ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೌಶಲ್ಯ ವೃದ್ಧಿ ಸ್ವಾವಲಂಬನ್ ಯೋಜನಾ ಮಾರ್ಗಸೂಚಿ ಪ್ರಕಟ

By Vanitha
|
Google Oneindia Kannada News

ಬೆಂಗಳೂರು, ಅಕ್ಟೋಬರ್, 07 : ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ, ಕೌಶಲ್ಯತೆಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರ 'ಸ್ವಾವಲಂಬನ್' ಯೋಜನೆ ರೂಪಿಸಿತ್ತು. ಇದೀಗ ಮಾರ್ಗಸೂಚಿ ಪ್ರಕಟಿಸಿದ್ದು, ವಿದ್ಯಾರ್ಥಿಗಳಿಗೆ ಸಂತಸ ತಂದಿದೆ.

ಸರ್ಕಾರಿ ಹೊಸ ಉದ್ದಿಮೆ ಆರಂಭಿಸಲು ಮುಂದಾದಲ್ಲಿ ಈ ಯೋಜನೆ ಅಡಿಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಸಂದಾಯವಾಗಲಿದ್ದು, ವಾರ್ಷಿಕ 10 ಲಕ್ಷ ರೂ ವರೆಗಿನ ಸಾಲದ ಮೇಲಿರುವ ಬಡ್ಡಿಯನ್ನು 3 ವರ್ಷದವರೆಗೆ ಸರ್ಕಾರವೇ ಭರಿಸಲಿದೆ. ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳನ್ನು ಖಾಸಗಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಕೌಶಲ್ಯದ ಎದುರು ಎತ್ತರಿಸಲು ಈ ನಿರ್ಧಾರಕ್ಕೆ ಬಂದಿದ್ದಾರೆ.[ಕರ್ನಾಟಕದಲ್ಲಿ ಯಾವ ಸಂಸ್ಥೆ ಎಲ್ಲೆಲ್ಲಿ, ಎಷ್ಟು ಹೂಡಿಕೆ?]

Government intimate Svavalamban Yojana for government degree students

ಈ ಯೋಜನೆಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಾಗ ಗ್ರಾಮೀಣ ಹಾಗೂ ನಗರ ವಿದ್ಯಾರ್ಥಿಗಳು ಎಂದು ವಿಂಗಡಿಸಲಾಗುತ್ತದೆ ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ ಶಂಕರಪ್ಪ ಹೇಳಿದರು.

ಸ್ವಾವಲಂಬನ್ ಯೋಜನೆಯ ನಿಯಮಾವಳಿಗಳೇನು?

* ಈ ಯೋಜನೆಗೆ ಅರ್ಹವಾಗಲು ವಿದ್ಯಾರ್ಥಿ ಸರ್ಕಾರಿ ಕಾಲೇಜಿನಲ್ಲಿಯೇ ಯಾವುದಾದರೂ ಪದವಿ ಪಡೆದಿರಬೇಕು

* ಪ್ರಥಮ ಮತ್ತು ದ್ವಿತೀಯ ಪದವಿಯಲ್ಲಿ 50% ನಷ್ಟು ಅಂಕ ಗಳಿಸಿರಬೇಕು

* ಉದ್ದಿಮೆ ಆರಂಭಿಸುವ ಯೋಜನಾ ವರದಿಯ ಸಂಪೂರ್ಣ ವಿವರವನ್ನು ಪ್ರಸ್ತಾವನೆಯೊಂದಿಗೆ ಕಾಲೇಜಿನ ಪ್ರಾಂಶುಪಾಲರಿಗೆ ಸಲ್ಲಿಸಬೇಕು

* ಬೆಂಗಳೂರು ಕಾಲೇಜುಗಳಿಂದ ಸಲ್ಲುವ ಪ್ರಸ್ತಾವನೆಗಳು ಎಫ್ ಕೆಸಿಸಿಐ (Federation of Karnataka Chambers of Commerce and Industry), ಇತರೆ ಕೈಗಾರಿಕಾ ಸಂಸ್ಥೆಗಳಿಂದ ಯೋಜನಾ ವರದಿ ದೃಢಿಕರಣಗೊಂಡಿರಬೇಕು.

* ಜಿಲ್ಲಾಮಟ್ಟದಿಂದ ಸಲ್ಲಿತವಾಗುವ ಯೋಜನೆಗಳು ಜಿಲ್ಲಾ ಕೈಗಾರಿಕಾ ಸಂಸ್ಥೆಗಳಿಂದ ದೃಢಿಕರಣಗೊಳ್ಳಬೇಕು.

English summary
Government decide increase Industrial skills for Government degree college students. So Government intimate Svavalamban Yojana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X