ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರು ಕಳವಿನ ಕೇಸಿನ ಬೆನ್ನಟ್ಟಿದರೆ ಸಿಕ್ಕಿದ್ದು ಇಂಡೋ-ಪಾಕ್ ಪ್ರೇಮ ಕಥೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮೇ 26 : ಸುಳ್ಳು ದಾಖಲೆಗಳನ್ನು ಇರಿಸಿಕೊಂಡು ಬೆಂಗಳೂರಿನಲ್ಲಿ ವಾಸವಿದ್ದ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಗುರುವಾರ ಮೂವರು ಪಾಕಿಸ್ತಾನಿಗಳು ಹಾಗೂ ಭಾರತೀಯರೊಬ್ಬರನ್ನು ಬಂಧಿಸಿರುವುದು ಈಗಾಗಲೇ ನಿಮಗೆ ಗೊತ್ತಾಗಿರುತ್ತದೆ. ಅದೃಷ್ಟ ಏನೆಂದರೆ ಇದು ಬಹುತೇಕ ಪಾಕಿಸ್ತಾನಿಯರ ಪ್ರಕರಣದಲ್ಲಿ ಆಗುವಂತೆ ಭಯೋತ್ಪಾದನಾ ಕೃತ್ಯಕ್ಕೆ ಸಂಬಂಧಿಸಿದ್ದಲ್ಲ.

ಈ ಪ್ರಕರಣ ಭೇದಿಸಿದ್ದು ಬಹಳ ಆಸಕ್ತಿಕರವಾಗಿದೆ. ಪಾಕಿಸ್ತಾನಿಯರು ಹೀಗೆ ಬೆಂಗಳೂರಿನಲ್ಲಿದ್ದಾರೆ ಎಂಬ ಸುಳಿವು ಕೂಡ ಪೊಲೀಸರಿಗೆ ಇರಲಿಲ್ಲ. ಯಾವುದೋ ಕಾರು ಕಳವು ಪ್ರಕರಣದ ತನಿಖೆಯಲ್ಲಿ ತೊಡಗಿಕೊಂಡಿದ್ದರು. ಇನ್ನು ಪಾಕಿಸ್ತಾನಿಯರ ಹೆಸರು ಸಮೀರಾ, ಕಾಶೀಫ್ ಶಂಶುದ್ದೀನ್ ಮತ್ತು ಕಿರಣ್ ಗುಲಾಮ್ ಅಲಿ.[ಪಾಕಿಸ್ತಾನಕ್ಕೆ ಹೋಗುವುದು ಸರಳ, ವಾಪಸ್ ಬರುವುದು ಕಷ್ಟ : ಉಜ್ಮಾ]

How probe into a car theft led to the arrest of 3 Pak nationals in Bengaluru

ಮತ್ತೊಬ್ಬ ಭಾರತೀಯ ಕೇರಳ ಮೂಲದ ಮೊಹ್ಮದ್ ಶಿಹಾಬ್. ಕಾರು ಕಳವಿಗೆ ಸಂಬಂಧಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದರು. ಅದು ಶಿಹಾಬ್ ವರೆಗೆ ಕರೆದೊಯ್ದಿದೆ. ಆತನ ಬಳಿ ತಮಿಳುನಾಡು ನೋಂದಣಿಯ ಕಾರಿತ್ತು. ಆ ಕಾರು ಕಳವು ಮಾಡಿರುವುದು ಎಂಬ ಅನುಮಾನದಲ್ಲಿ ಆತನ ವಿಚಾರಣೆ ಶುರು ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ದಾಖಲೆ ಕೇಳಿದ್ದಾರೆ.[ವಿಶೇಷ ಲೇಖನ: ಅಮ್ಮ... ನಮ್ಮೆಲ್ಲರ ಬದುಕಿನ ಜೀವಂತ ಪವಾಡ!]

ಆದರೆ, ಪೊಲೀಸರಿಗೆ ಅನುಮಾನ ಆರಂಭವಾಗಿದೆ. ಆತನ ಗುರುತಿನ ಚೀಟಿ ದಾಖಲೆಗಳು ನಕಲಿ ಅನಿಸಿವೆ. ಆಗ ಆ ಮನೆಯಲ್ಲಿದ್ದ ಇತರರ ದಾಖಲೆಗಳನ್ನು ಕೇಳಿದ್ದಾರೆ. ಆಗ ಸುಳ್ಳು ದಾಖಲೆಗಳ ಸಹಾಯದಿಂದ ಅವರು ಭಾರತದಲ್ಲಿ ವಾಸವಿರುವುದು ಗೊತ್ತಾಗಿದೆ. ಜತೆಗೆ ಅವರು ನಕಲಿ ಆಧಾರ್ ಕೂಡ ಹೊಂದಿರುವುದು ತಿಳಿದುಬಂದಿದೆ.

ಇನ್ನಷ್ಟು ವಿಚಾರಣೆ ನಡೆಸಿದಾಗ ಈ ಮೂವರು ಪಾಕಿಸ್ತಾನಿಯರು ಎಂಬುದು ಬಯಲಾಗಿದ್ದು, ಮೊದಲಿಗೆ ಕೆಲವು ಮಾಧ್ಯಮಗಳು ಇವರನ್ನು ಭಯೋತ್ಪಾದಕರು ಅಂತಲೇ ವರದಿ ಮಾಡಿದ್ದವು. ಆ ನಂತರ ತಿಳಿದಿದ್ದು ಈ ನಾಲ್ವರು ಭೇಟಿಯಾಗಿದ್ದು ಕತಾರ್ ನಲ್ಲಿ. ಸಮೀರಾಳ ಜತೆ ಶಿಹಾಬ್ ಪ್ರೀತಿಯಲ್ಲಿ ಬಿದ್ದಿದ್ದ. ಪೋಷಕರು ಅವರ ಮದುವೆಗೆ ವಿರೋಧ ಮಾಡಿದ್ದರಿಂದ ಕಾನೂನು ಮುರಿಯಲು ಯತ್ನಿಸಿದ್ದರು.[ಪ್ರೀತಿಯ ಹೆಸರಲ್ಲಿ ಮೋಸ: ಮಡಿಕೇರಿಯ ಇಬ್ಬರು ನ್ಯಾಯಾಂಗ ಬಂಧನಕ್ಕೆ]

ಸಮೀರಾಳನ್ನು ಆಕೆ ಪೋಷಕರು ವಾಪಸ್ ಪಾಕಿಸ್ತಾನಕ್ಕೆ ಕರೆದೊಯ್ದಿದ್ದರು. ಆದರೂ ಈ ಜೋಡಿ ಮಧ್ಯೆ ಸಂಪರ್ಕ ಇದ್ದೇ ಇತ್ತು. ಒಂದು ದಿನ ಅವರಿಬ್ಬರು ಒಂದಾಗುವುದಕ್ಕೆ ನಿರ್ಧರಿಸಿದ್ದಾರೆ. ಆ ಹುಡುಗಿ ಹಾಗೂ ಮತ್ತೊಂದು ಪಾಕಿಸ್ತಾನಿ ಜೋಡಿಯೊಂದಿಗೆ ಭಾರತಕ್ಕೆ ಬರಲು ನಿರ್ಧರಿಸಿದ್ದಾರೆ.

ಪಾಕಿಸ್ತಾನದಿಂದ ನೇಪಾಳಕ್ಕೆ ಬಂದಿದ್ದಾರೆ. ಅಲ್ಲಿ ಅವರಿಗಾಗಿ ಕಾಯುತ್ತಿದ್ದ ಶಿಹಾಬ್ ಅವರೆಲ್ಲರನ್ನು ಬಿಹಾರಕ್ಕೆ ಕರೆತಂದು, ಅಲ್ಲಿಂದ ಬೆಂಗಳೂರಿಗೆ ಬಂದಿದ್ದಾರೆ. ಆ ನಂತರ ನಕಲಿ ದಾಖಲೆಗಳನ್ನು ಮಾಡಿಕೊಂಡಿದ್ದಾರೆ. ಆದರೆ ಗುರುವಾರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

English summary
The police had no intelligence or even a clue about the Pakistanis residing in Bengaluru. The cops were in fact investigating a car theft case. The three Pakistani nationals who were arrested have been identified by the police as Sameera, Kashif Shamshudin and Kiran Gulam Ali. The Indian citizen is Mohammed Shihab, a resident of Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X