ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಟಿ ವೃತ್ತಿಪರರ ತಲೆಗೂದಲು ಹೆಚ್ಚು ಉದುರಲು ಕಾರಣವೇನು?

ಅಧಿಕ ಒತ್ತಡದಿಂದ ಶೇ 75% ರಷ್ಟು ಐಟಿ ವೃತ್ತಿಪರರು ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗೆಂದು ಹೇರ್‍ಲೈ ನ್ ಇಂಟರ್ ನ್ಯಾಷನಲ್ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

By Ramesh
|
Google Oneindia Kannada News

ಬೆಂಗಳೂರು, ಅಕ್ಟೋಬರ್. 21: ಅಧಿಕ ಒತ್ತಡದಿಂದ 25 ರಿಂದ 35 ರ ವಯೋಮಾನದ ಶೇ. 85 ರಷ್ಟು ಯುವಕ ಮತ್ತು ಯುವತಿಯರು ಕೂದಲು ಉದುರುವಿಕೆಯಿಂದ ಬಳಲುತ್ತಿದ್ದಾರೆ. ಹೀಗೆಂದು ಹೇರ್‍ಲೈ ನ್ ಇಂಟರ್ ನ್ಯಾಷನಲ್ ರೀಸರ್ಚ್ ಸೆಂಟರ್ ನಡೆಸಿದ ಸಮೀಕ್ಷೆಯಲ್ಲಿ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

2014 ರ ಆಗಸ್ಟ್‍ನಿಂದ 2016 ರ ಜುಲೈವರೆಗೆ ಹೇರ್‍ಲೈನ್ ಇಂಟರ್ ನ್ಯಾಷನಲ್ ರೀಸರ್ಚ್ ಅಂಡ್ ಟ್ರೀಟ್ ಮೆಂಟ್ ಸೆಂಟರ್ ಬೆಂಗಳೂರಿನಲ್ಲಿರುವ ತನ್ನ 6 ಘಟಕಗಳಲ್ಲಿ ಈ ಅಧ್ಯಯನ ನಡೆಸಿದೆ. ಈ ಎರಡು ವರ್ಷದ ಅವಧಿಯಲ್ಲಿ 1000 ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಶೇ. 80 ರಷ್ಟು ಮಂದಿ ಹದಿಹರಯದಲ್ಲೇ ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುವುದು ಅಧ್ಯಯನದಲ್ಲಿ ದೃಢಪಟ್ಟಿದೆ.[ಹೇರ್ ಅಲರ್ಜಿಗೆ ಹೇರ್ ಲೈನ್ ಇಂಟರ್ ನ್ಯಾಷನಲ್ ನೀಡುತ್ತಿದೆ ಪರಿಹಾರ]

Hair

ಶೇ, 65 ರಷ್ಟು ಜನರು ವಂಶಪಾರಂಪರ್ಯದ ಹಿನ್ನೆಲೆಯಲ್ಲಿ ಕೂದಲು ಉದುರುವಿಕೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ಈ ಅಧ್ಯಯನದ ಬಗ್ಗೆ ಮಾತನಾಡಿದ ಹೇರ್‍ಲೈ ನ್ ಇಂಟರ್ ನ್ಯಾಷನಲ್‍ ನ ಡರ್ಮಟೋಸರ್ಜನ್ ಡಾ.ಪ್ರೇಮಲತ ಅವರು, "ಅಧಿಕ ಒತ್ತಡ ಮತ್ತು ಆಯಂಡ್ರೋಜೆನೆಟಿಕ್ ಅಲೋಪೆಸಿಯಾ(ಎಜಿಎ)ದಿಂದ ಕೂದಲು ಉದುರುತ್ತಿವೆ ಎಂಬುದು ಅಧ್ಯಯನದಿಂದ ಸಾಬೀತಾಗಿದೆ.

ಎಜಿಎ ಅಧಿಕ ಒತ್ತಡಕ್ಕೆ ಕಾರಣವಾಗಲಿದ್ದು ಇದು ಕೂದಲು ಉದುರುವಿಕೆ ಜತೆಜತೆಯಲ್ಲಿಯೇ ಚಯಾಪಚಯ ರೋಗಗಳಿಗೆ ನಾಂದಿ ಹಾಡುವ ಸಾಧ್ಯತೆಗಳಿವೆ" ಎಂದು ಎಚ್ಚರಿಕೆ ನೀಡಿದರು.

ಈ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿದ ಹೇರ್‍ಲೈ ನ್ ಇಂಟರ್ ನ್ಯಾಷನಲ್ ಹೇರ್ ಅಂಡ್ ಸ್ಕಿನ್ ಕ್ಲಿನಿಕ್‍ ನ ಸಂಸ್ಥಾಪಕಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಬನಿ ಆನಂದ್ ಅವರು, ನಾವು ರೋಗಿಗಳಿಗೆ ನೀಡುತ್ತಿರುವ ಎಲ್ಲಾ ಚಿಕಿತ್ಸೆಗಳು ಗುಣಮಟ್ಟದ ಸಂಶೋಧನೆಯನ್ನು ಆಧರಿಸಿರುತ್ತವೆ.

ಇಂತಹ ಸಂಶೋಧನೆಗಳು ನಮ್ಮ ಚಿಕಿತ್ಸಾ ವಿಧಾನಗಳನ್ನು ಉತ್ತಮಗೊಳಿಸಲು ನೆರವಾಗುತ್ತವೆ. ಈ ಮೂಲಕ ರೋಗಿಗಳ ಜೀವನಶೈಲಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ಎಜಿಎಯ ಬಹುತೇಕ ಪ್ರಕರಣಗಳಲ್ಲಿ ಪರಿಧಮನಿಯ ಹೃದಯ ಸಂಬಂಧಿ ಕಾಯಿಲೆಗಳು, ಬೊಜ್ಜು, ಹಾರ್ಮೋನ್ ಸಂಬಂಧಿತ ರೋಗಗಳಂತಹ ಚಯಾಪಚಯ ಕ್ರಿಯೆಗಳಲ್ಲಿ ಸಮಸ್ಯೆಗಳು ಕಂಡುಬಂದಿವೆ. ಎಜಿಎ ಸಮಸ್ಯೆಯಿಂದ ಬಳಲುತ್ತಿರುವವರನ್ನು ನಿರಂತರವಾಗಿ ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ ಅಧಿಕ ಒತ್ತಡ ಇರುವುದು ದೃಢಪಟ್ಟಿದೆ.

ಈ ಅಧ್ಯಯನದಿಂದ ಎರಡು ಬಗೆಯ ಲಾಭವಿದೆ. ಇದರಿಂದ ಬರುವ ಫಲಿತಾಂಶದಿಂದ ವೈದ್ಯರು ರೋಗಿಗಳಿಗೆ ಸೂಕ್ತವಾದ ಚಿಕಿತ್ಸೆ ನೀಡಬಹುದಾಗಿದೆ. ಎರಡನೆಯದಾಗಿ, ಅಧಿಕ ಒತ್ತಡದಿಂದ ಪಾರಾಗಿ ಉತ್ತಮ ಜೀವನ ಸಾಗಿಸಲು ಅಗತ್ಯವಾದ ಜೀವನಶೈಲಿಯನ್ನು ರೂಢಿಸಿಕೊಳ್ಳುವಂತೆ ರೋಗಿಗಳಿಗೆ ವೈದ್ಯರು ಸಲಹೆ ನೀಡಲು ಇದು ನೆರವಾಗುತ್ತದೆ.

English summary
85% of patients in the age group of 25-30 years suffering from hair loss are hypertensive. of theses over 75% of individuals are from the IT sector and lead a sendentary life. these are some of the alarming results of a research by Hairline International Research Center which show that hair loss.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X