ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ವಿಟ್ಟರ್ ನಲ್ಲಿ ಆರಂಭವಾಗಿದೆ ಗೋರಕ್ಷಣೆಯ ಗೋಕ್ರಾಂತಿ

ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ರಾಮಚಂದ್ರಾಪುರ ಮಠ #GouKranti ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಗೋಕ್ರಾಂತಿಯನ್ನು ಆರಂಭಿಸುತ್ತಿದೆ. ಇದೊಂದು ಸಾತ್ವಿಕ ಕ್ರಾಂತಿ. ಕಾಮಧೇನು ರಕ್ಷಣೆಗೆ ಒಂದು ಅಳಿಲುಸೇವೆಯಷ್ಟೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮೇ 22: ಗೋರಕ್ಷಣೆಗಾಗಿ ಸದಾ ಮುಂದಿರುವ ರಾಮಚಂದ್ರಾಪುರ ಮಠ ಇತ್ತೀಚೆಗಷ್ಟೇ#GiveUpAMeal ಎಂಬ ಆನ್ ಲೈನ್ ಅಭಿಯಾನವೊಂದನ್ನು ಆರಂಭಿಸಿರುವ ಬಗ್ಗೆ ನೀವು ಒನ್ ಇಂಡಿಯಾದಲ್ಲಿ ಓದಿರುತ್ತೀರಿ. ದಿನವೂ ಒಂದು ಹೊತ್ತಿನ ಊಟ ಬಿಟ್ಟು, ಅದರಲ್ಲಿ ಉಳಿಸುವ ಹಣವನ್ನು ಗೋ ರಕ್ಷಣೆಗಾಗಿ ದಾನ ಮಾಡುವ ಈ ವಿಭಿನ್ನ ಅಭಿಯಾನಕ್ಕೆ ಎರಾಜ್ಯದ ಹಲವೆಡೆಯಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು.

ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ರಾಮಚಂದ್ರಾಪುರ ಮಠ #GouKranti ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಗೋಕ್ರಾಂತಿಯನ್ನು ಆರಂಭಿಸುತ್ತಿದೆ. ಇದೊಂದು ಸಾತ್ವಿಕ ಕ್ರಾಂತಿ. ಕಾಮಧೇನು ರಕ್ಷಣೆಗೆ ಒಂದು ಅಳಿಲುಸೇವೆಯಷ್ಟೆ. ಒಂದು ಹೊತ್ತಿನ ಊಟ ಬಿಡುವುದಷ್ಟೇ ಅಲ್ಲದೆ, ಗೋರಕ್ಷಣೆಗೆ ಪ್ರತಿಯೊಬ್ಬ ವ್ಯಕ್ತಿಯೂ ಇನ್ನೇನು ಮಾಡಬಹುದು ಎಂಬುದನ್ನು ಚಿಂತಿಸಿಸದ ಶ್ರೀಮಠ ಏಳು ಸಲಹೆಗಳನ್ನು ಸೂಚಿಸಿದೆ. ಗೋವಿನ ಕುರಿತು ಕಾಳಜಿ, ಪ್ರೀತಿ ಇರುವವರು ಈ ಸಪ್ತ ಸಲಹೆಗಳನ್ನು ಸ್ವ ಇಚ್ಛೆಯಿಂದ ಪಾಲಿಸಬಹುದು.[ಉಪವಾಸವಿರುವ ಗೋರಕ್ಷಣೆಗಾಗಿ ಒಪ್ಪೊತ್ತಿನ ಊಟ ಬಿಡಿ]

ಮೇವು-ನೀರಿಲ್ಲದೆ ಸಾಯುತ್ತಿರುವ ಗೋವುಗಳ ರಕ್ಷಣೆ ಮಾತ್ರವಲ್ಲದೆ, ಬೇಸಿಗೆ ಮುಗಿದ ಮೇಲೂ ಗೋವುಗಳ ರಕ್ಷಣೆಯ ಕುರಿತು ಚಿಂತಿಸುವ ಅಗತ್ಯವಿದೆ. ಗೋಹತ್ಯೆ ಮಾಡುವವರ ವಿರುದ್ಧ ಗೋಕಿಂಕರರಾಗಿ ಹೋರಾಡುವ ಉದ್ದೇಶ ಗೋಕ್ರಾಂತಿಯದ್ದು. ಟ್ವಿಟ್ಟರ್ ನಲ್ಲಿ ಈಗಾಗಲೇ ಈ ಕುರಿತು ಚರ್ಚೆ ಎದ್ದಿದ್ದು, ಗೋಕ್ರಾಂತಿಯ ಸಪ್ತ ಸಲಹೆಗಳು ನಿಮಗಾಗಿ ಇಲ್ಲಿವೆ.

ಮನೆಗೆ ಒಂದು ಹಸುವಾದರೂ ಇರಲಿ

ಇಂದು ನಗರ ಪ್ರದೇಶಗಳಲ್ಲಿ ಬಿಡಿ, ಗ್ರಾಮೀಣ ಪ್ರದೇಶಗಳಲ್ಲೇ ಗೋವುಗಳನ್ನು ಸಾಕುವವರು ಸಿಗುತ್ತಿಲ್ಲ. ಮೇವಿನ ಕೊರತೆ, ಕೂಲಿಗಳ ಕೊರತೆ, ನೀರಿನ ಕೊರತೆ ಎಲ್ಲವೂ ಸೇರಿ ಗೋವುಗಳನ್ನು ಸಾಕುವ ಯೋಚನೆಯನ್ನೇ ಬಿಡುವಂತೆ ಮಾಡಿದೆ. ಈ ಎಲ್ಲ ಕಾರಣಗಳಿಂದ ಇಂದು ಗ್ರಾಮೀಣ ಪ್ರದೇಶಗಳಲ್ಲೂ ಗೂವು ಕಾಣುತ್ತಿಲ್ಲ. ಅದಕ್ಕೆಂದೇ ಮನೆಗೆ ಕನಿಷ್ಠ ಒಂದಾದರೂ ಹಸುವಮನ್ನು ಸಾಕುವ ಸಲಹೆಯನ್ನು ಗೋಕ್ರಾಂತಿ ಮೂಲಕ ನೀಡಲಾಗಿದೆ.

ಗೋಪಾಲಕರಿಗಿರಲಿ ನಮ್ಮ ಬೆಂಬಲ

ಗೋಶಾಲೆಯಲ್ಲಿರುವ ಗೋವೇ ಆಗಲಿ, ಮನೆಯಲ್ಲಿ ಸಾಕಿದ ಗೋವೇ ಆಗಿರಲಿ, ಅವುಗಳ ಪಾಲನೆಯ ಹೊಣೆ ಹೊತ್ತವರನ್ನು ಬೆಂಬಲಿಸಲು ಕೋರಲಾಗಿದೆ.[ಕಾಮಧೇನು ರಕ್ಷಣೆಗೆ ನೀವು ಹೇಗೆ ಕೈಜೋಡಿಸಬಹುದು?]

ಗೋಧನವನ್ನು ಕೂಡಿಡಿ

ಗೋಧನ ಎಂಬ ಪಿಗ್ಗಿಬ್ಯಾಂಕ್ ಮಾಡಿಕೊಡಂಡು ಪ್ರತಿದಿನ ನಿಮಗೆ ಸಾಧ್ಯವಾದಷ್ಟು ಹಣವನ್ನು ಅದರಲ್ಲಿ ಹಾಕಿ, ಆ ಹಣವನ್ನು ಗೋರಕ್ಷಣೆಗೆ ಮೀಸಲಿಡಲು ಸಲಹೆ ನೀಡಲಾಗಿದೆ.

ಗವ್ಯ ಉತ್ಪನ್ನಗಳನ್ನೇ ಬಳಸಿ

ಗೋಮೂತ್ರ ಮತ್ತಿತರ ಗವ್ಯ ಉತ್ಪನ್ನಗಳಿಂದ ತಯಾರಿಸುವ ಉತ್ಪನ್ನಗಳನ್ನೇ ಬಳಸುವ ಮೂಲಕ, ಪ್ರೋತ್ಸಾಹ ನೀಡುವಂತೆಯೂ ಕೋರಲಾಗಿದೆ. ಈಗಾಗಲೇ ಗೋವಿನ ಉತ್ಪನ್ನಗಳು ಮನುಷ್ಯನ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತವೆ ಎಂಬುದು ಅಧ್ಯಯನಗಳಿಂದ ದೃಡವಾಗಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.[ರಾಮಚಂದ್ರಾಪುರ ಮಠದ ಗೋರಕ್ಷಣಾ ಅಭಿಯಾನಕ್ಕೆ ಬಿಎಸ್ ವೈ ಬೆಂಬಲ]

ಈ ಉತ್ಪನ್ನಗಳನ್ನು ನಿಷೇಧಿಸಿ

ಗೋವನ್ನು ಸಾಯಿಸಿ ತಯಾರಿಸಲಾಗದ ಗೋಮಾಂಸ, ಗೋವಿನ ಚರ್ಮದ ಚಪ್ಪಲಿ, ಬೆಲ್ಟ್ ಮುಂತಾದವುಗಳನ್ನು ತೊರೆಯಿರಿ. ಅಂಥವುಗಳನ್ನು ಕೊಳ್ಳುವ ಮೂಲಕ ಗೋಹತ್ಯೆಗೆ ಪರೋಕ್ಷ ಬೆಂಬಲ ನೀಡಬೇಡಿ ಎಂದು ಕಳಕಳಿಯಲ್ಲಿ ಬೇಡಲಾಗಿದೆ.

ಗೋಕಿಂಕರರಾಗಿ

ಗೋರಕ್ಷಣೆಗಾಗಿ ನೀವೇ ಸ್ವಇಚ್ಛೆಯಿಂದ ಗೋಕಿಂಕರರಾಗಿ ಎಂದೂ ಶ್ರೀಮಠದ ಭಕ್ತರು ಮನವಿ ಮಾಡಿದ್ದಾರ.[ಸರ್ಕಾರ ಮತ್ತು ಮಠದ ಕಾರ್ಯವೈಖರಿಯ ವ್ಯತ್ಯಾಸ ವಿವರಿಸಿದ ರಾಘವೇಶ್ವರ ಶ್ರೀ]

ಅಭಯಾಕ್ಷರಕ್ಕೆ ಸಹಿ ನೀಡಿ

ಗೋ ಹತ್ಯೆಮಾಡುವವರ ವಿರುದ್ಧ ಸರ್ಕಾರಕ್ಕೆ ದೂರು ನೀಡುವ ಮತ್ತು ಗೋಹತ್ಯೆ ನಿಷೇಧಕ್ಕೆ ಸರ್ಕಾರವನ್ನು ಒತ್ತಾಯಿಸುವ 'ಅಭಯಾಕ್ಷರ'ಕ್ಕೆ ಎಲ್ಲರೂ ಸಹಿ ನೀಡುವಂತೆಯೂ ಕೇಳಿಕೊಳ್ಳಲಾಗಿದೆ.

{promotion-urls}

English summary
The devotees of Ramachandrapr Math have again started an online campaign to save cows. They give 7 sugestions to follow voluntarily by every individual. Here are the twitter reaction about the 7 sugestions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X