ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಳೆದ ಮೂರು ವರ್ಷಗಳಲ್ಲಿ ನಡೆದ ಭೀಕರ ರೈಲು ದುರಂತಗಳು

ಕಳೆದ ಮೂರು ವರ್ಷಗಳಲ್ಲಿ ಭಾರತೀಯ ರೈಲ್ವೆ ಘೋರ ರೈಲು ಅಪಘಾತಗಳನ್ನು ಎದುರಿಸಿದೆ. ಅವುಗಳಲ್ಲಿ ಹಲವು ಹಳಿತಪ್ಪಿ ದುರಂತ ಸಂಭವಿಸಿದ ಘಟನೆಗಳೇ ಹೆಚ್ಚಾಗಿವೆ.

By Prithviraj
|
Google Oneindia Kannada News

ಬೆಂಗಳೂರು, ನವೆಂಬರ್, 20: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಲೆಟ್ ಟ್ರೈನ್ ಸಂಚಾರ ಆರಂಭಿಸುವ ಕುರಿತು ಯೋಚಿಸುತ್ತಿದ್ದಾರೆ. ಆದರೆ ನಮ್ಮ ದೇಶದ ರೈಲ್ವೇ ಹಳಿಗಳೇ ಇನ್ನೂ ಸಂಪೂರ್ಣ ಸುರಕ್ಷಿತವಾಗಿಲ್ಲ.

ದೇಶದ ರೈಲ್ವೆ ಹಳಿಗಳು ಎಷ್ಟು ಸುರಕ್ಷಿತವಾಗಿವೆ ಎಂಬುದಕ್ಕೆ ಭಾನುವಾರ ನಡೆದ ಇಂದೋರ್-ಪಾಟ್ನಾ ಭೀಕರ ರೈಲು ಅಪಘಾತವೇ ಸಾಕ್ಷಿ. ಇಂತಹ ಹಲವು ರೈಲು ದುರಂತಗಳನ್ನು ದೇಶ ಕಂಡಿದೆ. ಅವುಗಳಲ್ಲಿ ಪ್ರಮುಖ ಅಪಘಾತಗಳ ಮಾಹಿತಿ ಇಲ್ಲಿದೆ.[ ಕಾನ್ಪುರ ಬಳಿ ರೈಲು ದುರಂತ, ಸಾವಿನ ಸಂಖ್ಯೆ 100ಕ್ಕೆ ಏರಿಕೆ]

Horror on tracks in India over the last 3 years

ಭುವನೇಶ್ವರ ರೈಲು ದುರಂತ: ಸೆಪ್ಟೆಂಬರ್, 30, 2016 ರಂದು ಭುವನೇಶ್ವರದಿಂದ ಭದ್ರಕ್ ಪ್ಯಾಸೆಂಜರ್ ರೈಲು ಗೂಡ್ಸ್ ಕಟಕ್ ನಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದರು. ಘಟನೆಯಲ್ಲಿ 28ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ಸಿಕಿಂದರಾಬಾದ್, ಮುಂಬೈ ದುರಂತೋ ರೈಲು ಅಪಘಾತ: ಸೆಪ್ಟೆಂಬರ್, 12, 2015ರಂದು ನಡೆದ ಸಿಕಿಂದರಾಬಾದ್- ಮುಂಬೈ ಲೋಕಮಾನ್ಯ ತಿಲಕ್ ದುರಂತೋ ಎಕ್ಸ್ ಪ್ರೆಸ್ ಕಲಬುರ್ಗಿಯಿಂದ 20 ಕಿ.ಮೀ. ದೂರದಲ್ಲಿರುವ ಮರ್ಟೂರು ರೈಲ್ವೇ ನಿಲ್ದಾಣದಲ್ಲಿ ಹಳಿ ತಪ್ಪಿ ಘೋರ ದುರಂತ ಸಂಭವಿಸಿತ್ತು. ಘಟನೆಯಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದರು. 7ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ಡೆಹ್ರಾಡೂನ್- ವಾರಣಾಸಿ ಜನತಾ ಎಕ್ಸ್ ಪ್ರೆಸ್ ದುರಂತ: ಮಾರ್ಚ್, 20 2015ರಂದು ಉತ್ತರ ಪ್ರದೇಶದ ರಾಯಲ್ ಬರೇಲಿಯಲ್ಲಿ ನಡೆದ ಡೆಹ್ರಾಡೂನ್ ವಾರಣಾಸಿ ರೈಲು ಅಫಘಾತದಲ್ಲಿ 39 ಮಂದಿ ಸಾವನ್ನಪ್ಪಿದ್ದರು. 150ಕ್ಕೂ ಅದಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ಬೆಂಗಳೂರು- ಎರ್ನಾಕುಲಂ ಇಂಟರ್ ಸಿಟಿ ಎಕ್ಸ ಪ್ರೆಸ್: ಫೆಬ್ರುವರಿ, 13, 2015ರಂದು ಬೆಂಗಳೂರಿನಿಂದ ಎರ್ನಾಕುಲಂ ಎಕ್ಸ್ ಪ್ರೆಸ್ ಗಾಡಿಯು ಬೆಂಗಳೂರಿನ ಆನೇಕಲ್ ಬಳಿ ಹಳಿತಪ್ಪಿ ಬೋಗಿಗಳು ಉರುಳಿ ಬಿದ್ದಿದ್ದವು. ಪರಿಣಾಮ ಘಟನೆಯಲ್ಲಿ 100ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ದಿಬ್ರುಘಡ ರಾಜಧಾನಿ ಎಕ್ಸ್ ಪ್ರೆಸ್ ದುರಂತ: ಜೂನ್ 25 2014ರಂದು ದಿಬ್ರುಘಡ ರಾಜಧಾನಿ ಎಕ್ಸ್ ಪ್ರೆಸ್ ರೈಲು ಗಾಡಿಯು ಬಿಹಾರದ ಚಪ್ರ ಪಟ್ಟಣದಲ್ಲಿ ಹಳಿ ತಪ್ಪಿದ ಪರಿಣಾಮ 4 ಜನ ಮೃತಪಟ್ಟು 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ಗೋರ್ಖಾಧಾಮ್ ಎಕ್ಸ್ ಪ್ರೆಸ್ ರೈಲು ದುರಂತ: ಮೇ, 26, 2014ರಂದು ಉತ್ತರ ಪ್ರದೇಶದ ಸಂತ ಕಬೀರ ನಗರ ಜಿಲ್ಲೆಯಲ್ಲಿ ಗೋರ್ಖಾಧಾಮ್ ಎಕ್ಸ್ ಪ್ರೆಸ್ ರೈಲು ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಘಟನೆಯಲ್ಲಿ 25 ಮಂದಿ ಪ್ರಾಣ ಕಳೆದುಕೊಂಡಿದ್ದರು. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ದಿವಾ ಜಂಕ್ಷನ್- ಸವಂತ್ ವಾಡಿ ಪ್ಯಾಸೆಂಜರ್ ರೈಲು ಅಪಘಾತ: ಮೇ 4, 2014ರಂದು ನಾಗತೊಣೆ ಮತ್ತು ರೋಹ ರೈಲ್ವೆ ನಿಲ್ದಾಣಗಳ ಮಧ್ಯೆ ಹಳಿ ತಪ್ಪಿದ್ದ ಈ ರೈಲು 20ಜನರನ್ನು ಬಲಿತೆಗೆದುಕೊಂಡಿತ್ತು. 100ಕ್ಕೂ ಅಧಿಕಮಂದಿ ಗಾಯಗೊಂಡಿದ್ದರು.

English summary
At a time when Prime Minister Modi speaks of bullet trains for the country, Indian railway tracks are far from being safe. The Indore-Patna express tragedy is only the latest addition to the list of horrific train accidents the country has seen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X