ್ ಬಳಿಯೇ ಸಿಕ್ಕುತ್ತದೆ. ಅಥವಾ http://smartcard.bmrc.co.in/ ವೆಬ್ ಸೈಟಿನಲ್ಲಿಯೂ ಮೆಟ್ರೋ ಕಾರ್ಡ್ ಖರೀದಿಸಬಹುದು. ಮೆಟ್ರೋ ಕಾರ್ಡ್ ಅನ್ನು ಇದೇ ವೆಬ್ ಸೈಟಿನಲ್ಲಿ ರೀಚಾರ್ಜ್ ಸಹ ಮಾಡಿಕೊಳ್ಳಬಹುದು. ಆದರೆ ಅದಕ್ಕೂ ಮೊದಲು ನೀವು ಈ ವೆಬ್ ಸೈಟಿನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಮೆಟ್ರೋ ಕಾರ್ಡಿನ ಹಿಂಬದಿ ಇರುವ 11 ಅಂಕಿಯ ಸಂಖ್ಯೆಯ ಮೂಲಕ ವೆಬ್ ಸೈಟಿಗೆ ರಿಜಿಸ್ಟರ್ ಆಗಿ, ಮೆಟ್ರೋ ಕಾರ್ಡ್ ಗೆ 50 ರೂ.ನಿಂದ 1500 ರೂ.ವರೆಗೂ ರೀಚಾರ್ಜ್ ಮಾಡಿಕೊಳ್ಳಬಹುದು.

ಹೆಲ್ಪ್ ಲೈನ್

ಹೆಲ್ಪ್ ಲೈನ್

ಅಕಸ್ಮಾತ್ ಮೆಟ್ರೊ ಪ್ರಯಾಣದ ಸಮಯದಲ್ಲಾಗಲೀ, ಸ್ಟೇಶನ್ನಿನಲ್ಲಾಗಲೀ ಏನಾದರೂ ಸಮಸ್ಯೆ ಉಂಟಾದರೆ, ಅನುಮಾನವಿದ್ದರೆ ಮೆಟ್ರೋ ಹೆಲ್ಪ್ ಲೈನ್ ಸಂಖ್ಯೆ 180042512345 ಗೆ ಕರೆ ಮಾಡಬಹುದು.

English summary
Bengaluru Namma metro will be inuagurated by President of India Pranaj Mukherjee today. Here are few guidlines about how to buy Metro tokens or Metro card to travell by the Metro.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X