ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಣ್ಣಿನ ಸುರಕ್ಷತಾ ಸಲಹೆಗಾಗಿ 'ವಿಶ್ವದೃಷ್ಟಿ ದಿನ'

By Vanitha
|
Google Oneindia Kannada News

ಬೆಂಗಳೂರು, ಅಕ್ಟೋಬರ್, 07 : ಕಣ್ಣು ಮಾನವನ ಸೂಕ್ಷ್ಮಾತಿಸೂಕ್ಷ್ಮ ಅಂಗ. ಇದು ಕೊಂಚ ಮಸುಕಾದರೂ ಸಾಕು ಮಾನವನಿಗೆ ಏನೋ ಕಳೆದುಕೊಂಡಂತೆ ಭಾಸವಾಗಲು ಶುರುವಾಗುತ್ತದೆ. ಹಾಗಾಗಿ ಕಣ್ಣಿನ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಸರ್ಕಾರವು 'ವಿಶ್ವ ದೃಷ್ಟಿ ದಿನ-2015' ಆಚರಿಸಲು ನಿರ್ಧರಿಸಿದೆ.

ವಿಶ್ವದೃಷ್ಟಿ ದಿನವನ್ನು 'ವಿಷನ್ 2020 : ದ ರೈಟ್ ಟು ಸೈಟ್-ಇಂಡಿಯಾ' ಎಂಬ ಶೀರ್ಷಿಕೆ ಅಡಿಯಲ್ಲಿ ಅಕ್ಟೋಬರ್ 8ರ ಬೆಳಿಗ್ಗೆ 7.30 ರಿಂದ 9 ಗಂಟೆವರೆಗೆ ಕಬ್ಬನ್ ಪಾರ್ಕ್ ಬಳಿಯ ಪ್ರೆಸ್ ಕ್ಲಬ್ ನಲ್ಲಿ ಆಚರಿಸಲಾಗುತ್ತಿದೆ. ಮುಖ್ಯ ಅತಿಥಿಗಳಾಗಿ ಆರೋಗ್ಯ ಸಚಿವರಾದ ಯುಟಿ ಖಾದರ್ ಆಗಮಿಸಲಿದ್ದಾರೆ.[ಕಬ್ಬನ್ ಪಾರ್ಕಿನಲ್ಲಿ 1 ಕಪ್ ಕಾಫಿಗೆ 100 ರು]

Government should organize World Sight Day-2015 in Bengaluru on thursday.

ದಿನದಿಂದ ದಿನಕ್ಕೆ ದೃಷ್ಟಿ ದೋಷ ಹಾಗೂ ಹುಟ್ಟು ಕುರುಡಿಗೆ ಒಳಗಾಗುವವರ ಸಂಖ್ಯೆ ಅಧಿಕವಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಸಲ್ಲಿಸಿದ 2010ರ ವರದಿಯ ಪ್ರಕಾರ 285 ಮಿಲಿಯನ್ ಜನರು ದೃಷ್ಟಿದೋಷಕ್ಕೆ ತುತ್ತಾಗಿದ್ದಾರೆ. 39 ಮಿಲಿಯನ್ ಜನ ಕುರುಡುತನಕ್ಕೆ ಒಳಗಾಗಿದ್ದಾರೆ. ಭಾರತದಲ್ಲಿ 80% ರಷ್ಟು ಕುರುಡರಿದ್ದಾರೆ ಎಂದು ಹೇಳಿದೆ

ಹೆಚ್ಚಿನ ಮಾಹಿತಿಗಾಗಿ ಶ್ರೀದೇವಿ ಸುಂದರ್ ರಾಜನ್ 9999454312/ 9811604312 ಹಾಗೂ ಕಾರ್ಯಕ್ರಮ ಅಧಿಕಾರಿಯಾದ ಡಾರ್ವಿನ್ ಮೋಸಸ್ 9986978550 ಸಂಪರ್ಕಿಸಬಹುದು.

English summary
Government should organize World Sight Day-2015 in Press club, Cubbon Park, Bengaluru on Thursday 8th October, at 7.30 a.m to 9 a.m. Health Minister UT Khader is the Chief Guest in these function.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X