ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗ್ಳೂರು ಈಗ ಡ್ರಗ್ ಮಾಫಿಯಾ ಡೀಲ್ ಗೆ ತಂಗುದಾಣ!

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮೇ 03: ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಮಾದಕ ದ್ರವ್ಯಗಳನ್ನು ಕಳಿಸಲು ಐಟಿ ಸಿಟಿ ಬೆಂಗಳೂರನ್ನು ತಂಗುದಾಣವನ್ನಾಗಿ ಮಾಫಿಯಾ ದೊರೆಗಳು ಬಳಸುತ್ತಿದ್ದಾರೆ ಎಂಬ ಅಂಶ ಬಹಿರಂಗವಾಗಿದೆ.

ಮುಂಬೈ, ಹೈದರಾಬಾದ್, ಕೇರಳ, ತಮಿಳುನಾಡು, ಕೇರಳ ಹಾಗೂ ಗೋವಾ ಕಡೆಯಿಂದ ಬರುವ ಸರಕುಗಳನ್ನು ಬೆಂಗಳೂರಿಗೆ ತಂದು ಇಲ್ಲಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಕಳಿಸುವ ಭೂಗತ ವ್ಯವಸ್ಥೆ ಅವ್ಯಾಹತವಾಗಿ ನಡೆದಿದೆ. ಕಳೆದ ಒಂದೂವರೆ ವರ್ಷದಿಂದ ಅನೇಕ ರೈಡ್ ಗಳನ್ನು ಮಾಡಿದ ಕರ್ನಾಟಕ ಪೊಲೀಸ್ ಪಡೆಗೆ ಡ್ರಗ್ಸ್ ಜಾಲದ ವ್ಯಾಪ್ತಿಯ ಸಂಪೂರ್ಣ ಚಿತ್ರಣ ಇದೀಗ ಸಿಗುತ್ತಿದೆ.[ನಟಿ ಮಮತಾ ಕುಲಕರ್ಣಿ ಕೂಡಾ ಡ್ರಗ್ಸ್ ದಂಧೆಯಲ್ಲಿ ಭಾಗಿ!]

ಬೆಂಗಳೂರಿನಲ್ಲಿ ಎಷ್ಟೇ ರೈಡ್ ನಡೆದರೂ ಸೆಕ್ಯುರಿಟಿ ಅಷ್ಟಾಗಿ ಬಿಗಿ ಇಲ್ಲದ ಕಾರಣ ಸುಲಭವಾಗಿ ಹೊರ ರಾಜ್ಯ ನಂತರ ಹೊರ ದೇಶಗಳಿಗೆ ರವಾನೆಯಾಗುತ್ತಿದೆ. ಅದರಲ್ಲೂ ಬೆಂಗಳೂರಿನಿಂದ ಬೆಳಗಾವಿ -ಗೋವಾ- ಮುಂಬೈ ಈಗ ಡ್ರಗ್ಸ್ ಸಾಗುವ ಹಾದಿ ಎನಿಸಿಕೊಂಡಿದೆ. ಈ ಎಲ್ಲಾ ಅಂಶಗಳು ಇತ್ತೀಚೆಗೆ ಗೋವಾದಲ್ಲಿ ನಡೆದ ತನಿಖೆಯಿಂದ ತಿಳಿದು ಬಂದಿದೆ.

Kempegowda International Airport

ಹೆಚ್ಚಿನ ಪಡೆಗೆ ಮನವಿ: ಸಿಐಎಸ್ ಎಫ್ ಪಡೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಈ ವಿಷಯವನ್ನು ತಿಳಿಸಿ, ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಗೆ ಮನವಿ ಸಲ್ಲಿಸಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈಗ ಕಳ್ಳ ಸಾಗಾಣೆಯ ರಾಜಪಥವಾಗಿದೆ.[ಮಕ್ಕಳನ್ನು ಫೆವಿಕಾಲ್, ಪೇಯಿಂಟ್ ನಿಂದ ದೂರವಿರಿಸಿ]

ಕರ್ನಾಟದಲ್ಲಿ ಕಳೆದ ಎರಡು ವರ್ಷಗಳಿಂದ ಡ್ರಗ್ಸ್ ದಂಧೆ ಬಗ್ಗೆ ಸಾಕಷ್ಟು ಸುದ್ದಿ ಬಂದಿದೆ. ಆದರೆ, ಬೆಂಗಳೂರಿನಿಂದ ಬೆಳಗಾವಿ ಮಾರ್ಗವಾಗಿ ವಿದೇಶಕ್ಕೆ ಡ್ರಗ್ಸ್ ಪೂರೈಕೆಯಾಗುವ ಬಗ್ಗೆ ಮಾಹಿತಿ ತೀರಾ ಇತ್ತೀಚೆಗೆ ತಿಳಿದು ಬಂದಿದೆ. ಗೋವಾ ಹಾಗೂ ಮುಂಬೈಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ಚಟುವಟಿಕೆ ಹೆಚ್ಚಾಗಿರುವ ಬಗ್ಗೆ ಅನುಮಾನ ಬರುವ ಸಾಧ್ಯತೆ ಕಡಿಮೆ. ಹೀಗಾಗಿ ದೇಶ, ವಿದೇಶದ ಮಾಫಿಯಾ ಕಿಂಗ್ ಗಳು ಕರ್ನಾಟಕವನ್ನು ಡ್ರಗ್ಸ್ ಪೂರೈಕೆ ಮಾರ್ಗವಾಗಿ ಬಳಸಿಕೊಳ್ಳುತ್ತಿದ್ದಾರೆ. (ಒನ್ಇಂಡಿಯಾ ಸುದ್ದಿ)

English summary
A probe in Goa which was initiated after a drug bust at an engineering college has led investigators to Karnataka. The source of the marijuana which was found on the students has its roots in Karnataka, the Goa police say while adding that the same was sourced from Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X