ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೋಟು ಬದಲಾವಣೆಗೆ ಬಂದವನ ಹಾಸ್ಯಪ್ರಜ್ಞೆ ಮೆಚ್ಚಲೇಬೇಕು

ಹಣ ಜಮೆ ಮಾಡಲು ನೀಡುತ್ತಿರುವ ಸ್ಲಿಪ್ ನಲ್ಲಿ ಹಣ ಪಾವತಿಗೆ ಕಾರಣ/ಉದ್ದೇಶ ಎಂಬ ಕಾಲಂ ಇದೆ. ಅದರಲ್ಲಿ ಈತ ಬರೆದಿರುವುದು 'ಮೋದಿ' ಅನ್ನೋ ಉತ್ತರ.

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ನವೆಂಬರ್ 12: ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆ ಸಂಗತಿಗಳನ್ನು ಓದಿ, ನೋಡಿ ದಿನಗಳೇ ಕಳೆದಿವೆ. ಕೆಲ ದಿನದಿಂದ ಸಾಮಾಜಿಕ ಜಾಲತಾಣಗಳಲ್ಲಿ ನೋಟು ರದ್ದು, ಬ್ಯಾಂಕ್-ಎಟಿಎಂಗಳ ಹೊರಗೆ ಹಣ ಪಡೆಯಲು ಸಾಲುಗಟ್ಟಿರುವ ಜನರದೇ ಸುದ್ದಿ. ಇನ್ನು ಹೊಸ 2,000 ರುಪಾಯಿ ನೋಟಿನ ಜೊತೆಗೆ ಸೆಲ್ಫಿ ತೆಗೆದುಕೊಳ್ಳುವವರಿಗೂ ಏನೂ ಕಡಿಮೆ ಇಲ್ಲ.

ಈ ಮಧ್ಯೆ ಕೆಲವು ಜೋಕುಗಳು ಹಾಗೂ ಸಾಕಷ್ಟು ವದಂತಿಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇಲ್ಲೊಂದು ಹಣ ಜಮೆ ಮಾಡುವ ಸ್ಲಿಪ್ ವೊಂದಿದೆ. ಇದನ್ನು ನೋಡಿದರೆ ನೀವು ಖಂಡಿತಾ ನಗುವನ್ನು ತಡೆದುಕೊಳ್ಳೋದಿಕ್ಕೆ ಸಾಧ್ಯವಿಲ್ಲ. ಈ ವ್ಯಕ್ತಿ ಹತ್ತು ಸಾವಿರ ರುಪಾಯಿಯನ್ನು ಬ್ಯಾಂಕ್ ನಲ್ಲಿ ಜಮೆ ಮಾಡಬೇಕು ಎಂದು ಹೋಗಿದ್ದಾರೆ.[ನೋಟು ಬದಲಿಸಲು ಬ್ಯಾಂಕಿನ ಮುಂದೆ ನಿಂತ ರಾಹುಲ್ ಗಾಂಧಿ]

Deposit slip

ಜಮೆ ಮಾಡಲು ನೀಡುತ್ತಿರುವ ಸ್ಲಿಪ್ ನಲ್ಲಿ ಹಣ ಪಾವತಿಗೆ ಕಾರಣ/ಉದ್ದೇಶ ಎಂಬ ಕಾಲಂ ಇದೆ. ಅದರಲ್ಲಿ ಈತ ಬರೆದಿರುವುದು 'ಮೋದಿ' ಅನ್ನೋ ಉತ್ತರ. ಇದೀಗ ಈ ಡಿಪಾಸಿಟ್ ಸ್ಲಿಪ್ ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸ್ಲಿಪ್ ಗಮನಿಸಿದರೆ ಬೆಂಗಳೂರಿನಲ್ಲಿ ಬಳಕೆಯಾಗಿರುವುದು ಎಂದು ಗೊತ್ತಾಗುತ್ತದೆ. ಪಿನ್ ಕೋಡ್ 560005 ಎಂದಿದೆ.[ಕೊಲ್ಲುತ್ತೇನೆಂದು ಬೆದರಿಸಿದರೂ 2 ಸಾವಿರಕ್ಕಿಂತ ಹೆಚ್ಚು ಹಣವಿಲ್ಲ]

ಇದು ಸಕತ್ ತಮಾಷೆಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಸ್ಲಿಪ್ ನ ಅಸಲಿಯಾ ಎಂಬುದು ಒನ್ ಇಂಡಿಯಾಗೆ ಖಾತ್ರಿಯಾಗಿಲ್ಲ. ಅದೇನಾದರೂ ಆಗಿರಲಿ, ನಕ್ಕು ಸುಮ್ಮನಾಗಲು ಅಡ್ಡಿಯಿಲ್ಲ. ಬ್ಯಾಂಕ್ ಹಾಗೂ ಎಟಿಎಂ ಎದುರು ನಿಂತು, ಬೇಸರವಾಗಿದ್ದರೆ ಒಂದು ಕ್ಷಣ ಇದನ್ನು ನೋಡಿ ನಗಬಹುದು

English summary
Here is a deposit slip that will crack you up. This person visited the bank to deposit Rs 10,000. In the column where he has to mention, Reason/Purpose of payment, he writes "Modi." This slip is being widely circulated on the social media. The slip from the look of it appears to have been used at Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X