ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏ.1ರಿಂದ ಏರ್‌ಪೋರ್ಟ್ ರಸ್ತೆ ಟೋಲ್ ದರ ಹೆಚ್ಚಳ

|
Google Oneindia Kannada News

ಬೆಂಗಳೂರು, ಮಾರ್ಚ್ 31 : ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 7ರ ಟೋಲ್ ದರ ಮತ್ತೆ ಹೆಚ್ಚಳವಾಗಿದೆ. ಏಪ್ರಿಲ್‌ 1ರಿಂದ ನೂತನ ದರ ಜಾರಿಗೆ ಬರಲಿದೆ. 2014ರ ಮೇ ನಲ್ಲಿ ಟೋಲ್ ದರ ಹೆಚ್ಚಳದ ವಿರುದ್ಧ ಭಾರೀ ಪ್ರತಿಭಟನೆ ನಡೆದಿತ್ತು.

ನವಯುಗ ಸಂಸ್ಥೆ ದೇವನಹಳ್ಳಿ ಮೂಲಕ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 7ರ ಟೋಲ್‌ ಸಂಗ್ರಹ ಮಾಡುತ್ತಿದೆ. ಏ.1ರಿಂದ ಅನ್ವಯವಾಗುವಂತೆ ಟೋಲ್ ದರವನ್ನು ಹೆಚ್ಚಳ ಮಾಡಲು ಸಂಸ್ಥೆ ನಿರ್ಧರಿಸಿದ್ದು, 5 ರಿಂದ 10 ರೂ. ತನಕ ದರ ಏರಿಕೆಯಾಗಲಿದೆ. [ಟೋಲ್ ಸಮಸ್ಯೆ : ಕೇಂದ್ರದತ್ತ ಕೈ ತೋರಿದ ಸರ್ಕಾರ]

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ನವಯುಗ ಸಂಸ್ಥೆ ಟೋಲ್ ದರವನ್ನು ಹೆಚ್ಚಳ ಮಾಡುವ ಕುರಿತು ಮಾತುಕತೆ ನಡೆಸಿದ್ದು, ದರ ಹೆಚ್ಚಳ ಮಾಡಲು ಒಪ್ಪಿಗೆ ನೀಡಲಾಗಿದೆ. ಏ.1ರಿಂದ ನೂತನ ಟೋಲ್ ದರಗಳು ಜಾರಿಗೆ ಬರಲಿವೆ. [ವಿಮಾನ ನಿಲ್ದಾಣ ರಸ್ತೆಯ ಟೋಲ್ ದರ ಹೆಚ್ಚಳ]

Toll

ಪ್ರತಿಭಟನೆ ನಡೆದಿತ್ತು : 2014ರ ಮೇ 3ರಂದು ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಟೋಲ್ ಶುಲ್ಕವನ್ನು ಏರಿಕೆ ಮಾಡಲಾಗಿತ್ತು. ಶುಲ್ಕವನ್ನು 2 ರಿಂದ 3 ಪಟ್ಟು ಹೆಚ್ಚಳ ಮಾಡಿರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿತ್ತು. ಶುಲ್ಕ ಹೆಚ್ಚಳ ವಿರೋಧಿಸಿ ಸರಣಿ ಪ್ರತಿಭಟನೆಗಳು ನಡೆದಿದ್ದವು. [ಟೋಲ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ]

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಟ್ಯಾಕ್ಸಿ, ಟೋಲ್ ಸುತ್ತ-ಮುತ್ತಲಿನ ಹಳ್ಳಿಗಳ ಜನರಿಗೆ ಸಹಾಯಕವಾಗಲು ಮಾಸಿಕ ಪಾಸ್ ವಿತರಣೆ ಮಾಡಲಾಗುತ್ತದೆ. ಆದರೆ, ಟೋಲ್ ದರ ಇಳಿಕೆ ಕುರಿತು ಕೇಂದ್ರ ಸರ್ಕಾರವೇ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿತ್ತು.

Toll Fee

ಆಗ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ದೇವನಹಳ್ಳಿ ರಸ್ತೆಯ ಟೋಲ್ ದರವನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ್ ಕುಮಾರ್ ಕೇಂದ್ರ ಭೂ ಸಾರಿಗೆ ಸಚಿವ ಆಸ್ಕರ್ ಫರ್ನಾಂಡೀಸ್ ಅವರಿಗೆ ಪತ್ರ ಬರೆದಿದ್ದರು.

ಟೋಲ್ ದರಗಳ ಪಟ್ಟಿ
ಕಾರು, ಜೀಪ್, ವ್ಯಾನ್ - 80 ರಿಂದ 120 ರೂ. (ಹಿಂದಿನ ದರ 75 ರಿಂದ 115 ರೂ.)
ಮಿನಿ ಬಸ್, ಲಘು ವಾಹನ - 120 ರಿಂದ 180 ರೂ. (ಹಿಂದಿನ ದರ 115 ರಿಂದ 175 ರೂ.)
ಬಸ್, ಲಾರಿ - 240 ರಿಂದ 365 ರೂ. (ಹಿಂದಿನ ದರ 235 ರಿಂದ 355 ರೂ.)
ಭಾರೀ ಗಾತ್ರದ ವಾಹನಗಳು - 480 ರಿಂದ 720 ರೂ. (ಹಿಂದಿನ ದರ 475 ರಿಂದ 705 ರೂ.)

English summary
Navayuga Devanahalli Tollway Pvt Ltd (NDTL) hiked toll charges in Kempegowda International Airport road of NH-07. New rates will come to effect form April 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X