ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಡಿಎ ಫ್ಲ್ಯಾಟ್‌ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

|
Google Oneindia Kannada News

ಬೆಂಗಳೂರು, ಜನವರಿ 08 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 3,280 ಮನೆಗಳ ಹಂಚಿಕೆಗೆ ಅರ್ಜಿ ಆಹ್ವಾನಿಸಿದೆ. ಜನವರಿ 13 ರಿಂದ ಬ್ಯಾಂಕ್‌ಗಳಲ್ಲಿ ಅರ್ಜಿಗಳು ದೊರೆಯಲಿದ್ದು, ಆರಂಭಿಕ ಠೇವಣಿಯೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್‌ 17, 2016.

ಆಲೂರು 1ನೇ ಹಂತ, ಮಾಳಗಾಲ, ಹಲಗೆವಡೇರಹಳ್ಳಿ, ದೊಡ್ಡಬನಹಳ್ಳಿ 2ನೇ ಹಂತ, ವಲಗೇರಹಳ್ಳಿ, ಕೊಮ್ಮಘಟ್ಟ 1ನೇ ಹಂತ, ಕಣಿಮಿಣಿಕೆ 2ನೇ ಹಂತ, ವಲಗೇರಹಳ್ಳಿ 5ನೇ ಹಂತದಲ್ಲಿನ ಮನೆಗಳನ್ನು ಹಂಚಿಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

bda

ಮನೆಗಳ ವಿವರ : 1 ಬಿಎಚ್‌ಕೆಯ 1,510, 2 ಬಿಎಚ್‌ಕೆಯ 1,386 ಮತ್ತು 3 ಬಿಎಚ್‌ಕೆಯ 384 ಫ್ಲ್ಯಾಟ್‌ಗಳನ್ನು ಹಂಚಿಕೆ ಮಾಡಲು ಜನವರಿ 7ರಂದು ಬಿಡಿಎ ಅಧಿಸೂಚನೆ ಹೊರಡಿಸಿದೆ. 1 ಬಿಎಚ್‌ಕೆಯ 1,510 ಮನೆಗಳಲ್ಲಿ 568 ಮನೆಗಳನ್ನು ಆದಾಯ ಮಿತಿ 1 ಲಕ್ಷದೊಳಗಿರುವ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಿಡಲಾಗಿದೆ.

ದರಗಳು : ಆರ್ಥಿಕ ಮಿತಿ ಅನ್ವಯವಾಗದ ವರ್ಗಗಳಿಗೆ 1 ಬಿಎಚ್‌ಕೆ ಫ್ಲ್ಯಾಟ್‌ ದರವನ್ನು 11 ಲಕ್ಷದಿಂದ 13 ಲಕ್ಷ ದವರೆಗೆ ನಿಗದಿಪಡಿಸಲಾಗಿದೆ. 2 ಬಿಎಚ್‌ಕೆ ಫ್ಲ್ಯಾಟ್‌ಗಳಿಗೆ 25 ಲಕ್ಷ ಮತ್ತು 3 ಬಿಎಚ್‌ಕೆ ಫ್ಲ್ಯಾಟ್‌ಗೆ 45 ಲಕ್ಷ ದರವಿದೆ.

ಶುಲ್ಕದ ವಿವರ : ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದವರಿಗೆ ರೂ. 200, ಇತರರಿಗೆ 400 ರೂ. ಅರ್ಜಿ ಶುಲ್ಕವಿದೆ. ಪ.ಜಾ/ಪ.ವರ್ಗದವರಿಗೆ 100 ರೂ. ಮತ್ತು ಇತರರಿಗೆ 200 ರೂ. ನೋಂದಣಿ ಶುಲ್ಕ ನಿಗದಿಮಾಡಲಾಗಿದೆ.

ಫ್ಲ್ಯಾಟ್‌ಗಳಿಗೆ ಅರ್ಜಿ ಸಲ್ಲಿಸಲು ವಿವಿಧ ಬ್ಯಾಂಕ್‌ಗಳಲ್ಲಿ ಜನವರಿ 13ರಿಂದ ಅರ್ಜಿಗಳು ದೊರೆಯಲಿವೆ. ಆರಂಭಿಕ ಠೇವಣಿಯೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 17, 2016. ಹೆಚ್ಚಿನ ವಿವರಗಳಿಗಾಗಿ www.bdabangalore.org

ಅರ್ಜಿಗಳು ಎಲ್ಲಿ ಸಿಗುತ್ತವೆ? : ಕೆನರಾ ಬ್ಯಾಂಕ್ : ಬಿಡಿಎ ಶಾಖೆ, ಕುಮಾರ ಪಾರ್ಕ್ ಪಶ್ಚಿಮ.

ಕಾರ್ಪೊರೇಷನ್ ಬ್ಯಾಂಕ್ : ಇಂದಿರಾನಗರ, ಯಶವಂತಪುರ, ನಾಗರಭಾವಿ, ಕೆಂಗೇರಿ, ಕುಮಾರಪಾರ್ಕ್ ಪಶ್ಚಿಮ ಶಾಖೆಗಳು.

ಆಕ್ಸಿಸ್ ಬ್ಯಾಂಕ್ : ಬೆಂಗಳೂರು ಮೈನ್, ಎಂ.ಜಿ.ರಸ್ತೆ, ಜಯನಗರ, ಬಸವೇಶ್ವರ ನಗರ, ಯಲಹಂಕ, ಬನಶಂಕರಿ, ರಾಜಾಜಿನಗರ, ಪೀಣ್ಯ, ಸಹಕಾರ ನಗರ, ಮೆಜೆಸ್ಟಿಕ್, ಎಚ್‌ಎಸ್‌ಆರ್ ಬಡಾವಣೆ, ಶಾಂತಿನಗರ, ಕಾವೇರಿ ಭವನ, ನಾಗರಭಾವಿ, ಬಸವನಗುಡಿ, ಜೆ.ಸಿ.ರಸ್ತೆ, ಕನ್ನಿಂಗ್ ಹ್ಯಾಮ್ ರಸ್ತೆ.

ಐಸಿಐಸಿಐ ಬ್ಯಾಂಕ್ : ಬೆಂಗಳೂರು ಕಂಟೋನ್‌ಮೆಂಟ್, ಮಲ್ಲೇಶ್ವರಂ, ಎಂ.ಜಿ.ರಸ್ತೆ, ಎನ್‌.ಆರ್‌.ರಸ್ತೆ, ಬೆಳ್ಳಂದೂರು, ಇಂದಿರಾನಗರ, ಕೋರಮಂಗಲ, ಮಹದೇವಪುರ (ಹೂಡಿ), ಎಚ್.ಆರ್.ಬಿ.ಆರ್.ಬಡಾವಣೆ, ಆರ್‌.ಟಿ.ನಗರ, ಸಹಕಾರ ನಗರ, ಯಶವಂತಪುರ, ಪೀಣ್ಯ, ಚಾಮರಾಜಪೇಟೆ, ರಾಜಾಜಿನಗರ, ರಾಜರಾಜೇಶ್ವರಿ ನಗರ, ಆವೆನ್ಯೂ ರಸ್ತೆ, ಲಾಂಗ್‌ಪೋರ್ಡ್‌ ರಸ್ತೆ, ಲಾಲ್‌ ಬಾಗ್ ರಸ್ತೆ, ತಾವರೆಕೆರೆ, ವಿದ್ಯಾರಣ್ಯಪುರ, ಯಲಹಂಕ, ಭಟ್ಟರಹಳ್ಳಿ. [ಜಿಲ್ಲಾ ಕೇಂದ್ರಗಳು : ಮಂಗಳೂರು, ಮಣಿಪಾಲ್, ಮೈಸೂರು, ದಾವಣಗೆರೆ, ಹಾಸನ, ಹುಬ್ಬಳ್ಳಿ, ಧಾರವಾಡ, ತುಮಕೂರು, ಶಿವಮೊಗ್ಗ]

ಸ್ಟೇಟ್ ಬ್ಯಾಂಕ್ ಆಫ್‌ ಮೈಸೂರು : ಎಚ್.ಆರ್.ಬಿ.ಆರ್ ಲೇಔಟ್, ಗಂಗಾನಗರ, ರಾಮಮೂರ್ತಿ ನಗರ, ವೈಟ್‌ಫೀಲ್ಡ್‌, ಕಾಕ್ಸ್ ಟೌನ್, ಹನುಮಂತನಗರ, ಸಿಬಿಎಬಿ ಕಾಂಪ್ಲೆಕ್ಸ್, ವಿಜಯನಗರ, ಎಸ್‌.ಬಿ.ಎಂ.ಕಾಲೋನಿ, ರಾಜರಾಜೇಶ್ವರಿ ನಗರ, ವಿ.ವಿ.ಪುರಂ, ಬನಶಂಕರಿ 2ನೇ ಹಂತ, ಬಿಳೇಕಹಳ್ಳಿ, ಕೂಡ್ಲು, ಬಸವನಗುಡಿ, ಜಯನಗರ, ಎಂ.ಜಿ.ರಸ್ತೆ, ಮಾಧವನಗರ. [ಜಿಲ್ಲಾ ಕೇಂದ್ರಗಳು : ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ, ಶಿವಮೊಗ್ಗ, ಬಾಗಲಕೋಟೆ, ಬೆಳಗಾವಿ, ತುಮಕೂರು, ವಿಜಯಪುರ, ಗದಗ, ಹಾವೇರಿ, ಕಾರವಾರ, ಬಳ್ಳಾರಿ, ಮಂಡ್ಯ, ಮಡಿಕೇರಿ, ಮೈಸೂರು, ಉಡುಪಿ, ಚಿಕ್ಕಮಗಳೂರು, ಚಾಮರಾಜನಗರ]

ಬೆಂಗಳೂರು ಗ್ರಾಮಾಂತರ ಶಾಖೆ : ದೊಡ್ಡಬಳ್ಳಾಪುರ, ದೇವನಹಳ್ಳಿ

ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ : ಎಸ್.ಬಿ.ಮಾರ್ಕೆಟ್ ಚಿಕ್ಕಪೇಟೆ, ಜೆ.ಸಿ.ರಸ್ತೆ, ಐಟಿಪಿಎಲ್ ಕುಂದನಹಳ್ಳಿ, ಬನ್ನೇರುಘಟ್ಟ ರಸ್ತೆ, ನ್ಯೂ ಗುರುಪ್ಪನಪಾಳ್ಯ, ಡಬಲ್ ರಸ್ತೆ, ಇಂದಿರಾನಗರ, ಹಲಸೂರು

English summary
Bangalore Development Authority (BDA) issued public notification for the sale of 3,280 flats in the outskirts of the Bengaluru city, March 13, 2016 last date for submit applications.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X