ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಮಳೆಯ ಹೊಡೆತಕ್ಕೆ ಸೆಕ್ಯೂರಿಟಿ ಗಾರ್ಡ್ ಬಲಿ

|
Google Oneindia Kannada News

ಬೆಂಗಳೂರು, ಏ.23 : ಗುರುವಾರ ಸಂಜೆ 7 ಗಂಟೆಯಿಂದ ಸುಮಾರು 1 ಗಂಟೆ, ಆಲಿಕಲ್ಲು ಸಹಿತ ಸುರಿದ ಭಾರೀ ಮಳೆಗೆ ಓರ್ವ ಬಲಿಯಾಗಿದ್ದು, ಸಂಚಾರ ದಟ್ಟಣೆ, ವಿದ್ಯುತ್ ಕಡಿತದಿಂದಾಗಿ ನಗರ ಜೀವನ ಅಸ್ತವ್ಯಸ್ತವಾಗಿದೆ. ಮಳೆ ನಿಂತಿದ್ದರೂ ಜನರು ಮನೆ ಸೇರಲು ಪರದಾಡುತ್ತಿದ್ದಾರೆ.

ಗೊರಗುಂಟೆಪಾಳ್ಯದಲ್ಲಿರುವ ಶಬರಿ ಎಂಟರ್ಪ್ರೈಸಸ್‌ಗೆ ಸೇರಿದ ಗೋದಾಮಿನ ಬೃಹತ್ ಗಾತ್ರದ ಗೋಡೆ ಕುಸಿದು ಸೆಕ್ಯೂರಿಟಿ ಗಾರ್ಡ್ ಮುನಿ ವೆಂಕಟಪ್ಪ (45) ಅಸುನೀಗಿದ್ದಾನೆ. ಏಳು ಅಡಿ ಎತ್ತರ, ನಲವತ್ತು ಅಡಿ ಉದ್ದವಿರುವ ಗೋಡೆ ಬಿದ್ದಿದ್ದರಿಂದ ಹತ್ತಕ್ಕೂ ಹೆಚ್ಚು ಬೈಕುಗಳು ಕೂಡ ಜಖಂ ಆಗಿವೆ.

ನಗರದ ಎಲ್ಲ ಕಡೆಗಳಲ್ಲಿಯೂ ಮಳೆ ಸುರಿದಿದೆ. ಜೀವನಭೀಮಾ ನಗರದಲ್ಲಿ ಭಾರೀ ಮರ ವಿದ್ಯುತ್ ಕಂಬದ ಮೇಲೆ ಬಿದ್ದಿದ್ದರಿಂದ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಭಾರೀ ಗಾಳಿಗೆ ಹಲವಾರು ಕಡೆಗಳಲ್ಲಿ ಮರಗಳು ಬುಡಮೇಲಾಗಿವೆ.

ಬುಧವಾರದಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣವಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ತುಂತುರು ಮಳೆ ಬಂದಿತ್ತು. ಗುರುವಾರ ಬೆಳಗ್ಗಿನಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣವಿತ್ತು. ಸಂಜೆ 7 ಗಂಟೆಯ ವೇಳೆಗೆ ಮಳೆ ಆರಂಭವಾಯಿತು. [ಈ ಬಾರಿಯ ಮುಂಗಾರಿಗೂ ಎಲ್ ನಿನೋ ಕಾಟ]

Rain

ಗುರುವಾರದ ಕೆಲಸ ಮುಗಿಸಿ ಕಚೇರಿಯಿಂದ ಮನೆಗೆ ಹೊರಟವರಿಗೆ ಮಳೆ ಅಡ್ಡಿ ಉಂಟುಮಾಡಿತು. ಭಾರೀ ಮಳೆಯಿಂದಾಗಿ ರಕ್ಷಿಸಿಕೊಳ್ಳಲು ಬೈಕ್ ಸವಾರರು ಫ್ಲೈ ಓವರ್ ಕೆಳಗೆ ಆಶ್ರಯ ಪಡೆದರು. ಯಶವಂತಪುರ, ಮತ್ತಿಕೆರೆ, ಹೆಬ್ಬಾಳ, ಮೆಜೆಸ್ಟಿಕ್, ರಾಜಾಜಿನಗರ, ಜಯನಗರ, ರಿಚ್‌ಮಂಡ್ ಸರ್ಕಲ್ ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಜೊತೆಗೆ ಆಲಿಕಲ್ಲು ಬೀಳುತ್ತಿವೆ.

Heavy rain

ಮಳೆಯೊಂದಿಗೆ ಭಾರೀ ಗಾಳಿ ಬೀಸುತ್ತಿದೆ. ಆದ್ದರಿಂದ ಮರದ ಕೆಳಗೆ ವಾಹನಗಳನ್ನು ನಿಲ್ಲಿಸಬೇಡಿ ಎಂದು ಸಂಚಾರಿ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ನಗರದ ಪ್ರಮುಖ ರಸ್ತೆಗಳು ಜಲಾವೃತವಾಗಿದ್ದು ಪಾದಚಾರಿಗಳು ಮತ್ತು ಸವಾರರು ಸಿಕ್ಕಿ ಹಾಕಿಕೊಂಡಿದ್ದಾರೆ.

road

ಕಾರು ಜಖಂ : ಭಾರೀ ಮಳೆಯಿಂದಾಗಿ ಮರ ಉರುಳಿ ಬಿದ್ದು ಎರಡು ಕಾರು ಮತ್ತು 2 ಬೈಕ್ ಜಖಂಗೊಂಡ ಘಟನೆ ನಂದಿನಿ ಲೇಔಟ್‌ನಲ್ಲಿ ನಡೆದಿದೆ. ಮಾರತಹಳ್ಳಿ ಬಳಿ ಮರ ಬಿದ್ದು ಮೂರು ಕಾರುಗಳು ಜಖಂಗೊಂಡಿವೆ. ಶಿವಾನಂದ ಸರ್ಕಲ್ ಬಳಿ ರಸ್ತೆ ವಿಭಜಕಕ್ಕೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ.

Heavy Rain in all corner of the Bengaluru city captured in our Traffic surveillance Cameras installed at junctions....

Posted by Bengaluru Traffic Police on Thursday, April 23, 2015

English summary
Bangaloreans had a tough time on April 23, Thursday evening as rain lashed the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X