ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

In Pics: 'ಸ್ವಾತಂತ್ರ್ಯ'ದ ಸವಿ ಕಸಿದ ಬೆಂಗಳೂರು ಮಳೆ

ಅಗಾಧ ಮಳೆಯಿಂದಾಗಿ ಬೆಂಗಳೂರು ಜನಜೀವನ ಅಸ್ತವ್ಯಸ್ತ. ಹಲವಾರು ಕಡೆ ಮನೆಗಳಿಗೆ ನೀರು, ಬಿದ್ದ ಮರ, ಟ್ರಾಫಿಕ್ ಬಂದ್.

|
Google Oneindia Kannada News

ಆಗಸ್ಟ್ 14ರ ಮದ್ಯರಾತ್ರಿಯಿಂದ ಆಗಸ್ಟ್ 15 ಬೆಳಗ್ಗೆವರೆಗೂ ಸುರಿದ ಭಾರೀ ಮಳೆಯಿಂದಾಗಿ, ಬೆಂಗಳೂರಿನ ಜನಜೀವನ ಅಸ್ತವ್ಯಸ್ತವಾಗಿದೆ. ಸುಮಾರು 174 ಮಿಲಿ ಮೀಟರ್ ಗಳಷ್ಟು ಮಳೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಶಾಂತಿನಗರ, ವಿಲ್ಸನ್‌ ಗಾರ್ಡನ್‌, ಡೈರಿ ಸರ್ಕಲ್‌, ಮಡಿವಾಳ, ಎಲೆಕ್ಟ್ರಾನಿಕ್‌ ಸಿಟಿ, ಸಿಲ್ಕ್ ಬೋರ್ಡ್‌, ಬೊಮ್ಮನಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಧಾರಕಾರ ಮಳೆ ಸುರಿಯುತ್ತಿದೆ. ಭಾರಿ ಮಳೆಯಿಂದಾಗಿ ಮಾರ್ಗ ಮದ್ಯದಲ್ಲಿಯೇ ನೂರಾರು ವಾಹನಗಳು ಕೆಟ್ಟು ನಿಂತಿವೆ. ತಗ್ಗು ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ತೀವ್ರವಾಗಿ ಪರದಾಡುವಂತಾಗಿದೆ.

ಹಲವಾರು ರಸ್ತೆಗಳು ಜಲಾವೃತವಾಗಿದ್ದು, ನಗರದ ಹಲವಾರು ಭಾಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಅಲ್ಲದೆ,ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅಲ್ಲಿನ ಜನರ ನೆಮ್ಮದಿ ಹಾಳುಗೆಡವಿದೆ.

ಕೋರಮಂಗಲದಲ್ಲಿ ಎಸ್ ಟಿ ಬೆಡ್ ಬಡಾವಣೆಯಲ್ಲಿ ಮನೆಗಳಲ್ಲಿ ಮಾತ್ರವಲ್ಲ ಮುಖ್ಯ ರಸ್ತೆಗಳು, ಅಡ್ಡರಸ್ತೆಗಳು - ಹೀಗೆ ಎಲ್ಲೆಲ್ಲೂ ನೀರು ನಿಂತು ಭಾರೀ ತೊಂದರೆಯಾಗಿದೆ. ಎಲ್ಲೆಲ್ಲೂ ನೆರೆ ಹಾವಳಿ ಉಂಟಾದಂತೆ ಭಾಸವಾಗುತ್ತಿದೆ. ಈ ಪ್ರದೇಶದಲ್ಲಿ 5 ಅಡಿಯಷ್ಟು ನೀರು ನಿಂತಿದೆ.

ನಗರದ ಕೆಲವಾರು ಪ್ರದೇಶಗಳಲ್ಲಿ ಮಳೆಯಿಂದಾಗಿ ಆದ ಅವಗಢ, ಸಂಚಾರ ವ್ಯತ್ಯಯಗಳ ಛಾಯಾಚಿತ್ರಗಳು ಇಲ್ಲಿ ನಿಮಗಾಗಿ....
(ಚಿತ್ರ ಕೃಪೆ: ಬೆಂಗಳೂರು ಟ್ರಾಫಿಕ್ ಪೊಲೀಸ್ ಟ್ವಿಟ್ಟರ್ ಖಾತೆ)

ಧರೆಗುರುಳಿದ ಮರ

ಧರೆಗುರುಳಿದ ಮರ

ನಂದಿದುರ್ಗದ ರಸ್ತೆಯಲ್ಲಿ ಧರೆಗೆ ಉರುಳಿದ ಮರ. ಆಗಸ್ಟ್ 14ರ ರಾತ್ರಿ ಸುರಿದ ಬೃಹತ್ ಮಳೆಯಿಂದಾಗಿ, ಈ ಹಳೆಯ ಮರ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು.

ಪಾಸ್ ಪೋರ್ಟ್ ಕಚೇರಿ ರಸ್ತೆ ಜಲಾವೃತ

ಪಾಸ್ ಪೋರ್ಟ್ ಕಚೇರಿ ರಸ್ತೆ ಜಲಾವೃತ

ಇದು ಕೋರಮಂಗಲದ 80 ಅಡಿ ರಸ್ತೆ. ಇಲ್ಲಿರುವ ಪಾಸ್ ಪೋರ್ಟ್ ಕಚೇರಿಯ ಕಡೆಗೆ ಹೋಗದಂತೆ ಇಲ್ಲಿ ನೀರು ತುಂಬಿಕೊಂಡಿದೆ.
(ಚಿತ್ರ ಕೃಪೆ - ಚೌಡಪ್ಪ ಆರ್.ವಿ. )

ನಿಧಾನ ಟ್ರಾಫಿಕ್

ನಿಧಾನ ಟ್ರಾಫಿಕ್

ವರ್ತೂರಿನ ಕೋಫಿ ಸೇತುವೆ ಬಳಿ ಕಂಡುಬಂದ ದೃಶ್ಯವಿದು. ಮಳೆ ನೀರು ನಿಂತ ಕಾರಣದಿಂದಾಗಿ, ಇಲ್ಲಿ ಟ್ರಾಫಿಕ್ ನಿಧಾನವಾಗಿ ಸರಿಯುತ್ತಿತ್ತು.

ಬಿಬಿಎಂಪಿ ಸಹಾಯದಿಂದ ಮರ ತೆರವು

ಬಿಬಿಎಂಪಿ ಸಹಾಯದಿಂದ ಮರ ತೆರವು

ಇದು ಆಡುಗೋಡಿಯ ಬಳಿಯಿರುವ ಕೋರಮಂಗಲ ಕ್ಲಬ್ ರಸ್ತೆಯಲ್ಲಿ ನೆಲಕ್ಕುರುಳಿದ ಮರದ ಚಿತ್ರ. ಬಿಬಿಎಂಪಿಯ ಸಹಾಯದಿಂದ ಈ ಮರವನ್ನು ತೆರವುಗೊಳಿಸಲಾಯಿತು.

ಟ್ವೀಟ್ ಮಾಡಿದ ಪೊಲೀಸರು

ಟ್ವೀಟ್ ಮಾಡಿದ ಪೊಲೀಸರು

ಇದು ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಫುಟ್ ಪಾತ್ ಮೇಲೆ ಬಿದ್ದ ಮರ. ಈ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದ ಸಿಟಿ ಮಾರ್ಕೆಟ್ ಪೊಲೀಸರು ಸ್ವಲ್ಪ ಹೊತ್ತಿನವರೆಗೆ ಈ ಪಾದಚಾರಿ ರಸ್ತೆಯಲ್ಲಿ ಅಡ್ಡಾಡದಿರಲು ಮನವಿ ಮಾಡಿದ್ದರು.

ಉರುಳಿದ ಮರದ ತೆರವು

ಉರುಳಿದ ಮರದ ತೆರವು

ನಂದಿದುರ್ಗ ರಸ್ತೆಯಲ್ಲಿ ಉರುಳಿದ ಮರ ಹೀಗೆ ರಸ್ತೆಯಲ್ಲಿ ಬಿದ್ದುಕೊಂಡಿತ್ತು. ಬಿಬಿಎಂಪಿಯ ಅರಣ್ಯ ಇಲಾಖೆ ಸಿಬ್ಬಂದಿ ಇದರ ತೆರವಿನಲ್ಲಿ ನಿರತವಾಗಿರುವುದು.

ಹೆದರಿದ ವಾಹನ ಸವಾರರು

ಹೆದರಿದ ವಾಹನ ಸವಾರರು

ಇದು ಧೋಬಿಘಾಟ್ ಬಳಿ ಕಂಡು ಬಂದ ದೃಶ್ಯ. ಈ ರಸ್ತೆಯಲ್ಲಿ ಸಾಗಿದರೆ, ಅದೆಲ್ಲಿ ತಗ್ಗು ಅಥವಾ ಚರಂಡಿ ಅಥವಾ ಮ್ಯಾನ್ ಹೋಲ್ ಗಳಿವೆಯೋ ಎಂದು ಹೆದರಿ, ಈ ರಸ್ತೆಗೆ ಜನರು ಸಾಗಲು ಹೆದರಿದ್ದರು.

English summary
Heavy rain has disturbed the citizens of every walk in Bengaluru, leading a great distruss.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X